

Burqas Ban: ಕಳೆದ ಕೆಲ ತಿಂಗಳ ಹಿಂದಷ್ಟೇ ಕರ್ನಾಟಕ(Karnataka)ಹಾಗೂ ಮಹಾರಾಷ್ಟ್ರದಲ್ಲಿನ ಹಿಜಾಬ್(Hijab)ವಿವಾದ ಭುಗಿಲೆದ್ದು , ದೊಡ್ದ ಮಟ್ಟದಲ್ಲಿ ಸಂಚಲನ ಮೂಡಿಸಿದ್ದು ಯಾರು ಮರೆಯಲು ಸಾಧ್ಯವಿಲ್ಲ. ಇದೀಗ, ಸಾರ್ವಜನಿಕ ಸ್ಥಳಗಳಲ್ಲಿ ಕೆಲವು ಮುಸ್ಲಿಮ್ ಮಹಿಳೆಯರು ಹಿಜಾಬ್, ಬುರ್ಖಾ( Burqas) ಧರಿಸಿ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಸ್ವಿಜರ್ಲ್ಯಾಂಡ್ ನಲ್ಲಿ ಹಿಜಾಬ್ ಗೆ ನಿಷೇಧ( Burqas Ban) ಹೇರುವ ವಿಧೇಯಕ್ಕೆ ಅಸ್ತು ಎಂದಿದ್ದು, ಹೀಗಾಗಿ ಸ್ವಿಟ್ಜರ್ ಲ್ಯಾಂಡ್ (Switzerland) ನ ಪಾರ್ಲಿಮೆಂಟ್ ಹಿಜಾಬ್ ನಿಷೇಧಕ್ಕೆ ಬುಧವಾರ (ಸೆ.20) ಅಂಗೀಕಾರ ನೀಡಿದೆ.
ಸ್ವಿಟ್ಜರ್ ಲ್ಯಾಂಡ್ ನಿಷೇಧ ಕಾಯ್ದೆ ಜಾರಿ ಮಾಡುವ ಮೂಲಕ ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲೂ ಮೂಗು, ಬಾಯಿ ಹಾಗೂ ಕಣ್ಣು ಮುಚ್ಚುವ ಹಿಜಾಬ್ ಧರಿಸಲು ನಿಷೇಧ ಹೇರಿದೆ. ಪೂರ್ಣ ಪ್ರಮಾಣದ ಬುರ್ಖಾ ಧರಿಸುವ ಪದ್ಧತಿ ಸ್ವಿಟ್ಜರ್ ಲ್ಯಾಂಡ್ ನಲ್ಲಿಲ್ಲ. ಇದರ ಜೊತೆಗೆ ಬೆಲ್ಚಿಯಂ, ಫ್ರಾನ್ಸ್ ದೇಶಗಳು ಹಿಜಾಬ್ ನಿಷೇಧ ಹೇರಿದಂತೆ ನಾವೂ ಕೂಡಾ ಕೆಲವು ಮಾನದಂಡಗಳನ್ನು ಜಾರಿಗೊಳಿಸಿರುವ ಬಗ್ಗೆ ಸ್ವಿಟ್ಜರ್ ಲ್ಯಾಂಡ್ ತಿಳಿಸಿದೆ.
ಈ ಮೊದಲೇ ಪಾರ್ಲಿಮೆಂಟ್ ನ ಮೇಲ್ಮನೆಯಲ್ಲಿ ಹಿಜಾಬ್ ನಿಷೇಧದ ವಿಧೇಯಕಕ್ಕೆ ಸ್ವಿಟ್ಜರ್ ಲ್ಯಾಂಡ್ ನ ಬಲಪಂಥೀಯ ಆಡಳಿತದ ಪೀಪಲ್ಸ್ ಪಕ್ಷವು ಅಂಗೀಕಾರ ಸ್ವೀಕರಿಸಿತ್ತು. ಸ್ವಿಸ್ ನ್ಯಾಷನಲ್ ಕೌನ್ಸಿಲ್ ನಲ್ಲಿ ವಿಧೇಯಕಕ್ಕೆ 151-29ರ ಅನುಪಾತದಲ್ಲಿ ಮತ ಚಲಾವಣೆಯೊಂದಿಗೆ ಅಂಗೀಕಾರ ಪಡೆಯಲಾಗಿರುವ ಕುರಿತಂತೆ ವರದಿಯಾಗಿದೆ. ಹಿಜಾಬ್ ನಿಷೇಧದ ವಿಧೇಯಕಕ್ಕೆ ಕೆಳಮನೆಯಲ್ಲಿ ಅಂಗೀಕಾರ ದೊರೆಕುವ ಮುಖಾಂತರ ಇನ್ಮುಂದೆ ಇದು ಫೆಡರಲ್ ಕಾನೂನು ಆಗಿ ಜಾರಿಯಾಗಲಿದ್ದು, ಒಂದು ವೇಳೆ ಕಾನೂನು ಉಲ್ಲಂಘಿಸಿ ಹಿಜಾಬ್ ಅಥವಾ ಬುರ್ಖಾ ಧರಿಸಿದರೆ 1,100 ಡಾಲರ್ ವರೆಗೆ ದಂಡ ವಿಧಿಸಲಾಗುವುದು ಎಂದು ಸ್ವಿಸ್ ಸರ್ಕಾರ ಸೂಚನೆ ನೀಡಿದೆ.
ಇದನ್ನೂ ಓದಿ: Cauvery Issue: ಕಾವೇರಿ ನೀರು ವಿವಾದ – ಕರ್ನಾಟಕಕ್ಕೆ ಬಿಗ್ ಶಾಕ್ ಕೊಟ್ಟ ಸುಪ್ರೀಂ !! ತಮಿಳುನಾಡಿಗೆ ನಿತ್ಯವೂ ನೀರು













