Canada visa service Ban: ಕೆನಡಾ ವೀಸಾ ಸೇವೆ ಕಂಪ್ಲೀಟ್ ಸ್ಥಗಿತ – ಇನ್ನು ಇವರಿಗೂ ಇಲ್ಲ ಪ್ರವೇಶ !! ದಿಟ್ಟ ನಿರ್ಧಾರ ಕೈಗೊಂಡ ಭಾರತ

National news India suspends Canada's visa service bans entry of citizens

Canada visa service Ban: ಈಗಾಗಲೇ ಖಲಿಸ್ತಾನ್ ಪರ ಹರ್ದೀಪ್ ಸಿಂಗ್ ನಿಜ್ಜರ್ ಅವರನ್ನು ಭಾರತ ಹತ್ಯೆ ಮಾಡಿದೆ ಎಂದು ಕೆನಡಾದ ಪ್ರಧಾನಿ ಆರೋಪಿಸಿದಾಗ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಯಿತು. ಇದೀಗ ಭಾರತ ಮತ್ತು ಕೆನಡಾ ನಡುವಿನ ಉದ್ವಿಗ್ನತೆ ಸರಿಹೋಗದ ನಿಟ್ಟಿನಲ್ಲಿ ಕೆನಡಾ ವಿಸಾ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ (Canada visa service Ban) .

ಆದರೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸುವ ಬಗ್ಗೆ ಯಾವುದೇ ಔಪಚಾರಿಕ ಪ್ರಕಟಣೆ ಬಂದಿಲ್ಲ. ಅಲ್ಲದೆ ಕೆನಡಾದಲ್ಲಿ ವೀಸಾ ಅರ್ಜಿ ಕೇಂದ್ರವನ್ನು ನಡೆಸುತ್ತಿರುವ ಇಂಟರ್ನ್ಯಾಷನಲ್ ಈ ನಿಟ್ಟಿನಲ್ಲಿ ತನ್ನ ಕೆನಡಾದ ವೆಬ್ ಸೈಟ್ ನಲ್ಲಿ ಸಂದೇಶವನ್ನು ಪೋಸ್ಟ್ ಮಾಡಿದೆ. “ಬಾರತೀಯ ಮಿಷನ್ನಿಂದ ಪ್ರಮುಖ ಮಾಹಿತಿ: ಕಾರ್ಯಾಚರಣೆಯ ಕಾರಣಗಳಿಂದಾಗಿ, ಭಾರತೀಯ ವೀಸಾ ಸೇವೆಗಳನ್ನು ಗುರುವಾರದಿಂದ (ಸೆಪ್ಟೆಂಬರ್ 21, 2023) ಮುಂದಿನ ಸೂಚನೆ ಬರುವವರೆಗೆ ಸ್ತಗಿತಗೊಳಿಸಲಾಗಿದೆ” ಎಂದು ಸಂದೇಶದಲ್ಲಿ ತಿಳಿಸಲಾಗಿದೆ.

ಒಟ್ಟಿನಲ್ಲಿ ಕೆನಡಾಕ್ಕೆ ಹೋಗುವ ಭಾರತೀಯ ನಾಗರಿಕರು ಜಾಗರೂಕರಾಗಿರಬೇಕು ಎಂದು ವಿದೇಶಾಂಗ ಸಚಿವಾಲಯವು ಈ ಹಿಂದೆ ಸಲಹೆ ನೀಡಿತ್ತು. ಭಾರತ ವಿರೋಧಿ ಘಟನೆಗಳು ನಡೆದ ಅಥವಾ ಇದು ಸಂಭವಿಸುವ ಸಾಧ್ಯತೆ ಇರುವ ಯಾವುದೇ ಪ್ರದೇಶಕ್ಕೆ ಹೋಗಬೇಡಿ. ಕೆನಡಾದಲ್ಲಿ ದ್ವೇಷದ ಅಪರಾಧ ಹೆಚ್ಚಾಗಿದೆ ಮತ್ತು ಅಲ್ಲಿಗೆ ಹೋಗುವಾಗ ಜಾಗರೂಕರಾಗಿರಿ ಎಂದು ತಿಳಿಸಿದೆ. ಕೆನಡಾದಲ್ಲಿರುವಾಗ ಭಾರತವು ತನ್ನ ನಾಗರಿಕರಿಗೆ “ಅತ್ಯಂತ ಎಚ್ಚರಿಕೆ ವಹಿಸಿ” ಎಂದು ಎಚ್ಚರಿಸಿದೆ ಮತ್ತು ಅವರ ಸುರಕ್ಷತೆಗೆ ಅಪಾಯವಿದೆ ಎಂದು ಹೇಳಿದೆ.

ಇದನ್ನೂ ಓದಿ: ಟೈಲ್ಸ್, ಗ್ರಾನೈಟ್ ಮೇಲೆ ಎಣ್ಣೆ ಅಥವಾ ಜಿಡ್ಡು ಪದಾರ್ಥಗಳೇನಾದರು ಚೆಲ್ಲಿದೆಯಾ? ಹಾಗಿದ್ರೆ ಇಲ್ಲಿದೆ ನೋಡಿ ಸ್ವಚ್ಛಗೊಳಿಸುವ ಸುಲಭ ವಿಧಾನ

Leave A Reply

Your email address will not be published.