Karnataka Rain: ಕರಾವಳಿ ಜಿಲ್ಲೆಗಳಲ್ಲಿ ಬಿರುಸಾಗಿ ಸುರಿಯಲಿದ್ದಾನೆ ಇಂದು (ಸೆ.20) ಮಳೆರಾಯ! ಗುಡುಗು, ಬಿರುಗಾಳಿ ಸಹಿತ ಮಳೆ!!
Karnataka rain alert Indian meteorological department prediction rain for next 3 days in costal area
Karnataka Rain: ರಾಜ್ಯಾದಾದ್ಯಂತ ಗಾಳಿ ಮಳೆಯ ಅಬ್ಬರ ಇನ್ನೂ ಮುಂದುವರಿಯಲಿದೆ. ಕೆಲವು ಕಡೆ ಮಳೆ ಬಂದಿಲ್ಲ ಎಂದು ಜನರು ಪೂಜೆಗಳ ಮೊರೆ ಹೋದರೆ, ಇನ್ನು ಕೆಲವು ಕಡೆ ಮಳೆರಾಯ ತನ್ನ ಕೃಪಕಟಾಕ್ಷ ತೋರಿಸಿದ್ದಾನೆ. ಇಂದು ಕೂಡಾ ಭಾರೀ ಮಳೆಯ ಸಂಭವವಿದೆ ಎಂದು ಹವಾಮಾನ ಇಲಾಖೆ ಹೇಳಿದೆ(Karnataka Rain).
ಕರಾವಳಿ ಜಿಲ್ಲೆಗಳಲ್ಲಿ ಇಂದು (ಸೆ.20) ಗುಡುಗು ಸಹಿತ ಬಿರುಗಾಳಿ ಮಳೆಯಾಗಲಿದೆ. ಮುಂದಿನ ಒಂದು ವಾರ ಸಾಧಾರಣ ಮಳೆಯಾಗಳಿದೆ ಎಂದು ಹವಾಮಾನ ಇಲಾಖೆ ((Indian Meteorological Department) ಮುನ್ಸೂಚನೆ ನೀಡಿದೆ. 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 82mm ಮಳೆಯಾಗಿದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲೂ ಮುಂದಿನ ಒಂದು ವಾರ ಸಾಧಾರಣ ಮಳೆಯಾಗಲಿದೆ.
ಗುಡುಗು ಮಿಂಚಿನಿಂದ ಕೂಡಿದ ಸಾಧಾರಣ ಮಳೆಯು ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಆಗಲಿದೆ. 30-40 ಕಿಮೀ. ವೇಗದಲ್ಲಿ ಗಾಳಿಯು ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ : ಉತ್ತರಕನ್ನಡದಲ್ಲಿ ಹೊಸ ರೋಗ ಪತ್ತೆ, ದಕ್ಷಿಣನ್ನಡದಲ್ಲೂ ಈ ರೋಗದ ಸಾಧ್ಯತೆ! ಆರೋಗ್ಯ ಇಲಾಖೆ ಹೈ ಅಲರ್ಟ್!!!