Canada: ಹಿಂದೂಗಳು ಈ ಕೂಡಲೇ ಕೆನಡ ಬಿಟ್ಟು ಹೋಗಬೇಕು! ಉಗ್ರ ಸಂಘಟನೆಯಿಂದ ಬೆದರಿಕೆ!

Canada: . ಕೆನಡಾ(canada)ಪ್ರಧಾನಿ ಜಸ್ಟಿನ್ ಟ್ರುಡೋ ಖಲಿಸ್ತಾನ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಸಾವಿನ ಹಿಂದೆ ಭಾರತ ಸರ್ಕಾರದ ಕೈವಾಡವಿದೆ ಎಂದು ಹೇಳಿಕೆ ನೀಡಿದ್ದು, ಇದು ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ಭಾರತದಲ್ಲಿ(India)ಕೆನಡಾ ಪ್ರಧಾನಿ ಮತ್ತು ಖಲಿಸ್ತಾನಿಗಳ ವಿರುದ್ಧ ಆಕ್ರೋಶದ ಕಿಚ್ಚು ಜೋರಾಗಿ ಹೊತ್ತಿಕೊಳ್ಳುತ್ತಿದೆ. ಕೆನಡಾದಲ್ಲಿ ಉಗ್ರ ಖಲಿಸ್ತಾನ ಸಂಘಟನೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.

 

ಇದರ ಬೆನ್ನಲ್ಲೆ ಕೆನಡಾದಲ್ಲಿ ಇದೀಗ ಖಲಿಸ್ತಾನಿಗಳು ಹೋರಾಟ ತೀವ್ರಗೊಳಿಸಿದ್ದು, ಕೆನಡಾದಲ್ಲಿರುವ ಹಿಂದೂಗಳು ಶೀಘ್ರವೇ ದೇಶ ಬಿಟ್ಟು ಹೋಗುವಂತೆ ಸೂಚಿಸಿದ್ದಾರೆ. ಭಾರತ ಇಲ್ಲವೇ ಬೇರೆ ಇನ್ಯಾವುದೇ ದೇಶಕ್ಕೆ ಬೇಕಾದರೂ ಹೋಗಿ ಆದರೆ ಕೆನಡಾದಲ್ಲಿ ಮಾತ್ರ ಹಿಂದೂಗಳು ಇರಬಾರದೆಂದು ಖಲಿಸ್ತಾನ ಬೆಂಬಲಿತ ಸಿಖ್ ಫಾರ್ ಜಸ್ಟೀಸ್ ಸಂಘಟನೆ ಬೆದರಿಕೆ ಹಾಕಿದೆ.

 

ಕೆನಡಾದ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಸರ್ಕಾರದ ಏಜೆಂಟರ ಕೈವಾಡವಿದೆ ಎಂಬ ಗುಮಾನಿಯಿದ್ದು, ಈ ಬಗ್ಗೆ ಕೆನಡಾ ಭದ್ರತಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ’ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮಂಗಳವಾರ ಕೆನಡಾ ಸಂಸತ್ತಿನಲ್ಲಿ ಹೇಳಿದ್ದಾರೆ..‘ಕೆನಡಾದ ನೆಲದಲ್ಲಿ ಕೆನಡಾದ ಪ್ರಜೆಯ ಹತ್ಯೆಯಲ್ಲಿ ವಿದೇಶಿ ಸರ್ಕಾರ ಭಾಗಿಯಾಗುವುದು ನಮ್ಮ ಸಾರ್ವಭೌಮತ್ವದ ಉಲ್ಲಂಘನೆಯಾಗಿದೆ. ಇದು ಮುಕ್ತ ಹಾಗೂ ಪ್ರಜಾಸತ್ತಾತ್ಮಕ ದೇಶದ ಮೂಲಭೂತ ನಿಯಮಗಳಿಗೆ ವಿರುದ್ಧವಾಗಿದೆ’ ಎಂದು ಇದೇ ವೇಳೆ ಹೇಳಿಕೆ ನೀಡಿದ್ದಾರೆ.

 

2019ರಲ್ಲಿ ಖಲಿಸ್ತಾನ ಬೆಂಬಲಿತ ಸಿಖ್ ಫಾರ್ ಜಸ್ಚೀಸ್ ಸಂಘಟನೆ ಭಾರತದಲ್ಲಿ ನಿಷೇಧ ಹೇರಿದೆ. ಗುರುಪತ್ವಂತ್ ಸಿಂಗ್ ಪನ್ನು ಉಗ್ರರ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಇದೀಗ ಹರ್ದೀಪ್ ಸಿಂಗ್ ನಿಜ್ಜರ್ ಸಾವಿಗೆ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಉಗ್ರ ಸಂಘಟನೆ ತಯಾರಿ ನಡೆಸಿದೆ. ಹಿಂದೂಗಳೇ ಶೀಘ್ರವೇ ನೀವು ಕೆನಡ ತೊರೆದು ಭಾರತಕ್ಕೆ ಮರಳಿ, ನೀವು ಭಾರತವನ್ನು ಬೆಂಬಲಿಸುವುದರ ಜೊತೆ ಪ್ರೋ ಖಲಿಸ್ತಾನ ಹೋರಾಟವನ್ನು ಹತ್ತಿಕ್ಕುವ ಯೋಜನೆ ಮಾಡುತ್ತಿದ್ದೀರಿ ಎಂದು ಸಿಖ್ ಫಾರ್ ಜಸ್ಟೀಸ್ ಸಂಘಟನೆ ನಾಯಕ ಗುರುಪತ್ವಂತ್ ಪನ್ನು ಮುನ್ನೆಚ್ಚರಿಕೆ ನೀಡಿದ್ದಾರೆ.

Leave A Reply

Your email address will not be published.