Chaitra Kundapura: ಸ್ವಾಮೀಜಿ ಬಳಿ ಸಿಕ್ಕ ಹಣಕ್ಕೆ ಬಿಗ್ ಟ್ವಿಸ್ಟ್ – ಚೈತ್ರಾ ಮಾತ್ರವಲ್ಲದೆ ಇದೆಯಾ ಬೇರೆಯದೇ ಲಿಂಕ್ ?
Chaitra Kundapura fraud case new twist to the case of money found with abhinava halashree Swamiji
Abhinava Halashree Swamiji : ಚೈತ್ರಾ ಕುಂದಾಪುರ & ಗ್ಯಾಂಗ್ನಿಂದ (Chaitra Kundapura And Gang) ₹5 ಕೋಟಿ ಡೀಲ್ ಕೇಸ್ ತನಿಖೆ ಬಿರುಸುಗೊಂಡಿದೆ. ಹಾಲಶ್ರೀ ಸ್ವಾಮಿ ಹಣವನ್ನು ಮೈಸೂರಿನ ವಕೀಲರ ಆಫೀಸಿನಲ್ಲಿ ಇರಿಸಲಾಗಿದೆ ಎನ್ನಲಾಗಿದೆ. ಈ ಪ್ರಕರಣದ A3 ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿಯನ್ನ (Abhinava Halashree Swamiji) 19ನೇ ಎಸಿಎಂಎಂ ಕೋರ್ಟ್ ಸೆಪ್ಟೆಂಬರ್ 29ರವರೆಗೆ ಸಿಸಿಬಿ ಕಸ್ಟಡಿಗೆ (CCB Custody) ನೀಡಿದೆ.
ಸಿಸಿಬಿ ಪೋಲಿಸರು ಹಾಲಶ್ರೀಯನ್ನು ಸ್ಥಳ ಮಹಜರ್‌ಗಾಗಿ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಮಠಕ್ಕೆ ಕರೆದೊಯ್ದಿದ್ದಾರೆ. ಸಿಸಿಬಿ ಇನ್ಸ್ಪೆಕ್ಟರ್ ಚಂದ್ರಪ್ಪ ಬಾರ್ಕಿ ನೇತೃತ್ವದ ತಂಡದಿಂದ ಹಾಲಶ್ರೀ ಮಠದಲ್ಲಿ ಮಹಜರು ಮಾಡಲಾಗಿದೆ. ಉದ್ಯಮಿ ಗೋವಿಂದ ಬಾಬು ಪೂಜಾರಿ ನೀಡಿದ ದೂರಿನ ಮೇರೆಗೆ, ಹಾಲಶ್ರೀ ಸ್ವಾಮೀಜಿಗೆ ಒಂದೂವರೆ ಕೋಟಿ ನೀಡಲಾಗಿದೆ ಎನ್ನಲಾಗಿದೆ. ಸದ್ಯ ಮಠದಲ್ಲಿ 56 ಲಕ್ಷ 3 ಸಾವಿರ ರೂಪಾಯಿ ದೊರೆತಿದ್ದು, ಇನ್ನುಳಿದ ಹಣ ಎಲ್ಲಿ ಹೋಗಿದೆ ಎಂಬುದನ್ನು ಪೋಲಿಸರು ತನಿಖೆ ನಡೆಸುತ್ತಿದ್ದಾರೆ.
ಮಠದಲ್ಲಿ 56 ಲಕ್ಷ 3 ಸಾವಿರ ರೂಪಾಯಿ ಹಣವನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಹಾಲಸ್ವಾಮಿ, ಚಾಲಕ ರಾಜು ಮತ್ತು ವಕೀಲ ಪ್ರಣವ್ ಪ್ರಸಾದ್ ಮೂವರಿಗೂ ಲಿಂಕ್ ಇದೆಯಾ? ಮೂವರ ನಡುವೆ ಡೀಲ್ ನಡುವೆ ಏನಾದರು ಸಂಬಂಧಯಿದೆಯಾ ಎಂಬ ಅನುಮಾನ ಕಾಡುತ್ತಿದೆ. ಇದೀಗ ಮಠದಲ್ಲಿ ಸಿಕ್ಕಿರುವ ಹಣದ ಜೊತೆ ಮೂವರ ಹೆಸರು ತಳುಕು ಹಾಕಿಕೊಂಡಿದೆ. ಈ ಮೂವರಿಗೂ ಮತ್ತು ಡೀಲ್ ಪ್ರಕರಣಕ್ಕು ಏನಾದರು ಲಿಂಕ್ ಇದೆಯಾ ಎಂಬ ಪ್ರಶ್ನೆ ಸಹಜವಾಗಿ ಮೂಡಿದೆ. ಈಗಾಗಲೇ ಹಾಲಶ್ರೀ ಸ್ವಾಮೀಜಿ ಕಾರ್ ಚಾಲಕ ರಾಜುನನ್ನು ವಶಕ್ಕೆ ಪಡೆದ ಸಿಸಿಬಿ ಪೊಲೀಸರು ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ. ಈ ನಡುವೆ, ಪ್ರಣವ್ ಬರೆದಿರುವ ಪತ್ರ ಕೂಡ ಅನೇಕ ಪ್ರಶ್ನೆಯನ್ನು ಹುಟ್ಟುಹಾಕಿದೆ. ಚಾಲಕ ರಾಜು ಮತ್ತು ಪ್ರಣವ್ಗೆ ನೋಟಿಸ್ ನೀಡಿ ಇಬ್ಬರನ್ನು ವಿಚಾರಣೆಗೆ ಒಳಪಡಿಸಲು ಸಿಸಿಬಿ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗಿದೆ.
ಪ್ರಣವ್ ಪ್ರಸಾದ್ ಬರೆದ ಪತ್ರದಿಂದ ಸಿಸಿಬಿ ಪೊಲೀಸರಿಗೆ ಅನೇಕ ಪ್ರಶ್ನೆಗಳು ಭುಗಿಲೆದ್ದಿದೆ.
# ಐದು ಕೋಟಿಯಲ್ಲಿ ಯಾರಿಗೆ ಎಷ್ಟು ಹಣ ಸೇರಿದೆ ?
# ಉಳಿದ 85 ಲಕ್ಷ ಹಣ ಹಾಗಾದ್ರೆ ಎಲ್ಲಿದೆ? ಯಾರ ಬಳಿ ಇದೆ?
# ಮೈಸೂರಿಗೆ ಡ್ರೈವರ್ ರಾಜು ಮೂಲಕ ಹಣ ತಲುಪಿಸಿದ್ದಾದರು ಯಾಕೆ? ಇದರ ಹಿಂದಿನ ಉದ್ದೇಶವೇನು?
# ಮೈಸೂರಿಗೆ ರವಾನೆ ಮಾಡಿದ ಹಣ ಯಾರಿಗೆ ಕೊಡಲು ಹಾಲಶ್ರೀ ಯೋಜನೆ ಹಾಕಿದ್ದರು?
# ಮೂರು ನಾಲ್ಕು ದಿನಗಳ ಕಾಲ ಡ್ರೈವರ್ ರಾಜು ಪ್ರಣವ್ ಮನೆಯಲ್ಲೇ ಹಣ ಇರಿಸಿದ್ದು ಏಕೆ?
#ನಾಲ್ಕು ಲಕ್ಷ ಹಣದಲ್ಲಿ ಮಠಗಳಿಗೆ ಕಾಣಿಕೆ ಏನಾದ್ರೂ ಕೊಟ್ಟಿದ್ದಾರಾ?
# ಆ ಹಣದಲ್ಲಿ ನಾಲ್ಕು ಲಕ್ಷ ಹಣ ಪಡೆದುಕೊಂಡು ಹಾಲಶ್ರೀ ಪರಾರಿಯಾದರೇ?
#ಪ್ರಣವ್ ಹಾಗೂ ಡ್ರೈವರ್ ರಾಜು ಹೇಳಿಕೆಗಳು ಪ್ರಕರಣಕ್ಕೆ ಟ್ವಿಸ್ಟ್ ಕೊಡುತ್ತವೆಯೇ?
# ಸ್ವಾಮೀಜಿ ಹೇಳಿದ ವ್ಯಕ್ತಿಗೆ ಹಣ ಸೇರಲಿಲ್ಲದಿದ್ದರು ಕೂಡ ಪಲ್ಲಕ್ಕಿಯಲ್ಲೇ ಹಣ ಇಟ್ಟಿದ್ದರ ಹಿಂದಿನ ಉದ್ದೇಶವೇನು?
ಎಂಬೆಲ್ಲ ಅನುಮಾನಗಳು ಸದ್ಯ ಪೋಲಿಸರ ಮುಂದಿದ್ದು, ಇದಕ್ಕೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ತನಿಖೆ ಬಿರುಸಾಗಿ ನಡೆಯುತ್ತಿದೆ.
ಇದನ್ನೂ ಓದಿ: Ration Card Holder: ಪಡಿತರ ಚೀಟಿದಾರರೇ ನಿಮಗೊಂದು ಶಾಕಿಂಗ್ ನ್ಯೂಸ್ ! ಸರ್ಕಾರ ಮಾಡ್ತು ಮಹತ್ವದ ಒಂದು ನಿರ್ಧಾರ