Maani: ದಾರಿಯಲ್ಲಿ ಹೋಗುವಾಗ ರಸ್ತೆ ಬದಿ ಕಸ ಎಸೆದ ವಾಹನ ಸವಾರರು – ನಂತರ ಆದದ್ದೇನು ಗೊತ್ತಾ?!!

Share the Article

Waste Disposal: ಉಪ್ಪು ತಿಂದವನು ನೀರು ಕುಡಿಯಲೇ ಬೇಕು. ಒಂದು ಸಾರಿ ತಪ್ಪು ಮಾಡಿ ತಪ್ಪಿಸಿದ ಕಳ್ಳ ಮತ್ತೊಂದು ಬಾರಿ ಸಿಕ್ಕಲೇ ಬೇಕು. ಅಂತೆಯೇ ಸ್ವಚ್ಛತೆ ಬಗ್ಗೆ ಎಷ್ಟು ತಿಳಿ ಹೇಳಿದರೂ ನಾಗರಿಕರು ಅದನ್ನು ಅರ್ಥ ಮಾಡಿಕೊಳ್ಳದೇ, ಕಾನೂನಿಗೆ ವಿರುದ್ಧವಾಗಿ ಎಲ್ಲೆಂದರಲ್ಲಿ ಕಸ ಬಿಸಾಡುವುದು (Waste Disposal) ಅಲ್ಲಲ್ಲಿ ಕಾಣಬಹುದು.

ಆದರೆ ಇದೀಗ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ತ್ಯಾಜ್ಯ ಎಸೆಯುತ್ತಿದ್ದ ವಾಹನವೊಂದನ್ನು ತಡೆದು ನಿಲ್ಲಿಸಿದ ಘಟನೆ ಮಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಣಿ ಮೈಸೂರು ರಸ್ತೆಯಲ್ಲಿ ನಡೆದಿದ್ದು, ಭಾರಿ ದಂಡವನ್ನು ವಿಧಿಸಲಾಗಿದೆ.

ಹೌದು, ಘನ ವಾಹನದಲ್ಲಿ ಬಂದು ಹೆದ್ದಾರಿಯ ಬದಿಯಲ್ಲಿ ರಾಶಿ ರಾಶಿ ತ್ಯಾಜ್ಯ ಎಸೆಯುತ್ತಿದ್ದ ವಾಹನವೊಂದನ್ನು ತಡೆದು ನಿಲ್ಲಿಸಿ, ಎಸೆದ ತ್ಯಾಜ್ಯವನ್ನು ಮತ್ತೆ ಅದೇ ವಾಹನಕ್ಕೆ ಹಾಕಿಸಿ, ವಾಹನ ಚಾಲಕನಿಗೆ ಮಾಣಿ ಪಂಚಾಯತ್ ವತಿಯಿಂದ ದಂಡ ವಿಧಿಸಿದ ಮಾಹಿತಿ ಬೆಳಕಿಗೆ ಬಂದಿದೆ. ಇನ್ನಾದರೂ ಇಂತಹ ಘಟನೆಗಳು ನಡೆಯದಂತೆ ಇಂತಹ ನೇರ ನಿದರ್ಶನಗಳು ಮಾದರಿಯಾಗಲಿದೆ.

Leave A Reply

Your email address will not be published.