Dharmasthala ದಲ್ಲಿ ನೇತ್ರಾವತಿಗೆ ಹಾರಲು ವಿಫಲ ಯತ್ನ ಮಾಡಿದ ಯುವತಿ! ನಂತರ ಅಪಾರ್ಟ್‌ಮೆಂಟಿನಿಂದ ಹಾರಿ ಆತ್ಮಹತ್ಯೆ!!

Bengaluru death news student commits suicide by jumped from the apartment

Share the Article

Bengaluru: ಯುವತಿಯೋರ್ವಳು ಧರ್ಮಸ್ಥಳಕ್ಕೆ (Dharmasthala) ಬಂದು, ನೇತ್ರಾವತಿ ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ನಂತರ ಬಚಾವಾಗಿದ್ದು, ಇದೀಗ ಅದೇ ಯುವತಿ ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ವೊಂದರಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದೆ.

ಜ್ಞಾನಭಾರತಿಯ ಜ್ಞಾನಜ್ಯೋತಿ ನಗರ ನಿವಾಸಿ ವಿಜಯಲಕ್ಷ್ಮೀ (17) ಎಂಬಾಕೆಯೇ ಮೃತ ಯುವತಿ. ಈಕೆ ವಿದ್ಯಾರ್ಥಿನಿಯಾಗಿದ್ದು, ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಲೆಂದು ಈ ಹಿಂದೆ ಧರ್ಮಸ್ಥಳಕ್ಕೆ ಬಂದಿದ್ದಳು ಎನ್ನಲಾಗಿದೆ. ನೇತ್ರಾವತಿ ನದಿ ನೀರಿಗೆ ಹಾರಿದ್ದು, ಆ ಸಮಯದಲ್ಲಿ ಸ್ಥಳೀಯರು ಆಕೆಯನ್ನು ರಕ್ಷಣೆ ಮಾಡಿದ್ದರು. ನಂತರ ಆಕೆಯ ಪೋಷಕರಿಗೆ ಫೋನ್‌ ಮಾಡಿ ಮಾಹಿತಿ ನೀಡಿದ್ದರು.

ಅನಂತರವೂ ಆಕೆ ಮನಸ್ಸು ಬದಲಾಯಿಸದೇ, ಇದೀಗ ಬ್ಯಾಟರಾಯನಪುರದ ಬ್ರೈಡ್‌ ಅಪಾರ್ಟ್‌ಮೆಂಟ್‌ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ(Bengaluru). ಕಳೆದ ಒಂದು ವರ್ಷದಿಂದ ಖಿನ್ನತೆಗೊಳಗಾಗಿದ್ದ ಯುವತಿ ಇದೇ 19ನೇ ತಾರೀಕಿನಂದು ಕಾಲೇಜಿಗೆ ಹೋಗುವುದಾಗಿ ಹೋಗಿದ್ದಾಗಿ ವರದಿಯಾಗಿದೆ. ನಂತರ 21ರಂದು ಸಾವನ್ನಪ್ಪಿದ್ದಾಳೆ. ಆಕೆ ಅಲ್ಲಿಯವರೆಗೂ ಎಲ್ಲಿಗೆ ಹೋಗಿದ್ದಳು ಎಂಬ ಮಾಹಿತಿ ತಾಯಿಗೆ ಇರಲಿಲ್ಲ. ಸ್ನೇಹಿತರ ಜೊತೆ ಹೋಗಿರಬಹುದು ಎಂದು ತಾಯಿ ಭಾವಿಸಿದ್ದರು. ನಂತರ ಅಂದರೆ ಒಂದು ದಿನದ ಬಳಿಕ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದರು. ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ಮಿಸ್ಸಿಂಗ್‌ ಕಂಪ್ಲೆಂಟ್‌ ದಾಖಲಾಗಿತ್ತು.

ಇದನ್ನೂ ಓದಿ: Optical Illusion: ಪಿಲ್ಲರ್‌ ಅಥವಾ ಮನುಷ್ಯ, ಮೊದಲು ಕಂಡಿದ್ದು ಯಾವುದು? ನಿಮ್ಮ ವ್ಯಕ್ತಿತ್ವ ಇದರಿಂದ ತಿಳಿಯುತ್ತೆ!!!

Leave A Reply