Silk Smitha: ಹರಾಜಿನಲ್ಲಿ ಸಿಲ್ಕ್ ಸ್ಮಿತಾ ಕಚ್ಚಿದ ಸೇಬು ಎಷ್ಟು ಬೆಲೆಗೆ ಸೇಲ್‌ ಆಯಿತು ಗೊತ್ತಾ?

ಎಂಭತ್ತರ ದಶಕದಲ್ಲಿ ಎಲ್ಲರ ಎದೆಯಲ್ಲಿ ಮಿಂಚು ಹರಿಸಿದ್ದ ನಟಿ ಸಿಲ್ಕ್‌ ಸ್ಮಿತ ಯಾರಿಗೆ ಗೊತ್ತಿಲ್ಲ ಹೇಳಿ. ಬದುಕಿದ ಕಾಲದಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ ಪೋರಿ ಈ ನಟಿ. ಅಷ್ಟರ ಮಟ್ಟಿಗೆ ಜನಪ್ರಿಯತೆಯನ್ನು ಕಂಡು ಕೊಂಡ ನಟಿ ಎಂದರೆ ಸಿಲ್ಕ್‌ಸ್ಮಿತ ಎಂದರೆ ತಪ್ಪಾಗಲಾರದು.

 

ಎಷ್ಟು ಬೇಗೆ ಜನಪ್ರಿಯತೆಯ ತುತ್ತ ತುದಿಗೇರಿದ್ದ ಸಿಲ್ಕ್‌, ಅಷ್ಟೇ ಬೇಗ ತಮ್ಮ ಜೀವನವನ್ನು ಕೊನೆಗಾಣಿಸಿದ್ರು. ಕಾಮಪ್ರಚೋದಕ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದ ಸಿಲ್ಕ್‌ ಐಟಂ ಸಾಂಗ್‌ಗಳಲ್ಲಿ ಕೂಡಾ ಮಿಂಚಿ ಸೊಂಟ ಬಳುಕಿಸುತ್ತಿದ್ದರು. ಕನ್ನಡ ಮಾತ್ರವಲ್ಲದೆ ಮಲಯಾಳಂ. ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾದಲ್ಲಿ ತನ್ನ ಛಾಪು ಮೂಡಿಸಿದ್ದ ನಟಿ, ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ವಿಚ್ಛೇದನ ಪಡೆದಿದ್ದರು.

ಆದರೆ ಇದೀಗ ಇಲ್ಲೊಂದು ಇಂಟೆರೆಸ್ಟಿಂಗ್‌ ಸುದ್ದಿಯೊಂದು ಕಂಡು ಬಂದಿದೆ. ಅದೇನೆಂದರೆ ಸಿನಿಮಾ ಚಿತ್ರೀಕರಣದಲ್ಲಿ ಸಿಲ್ಕ್‌ ಅವರು ಅರ್ಧ ಕಚ್ಚಿ ತಿಂದ ಸೇಬು ಹಣ್ಣನ್ನು ತನ್ನ ಬಳಿ ಇಟ್ಟುಕೊಂಡಿದ್ದರಂತೆ.ಇದನ್ನು ಕಂಡ ಶೂಟಿಂಗ್‌ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬ ಅದನ್ನು ಕದ್ದು ಓಡಿ ಹೋಗಿದ್ದನಂತೆ. ಅನಂತರ ಆ ಹಣ್ಣನ್ನು ಸಿಲ್ಕ್‌ಸ್ಮಿತಾ ಅವರು ಕಚ್ಚಿದ ಹಣ್ಣು ಎಂದು ಹರಾಜು ಹಾಕಲಾಯಿತಂತೆ.

ಆಗಿನ ಕಾಲದಲ್ಲಿ ಎರಡು ರೂಪಾಯಿಗಿಂತಲೂ ಕಮ್ಮಿ ಇದ್ದ ಸೇಬು ಹಣ್ಣು, ಆ ಕಾಲದಲ್ಲೇ ಭರ್ಜರಿ 350 ರೂ. ಗೆ ಸೇಲ್‌ ಆಗಿತ್ತಂತೆ. ಅಂದರೆ ಈಗಿನ ಕಾಲದಲ್ಲಿ ಸರಿ ಸುಮಾರು ನಾಲ್ಕು ಸಾವಿರ ರೂಪಾಯಿ. ಸೆಯ್ಯರ್‌ ಬಾಬು ಎಂಬುವವರು ತಮ್ಮ ಸಂದರ್ಶನವೊಂದರಲ್ಲಿ ಅಭಿಮಾನಿಯೊಬ್ಬರು ಈ ಸೇಬನ್ನು ಖರೀದಿ ಮಾಡಿದ್ದರು ಎಂದು ಹೇಳಿದ್ದಾರೆ.

ಸಿಲ್ಕ್‌ ಸ್ಮಿತಾ ನಿರ್ಮಾಣ ಕ್ಷೇತ್ರಕ್ಕೆ ಕಾಲಿಟ್ಟು, ಅಲ್ಲಿ ನಷ್ಟ ಅನುಭವಿಸಿ, ಮ್ಯಾನೇಜರ್‌ನನ್ನು ನಂಬಿ ಮೋಸ ಹೋಗಿಯೋ, ಮುಂತಾದ ಕಾರಣಗಳಿಂದ ಆರ್ಥಿಕವಾಗಿ ನಷ್ಟ ಅನುಭವಿಸಿಯೋ, ಕೆಲ ನಿರ್ದೇಶಕರ ಪ್ರೀತಿಯ ಹೆಸರಲ್ಲಿ ಮೋಸ ಮಾಡಿಯೋ, ಕೆಲವೊಂದು ಕಾರಣಗಳು ಇಂದಿಗೂ ಸಿಲ್ಕ್‌ ಸಾವಿಗೆ ಕಾರಣ ನಿಗೂಢವಾಗಿ ಉಳಿದಿದೆ. ಸಿಲ್ಕ್‌ ಸ್ಮಿತಾ ತಮ್ಮ 35ನೇ ವಯಸ್ಸಿಗೆ ತಮ್ಮ ಜೀವನವನ್ನು ಅಂತ್ಯಗೊಳಿಸದ್ದರು. ಸೆ. 23, 1996 ರಂದು ಅವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ದಿ ಡರ್ಟಿ ಪಿಕ್ಚರ್ ಚಿತ್ರ ಸಿಲ್ಕ್ ಸ್ಮಿತಾ ಅವರ ಜೀವನ ಕಥೆಯಾಧಾರಿತ ಎಂಬುದು ಗೊತ್ತೇ ಇದೆ. ಈ ಸಿನಿಮಾದಲ್ಲಿ ಸಿಲ್ಕ್ ಸ್ಮಿತಾ ಪಾತ್ರದಲ್ಲಿ ಬಾಲಿವುಡ್ ನಾಯಕಿ ವಿದ್ಯಾ ಬಾಲನ್ ನಟಿಸಿದ್ದಾರೆ. ಈ ಸಿನಿಮಾ ಸಿಲ್ಕ್ ಸ್ಮಿತಾ ಹುಟ್ಟುಹಬ್ಬದಂದು ಬಿಡುಗಡೆಯಾಗಿರುವುದು ವಿಶೇಷ. ಚಲನಚಿತ್ರವು ಡಿಸೆಂಬರ್ 2, 2011 ರಂದು ಬಿಡುಗಡೆ ಮಾಡಲಾಗಿತ್ತು.

 

Leave A Reply

Your email address will not be published.