Bank FD Rate: ಬ್ಯಾಂಕ್ ನಲ್ಲಿ FD ಇಟ್ಟವರಿಗೆ ಭರ್ಜರಿ ಗುಡ್ ನ್ಯೂಸ್ – ಬಡ್ಡಿಯ ದರದಲ್ಲಾಗಿದೆ ಭಾರೀ ಹೆಚ್ಚಳ
IDBI Bank FD Rate : ಇಂದಿನ ಯುಗದಲ್ಲಿ ಎಲ್ಲವೂ ಡಿಜಿಟಲ್ ಮಯವಾಗಿಬಿಟ್ಟಿದೆ. ಎಲ್ಲ ವಹಿವಾಟು ಕ್ಷಣ ಮಾತ್ರದಲ್ಲಿ ಬೆರಳ ತುದಿಯಲ್ಲಿಯೆ ಮೊಬೈಲ್ ಎಂಬ ಮಾಯಾವಿ ಮೂಲಕ ಮಾಡಿಕೊಳ್ಳಲು ಎಲ್ಲ ಬ್ಯಾಂಕಿಂಗ್ ವ್ಯವಸ್ಥೆಗಳು ಅನುವು ಮಾಡಿಕೊಟ್ಟಿವೆ. ಎಲ್ಲದರಲ್ಲೂ ಬದಲಾವಣೆಯಾಗಿ ಹಿಂದಿನಂತೆ ಬ್ಯಾಂಕ್ಗಳ ಮುಂದೆ ಗಂಟೆಗಟ್ಟಲೆ ನಿಲ್ಲಬೇಕಾದ ಅನಿವಾರ್ಯತೆ ಈಗಿಲ್ಲ. ನೀವು ಉಳಿತಾಯ(Savings) ಮಾಡಲು ಯಾವುದಾದರೂ ಒಂದು ಹೂಡಿಕಾ ವಿಧಾನ ಅನುಸರಿಸೋದು ಸಹಜ. ನೀವು ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದು, ಬ್ಯಾಂಕ್ ಎಫ್ಡಿಯನ್ನು (Bank FD)ಮಾಡಿಸಿದ್ದೀರಿ ಎಂದರೆ ಈ ಸುದ್ದಿ ತಿಳಿದಿರುವುದು ಒಳ್ಳೆಯದು.
ಐಡಿಬಿಐ ಎಫ್ಡಿ (ಬ್ಯಾಂಕ್ ಎಫ್ಡಿ) ಮೇಲಿನ ಹೆಚ್ಚಿನ ಬಡ್ಡಿಯ ಲಾಭವನ್ನು ಪಡೆಯಲು ನೀವು ಇಚ್ಛಿಸಿದರೆ, ಇದೀಗ ಐಡಿಬಿಐ ಬ್ಯಾಂಕ್ ವಿಶೇಷ ನಿಶ್ಚಿತ ಠೇವಣಿ ಯೋಜನೆಯ ಗಡುವನ್ನು ವಿಸ್ತರಣೆ ಮಾಡಿದೆ.IDBI ಬ್ಯಾಂಕ್ ಗ್ರಾಹಕರಿಗೆ 375 ಮತ್ತು 444 ದಿನಗಳ ಸ್ಥಿರ ಠೇವಣಿಗಳನ್ನು ಒದಗಿಸುವ ಅಮೃತ್ ಮಹೋತ್ಸವ ಎಫ್ಡಿ ಎಂಬ ವಿಶೇಷ ಯೋಜನೆಯನ್ನು ಆರಂಭ ಮಾಡಿದೆ. ಈ ಮೊದಲು ಕೊನೆಯ ದಿನಾಂಕ 30 ಸೆಪ್ಟೆಂಬರ್ 2023 ವರೆಗೆ ಇದ್ದ ಗಡುವನ್ನು ಒಂದು ತಿಂಗಳವರೆಗೆ ವಿಸ್ತರಿಸಲಾಗಿದೆ.
IDBI ಬ್ಯಾಂಕ್ ತನ್ನ FD ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿದ್ದು, ಬ್ಯಾಂಕ್ನ ವೆಬ್ಸೈಟ್ ಪ್ರಕಾರ, ಈ ದರಗಳು ಸೆಪ್ಟೆಂಬರ್ 15, 2023 ರಿಂದ ಜಾರಿಗೆ ಬಂದಿದೆ. IDBI ಬ್ಯಾಂಕ್ ಏಳು ದಿನಗಳಿಂದ ಐದು ವರ್ಷಗಳವರೆಗೆ ಪಕ್ವವಾಗುವ FD ಗಳ ಮೇಲೆ ಸಾಮಾನ್ಯ ಗ್ರಾಹಕರಿಗೆ 3% ರಿಂದ 6.8% ವರೆಗೆ ಮತ್ತು ಹಿರಿಯ ನಾಗರಿಕರಿಗೆ 3.5% ರಿಂದ 7.3% ವರೆಗೆ ಬಡ್ಡಿ ದೊರೆಯಲಿದೆ.
ಅಮೃತ್ ಮಹೋತ್ಸವ FD ಯ ಹಬ್ಬದ ಕೊಡುಗೆಯನ್ನು 375 ಮತ್ತು 444 ದಿನಗಳವರೆಗೆ ಎಂದರೆ ಅಕ್ಟೋಬರ್ 31, 2023 ರವರೆಗೆ ವಿಸ್ತರಿಸಲಾಗಿದೆ ಎಂದು IDBI ಬ್ಯಾಂಕ್ ತನ್ನ ವೆಬ್ಸೈಟ್ನಲ್ಲಿ ಮಾಹಿತಿ ನೀಡಿದೆ. ಗ್ರಾಹಕರು ಅಕ್ಟೋಬರ್ 31 ರವರೆಗೆ ಅಮೃತ್ ಮಹೋತ್ಸವ FD ಯಲ್ಲಿ ಹೆಚ್ಚಿನ ಬಡ್ಡಿಯ ಲಾಭ ಪಡೆದಿದ್ದಾರೆ. ಸಾಮಾನ್ಯ ಗ್ರಾಹಕರು 375 ದಿನಗಳ ವಿಶೇಷ ಅವಧಿಯೊಂದಿಗೆ ಸ್ಥಿರ ಠೇವಣಿಗಳ ಮೇಲೆ ಶೇಕಡಾ 7.10 ರ ದರದಲ್ಲಿ ಬಡ್ಡಿಯ ಲಾಭವನ್ನು ಪಡೆಯಬಹುದು. ಹಿರಿಯ ನಾಗರಿಕರು ಅವಧಿಯ ಸ್ಥಿರ ಠೇವಣಿಗಳ ಮೇಲೆ ಶೇಕಡಾ 7.60 ರ ದರದಲ್ಲಿ ಬಡ್ಡಿಯನ್ನು ಪಡೆಯಬಹುದು.
IDBI ಬ್ಯಾಂಕ್ನ ಇತ್ತೀಚಿನ FD ದರಗಳು ಹೀಗಿದೆ :
07 ರಿಂದ 30 ದಿನಗಳವರೆಗೆ 3% ಬಡ್ಡಿ ದರವಿದೆ.
31-45 ದಿನಗಳವರೆಗೆ 3.25% ಬಡ್ಡಿ ದರವಿದೆ.
46- 90 ದಿನಗಳವರೆಗೆ 4% ಬಡ್ಡಿ ದರವಿದೆ.
91-6 ತಿಂಗಳುಗಳವರೆಗೆ 4.5% ಬಡ್ಡಿ ದರವಿದೆ.
6 ತಿಂಗಳು 1 ದಿನದಿಂದ 270 ದಿನಗಳವರೆಗೆ 5.75% ಬಡ್ಡಿ ದರವಿದೆ.
71 ದಿನಗಳಿಂದ 1 ವರ್ಷದವರೆಗೆ 6.25% ಬಡ್ಡಿ ದರವಿದೆ.
# 1 ವರ್ಷದಿಂದ 2 ವರ್ಷಗಳವರೆಗೆ (375 ದಿನಗಳು ಮತ್ತು 444 ದಿನಗಳನ್ನು ಹೊರತುಪಡಿಸಿ) 6.8% ಬಡ್ಡಿ ದರವಿದೆ.
> 2 ವರ್ಷದಿಂದ 5 ವರ್ಷಗಳು – 6.5%
> 5 ವರ್ಷದಿಂದ 10 ವರ್ಷಗಳು – 6.25%
> 10 ವರ್ಷದಿಂದ 20 ವರ್ಷಗಳು – 4.8%
ತೆರಿಗೆ ಉಳಿತಾಯ FD 5 ವರ್ಷಗಳು – 6.5%
ನಿಯಮಿತ, NRE ಮತ್ತು NRO ಗ್ರಾಹಕರು 444 ದಿನಗಳ ಅಮೃತ್ ಮಹೋತ್ಸವ FD ಯೋಜನೆಯಲ್ಲಿ ಶೇಕಡಾ 7.15 ರ ಬಡ್ಡಿದರದ ಲಾಭವನ್ನು ಪಡೆಯುತ್ತಿರುವ ಕುರಿತು ಬ್ಯಾಂಕ್ ಹೇಳಿದೆ. ಹಿರಿಯ ನಾಗರಿಕರು ಈ ಎಫ್ಡಿಯಲ್ಲಿ ಶೇಕಡಾ 7.65 ರ ದರದಲ್ಲಿ ಬಡ್ಡಿಯನ್ನು ಪಡೆಯಲಿದ್ದಾರೆ.