Chaitra Kundapura: ಚೈತ್ರಾ ಕುಂದಾಪುರ ನಮ್ಮವಳಲ್ಲ!! ಇದ್ದಕ್ಕಿದ್ದಂತೆ ಹೊಸ ಬಾಂಬ್ ಸಿಡಿಸಿದ ವಿಶ್ವ ಹಿಂದೂ ಪರಿಷತ್

chaitra kundapura fraud case vishwa hindu parishad sharan pumpwell declared big statement

Chaitra Kundapura Fraud Case: ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ನೀಡುವುದಾಗಿ ನಂಬಿಸಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬುವವರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಎದುರಿಸುತ್ತಿರುವ ಕರಾವಳಿ ಮೂಲದ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ತಮ್ಮ ಪ್ರಖರ ಮಾತಿನಿಂದ ಹೆಚ್ಚು ಮನೆ ಮಾತಾಗಿದ್ದರು.

 

ಬಿಜೆಪಿ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ ಕೋಟ್ಯಂತರ ರೂಪಾಯಿ ಪಡೆದು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ರೋಚಕ ಮಾಹಿತಿಗಳು ಹೊರ ಬೀಳುತ್ತಿವೆ. ಎಲ್ಲರಿಗೂ ಗೊತ್ತಿರುವಂತೆ ಚೈತ್ರ ಕುಂದಾಪುರ ತನ್ನದೇ ಆದ ಫೈರ್ ಬ್ರಾಂಡ್ ಸೃಷ್ಟಿ ಮಾಡಿದ್ದರು ಎಂದರು ತಪ್ಪಾಗದು. ರಾಜ್ಯದಲ್ಲಿ ಉಡುಪಿ ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ 5 ಕೋಟಿ ರೂ. ಹಣವನ್ನು ಪಡೆದು ವಂಚನೆ ಮಾಡಿದ ಆರೋಪಿ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರದ ಬಂಧನದ ಬೆನ್ನಲ್ಲೇ ವಿಶ್ವ ಹಿಂದೂ ಪರಿಷತ್‌ನಲ್ಲಿ ಇರಲಿಲ್ಲ ಎಂಬ ಹೊಸ ಬಾಂಬ್ ಅನ್ನು ಸಂಘಟನೆ ಪ್ರಾಂತ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಸಿಡಿಸಿದ್ದಾರೆ.

 

ಹಿಂದೂಪರ ಭಾಷಣಕಾರ್ತಿಯಾಗಿ ಜೊತೆಗೆ ಹಿಂದೂ ಕಾರ್ಯಕರ್ತೆಯಾಗಿ ತನ್ನದೇ ಆದ ಛಾಪನ್ನು ಮೂಡಿಸಿಕೊಂಡಿದ್ದ ಚೈತ್ರ ತಮ್ಮ ಪ್ರಖರ ಮಾತಿನ ಮೂಲಕ ಜನರನ್ನು ಸೆಳೆಯುವುದಲ್ಲದೆ ಪ್ರೇರಣೆ ನೀಡುವ ರೀತಿ ಭಾಷಣ ಮಾಡುತ್ತಿದ್ದಳು. ಇದರ ಜೊತೆಗೆ ಹಿಂದೂ ಧರ್ಮ ಹಾಗೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಳು. ಬಿಜೆಪಿ ನಾಯಕರೊಂದಿಗೆ ಗುರುತಿಸಿಕೊಂಡಿದ್ದನ್ನೇ ಬಂಡವಾಳ ಮಾಡಿಕೊಂಡ ಚೈತ್ರಾ ಕುಂದಾಪುರ ಎಷ್ಟೋ ಜನರನ್ನು ಯಾಮಾರಿಸಿದ್ದಾಳೆ.

 

ಉಡುಪಿಯ ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಹೇಳಿ 5 ಕೋಟಿ ರೂ. ಪಡೆದು ವಂಚನೆ ಮಾಡಿದ್ದ ಪ್ರಕರಣದ ಈ ಸಂಬಂಧ ದೂರು ದಾಖಲಾಗುತ್ತಿದ್ದಂತೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದು 8 ಮಂದಿಯನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ. ಆದರೆ, ಈಗ ಚೈತ್ರಾ ಹಿಂದೂ ಸಂಘಟನೆಗೆ ಸೇರಿದವಳಲ್ಲ ಎಂದು ಸಂಘಟನೆಯ ಮುಖಂಡರು ಹೇಳಿಕೆ ನೀಡುತ್ತಿದ್ದಾರೆ.ಹಿಂದೂ ಪರಿಷತ್‌ನ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಅವರು,ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ವಿಶ್ವ ಚೈತ್ರಾ ಕುಂದಾಪುರ ನಮ್ಮ ಸಂಘಟನೆಯಲ್ಲಿ ಇರಲಿಲ್ಲ. ಚೆನ್ನಾಗಿ ಭಾಷಣ ಮಾಡುವ ಕಲೆಯನ್ನು ಕರಗತ ಮಾಡಿಕೊಂಡ ಹಿನ್ನೆಲೆ ಅವಳನ್ನು ನಮ್ಮ ಕಾರ್ಯಕ್ರಮದ ಭಾಷಣಕಾರಳಾಗಿ ಕರೆಯಲಾಗುತ್ತಿತ್ತು. ಹಿಂದುತ್ವ ಮತ್ತು ಅದರ ವಿಚಾರದಲ್ಲಿ ಮಾತನಾಡುತ್ತಿದ್ದದ್ದು ಗೊತ್ತಿರುವ ಸಂಗತಿ. ಸದ್ಯ ವಂಚನೆ ಪ್ರಕರಣದಲ್ಲಿ ಚೈತ್ರ ಕುಂದಾಪುರ ಬಂಧನವಾಗಿದ್ದು, ತಪ್ಪು ಮಾಡಿದ್ದರೆ ಕ್ರಮ ಆಗಲಿ. ನಮ್ಮ ಸಂಘಟನೆ ಈ ರೀತಿಯ ಕೃತ್ಯಗಳಿಗೆ ಯಾವುದೇ ಕಾರಣಕ್ಕೆ ಬೆಂಬಲ ನೀಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

 

ಇದೇ ವೇಳೆ, ಶರಣ್‌ ಪಂಪ್‌ವೆಲ್‌ ಚೈತ್ರಾ ಕುಂದಾಪುರ ಅವರ ಕುರಿತು ಗುರುಪುರ ವಜ್ರದೇಹಿ ಶ್ರೀಗಳು ಒಂದು ತಿಂಗಳ ಹಿಂದೆ ಈ ವಿಚಾರವನ್ನು ತನ್ನ ಗಮನಕ್ಕೆ ತಂದಿದ್ದು, ಆಗಲೂ ಕೂಡ ನಾನು ತನಿಖೆ ಆಗಲಿ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ಹೇಳಿದ್ದೆ. ಹೀಗಾಗಿ ತಪ್ಪು ಮಾಡಿದ ಯಾರೇ ಆಗಿದ್ದರು ಕೂಡ ಶಿಕ್ಷೆಯಾಗಲಿ. ಈ ವಿಚಾರದಲ್ಲಿ ವಿಶ್ವ ಹಿಂದೂ ಪರಿಷತ್‌ನಿಂದ ಯಾರಿಗು ಕೂಡ ಬೆಂಬಲ ನೀಡಲ್ಲ. ಮುಂದಿನ ದಿನಗಳಲ್ಲಿಯೂ ಇಂಥವರಿಗೆ ನಮ್ಮ ಸಂಘಟನೆಯಲ್ಲಿ ಅವಕಾಶವನ್ನೂ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

Leave A Reply

Your email address will not be published.