D K Shivkumar: 3 ಡಿಸಿಎಂ ಹುದ್ದೆ ವಿಚಾರ – ಭಾರೀ ಕುತೂಹಲ ಕೆರಳಿಸಿದ ಡಿ ಕೆ ಶಿವಕುಮಾರ್ ಹೇಳಿಕೆ !!

Political news DK Shivakumar reaction about the demand for three dcm post in Karnataka

D K shivkumar: ರಾಜ್ಯದಲ್ಲಿ ಕೆಲವು ದಿನಗಳಿಂದ ಕಾಂಗ್ರೆಸ್ ಸರ್ಕಾರದಲ್ಲಿ ‘ಮೂರು ಡಿಸಿಎಂ(DCM) ಹುದ್ದೆ’ ವಿಚಾರ ಭಾರಿ ಸದ್ಧು ಮಾಡುತ್ತಿದೆ. ಆದರೀಗ ಮೊದಲ ಬಾರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಸದ್ಯ ಏಕೈಕ ಡಿಸಿಎಂ ಆಗಿರುವಂತಹ ಡಿಕೆ ಶಿವಕುಮಾರ್(D K Shivkumar) ಅವರು ಈ ‘3 ಡಿಸಿಎಂ ಹುದ್ದೆ ಸೃಷ್ಟಿ’ ಬಗ್ಗೆ ಮೌನ ಮುರಿದಿದ್ದು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

ಹೌದು, ಕೆಲ ದಿನಗಳ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ(Congress government)ಸಚಿವರಾಗಿರವ ಕೆ.ಎನ್.ರಾಜಣ್ಣ ಮೂರು ಡಿಸಿಎಂಗಳು ಅವಶ್ಯಕತೆ ಇದೆ, ಇದರಿಂದ ಏನು ಉಪಯೋಗ ಎಂದು ಕಾಂಗ್ರೆಸ್ ಹೈಕಮಾಂಡ್ ಗೆ ಪತ್ರ ಬರೆಯುವುದಾಗಿ ತಿಳಿಸಿದ್ದರು. ಈ ವಿಚಾರ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಭಾರೀ ಸದ್ಧು ಕೂಡ ಮಾಡಿತ್ತು. ಗೃಹ ಸಚಿವ ಪರಮೇಶ್ವರ್ ಆದಿಯಾಗಿ ಕೆಲ ಸಚಿವರು ಕೂಡ ಇದರಲ್ಲೇನು ತಪ್ಪಿಲ್ಲ ಎಂದು ರಾಜಣ್ಣ ಪರ ಬ್ಯಾಟ್ ಬೀಸಿದ್ದರು. ಸದ್ಯ ಇದೆಲ್ಲದರಿಂದ ಅಸಮಾಧಾನಿತರಾದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮೌನ ಮುರಿದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ನನ್ನನ್ನು ಈ ಹುದ್ದೆಗೆ ನೇಮಕ‌ ಮಾಡಿದ್ದು ಮುಖ್ಯಮಂತ್ರಿಗಳು. ಅವರೇ ಇದಕ್ಕೆ ಉತ್ತರ ನೀಡುತ್ತಾರೆ. ಕಾಂಗ್ರೆಸ್ ಹೈಕಮಾಂಡ್ ಉತ್ತರ ನೀಡುತ್ತೆ. ರಾಜಣ್ಣ ಅವರು ಏಕೆ ಈ ರೀತಿ ಹೇಳಿಕೆ ಕೊಟ್ಟರೊ ಗೊತ್ತಿಲ್ಲ. ನಾವೆಲ್ಲಾ ಮುಖ್ಯಮಂತ್ರಿಗಳ ಕೆಳಗೆ ಕೆಲಸ ಮಾಡುವವರು ಅವರನ್ನೇ ಕೇಳಬೇಕು. ಅಲ್ಲದೆ ಪತ್ರದ ಕುರಿತಾಗಿ ನೀವು ರಾಜಣ್ಣ ಅವರನ್ನೇ ಕೇಳಿ. ಹೈಕಮಾಂಡ್‌ಗೆ ಪತ್ರವನ್ನು ಬರೆಯುತ್ತೇನೆ ಎಂಬ ವಿಚಾರವನ್ನು ನಾನು ಬೆಳಗ್ಗೆ ಪತ್ರಿಕೆಯಲ್ಲಿ ಓದಿದ್ದೇನೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಅಲ್ಲದೆ ಸಚಿವ ರಾಜಣ್ಣ (KN Rajanna) ಹೇಳಿಕೆಗೆ ಹಾಗೂ ಅದನ್ನು ಸಮರ್ಥಿಸಿದ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿ ತಿರುಗೇಟು ನೀಡಿದ ಅವರು, ಸಚಿವ ರಾಜಣ್ಣ ಹೇಳಿಕೆ ಹಾಗೂ ಪರಮೇಶ್ವರ್ (G Parameshwar) ಸ್ವಾಗತ ಮಾಡಿರೋದು ಬಹಳ ಸಂತೋಷ. ಎಲ್ಲಾ ವಿಘ್ನಕ್ಕೆ ನಾಯಕ ವಿನಾಯಕ. ಎಲ್ಲರ ಮನಸ್ಸಿಗೆ ಸಮಾಧಾನವಾಗಲಿ ಎಂದು ಹೇಳಿದರು.

ಇನ್ನು ಬಿ.ಕೆ.ಹರಿಪ್ರಸಾದ್ ಅವರ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಅವರ ಬಣ ಮೌನ ತಾಳಿದ ಕಾರಣ ಡಿಸಿಎಂ ವಿವಾದ ಎದ್ದಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಡಿ.ಕೆ ಶಿವಕುಮಾರ್, ನಮ್ಮ ಪಕ್ಷದಲ್ಲಿ ಯಾವುದೇ ಬಣವಿಲ್ಲ, ನಿಮ್ಮ ಬಳಿ ಇರಬೇಕು. ನನ್ನ ರಾಜಕೀಯ ಜೀವನದಲ್ಲಿ ಇದುವರೆಗೂ ಯಾವುದೇ ಬಣಕ್ಕೆ ನಾನು ಬೆಂಬಲ ಕೊಟ್ಟಿಲ್ಲ. ನನಗೆ ಬಣದ ಅವಶ್ಯಕತೆ ಇಲ್ಲ. ಎಸ್.ಎಂ.ಕೃಷ್ಣ ಅವರು, ಬಂಗಾರಪ್ಪ ಅವರ ಕಾಲದಲ್ಲಿ ಬಣ ಮಾಡಬಹುದಿತ್ತು, ನನ್ನದು ಕಾಂಗ್ರೆಸ್ ಬಣ. ಬಣದ ಬಗ್ಗೆ ನನ್ನ ಬಳಿ ಪ್ರಶ್ನೆ ಕೇಳಬೇಡಿ ಎಂದು ಸಿಡಿಮಿಡಿಗೊಂಡರು.

ಇದನ್ನೂ ಓದಿ: Vajradehi shri: ಚೈತ್ರಾ ಕುಂದಾಪುರ ಪ್ರಕರಣದಲ್ಲಿ ಕರಾವಳಿಯ ಪ್ರಭಾವಿ ಸ್ವಾಮೀಜಿ ಹೆಸರು ಮುನ್ನಲೆಗೆ !!

Leave A Reply

Your email address will not be published.