Non Taxable Income:ಜನಸಾಮಾನ್ಯರೇ.. ನೀವು ಈ ರೀತಿಯಲ್ಲಿ ಆದಾಯ ಗಳಿಸ್ತಿದ್ರೆ ಟ್ಯಾಕ್ಸ್ ಕಟ್ಟಬೇಕಾಗಿಲ್ಲ !!

National news non taxable income no need to pay any tax on this type of income

Non Taxable Income:ಆದಾಯ ತೆರಿಗೆ ರಿಟರ್ನ್ ಅನ್ನು ಸಮಯೋಚಿತವಾಗಿ ಸಲ್ಲಿಸುವುದು ಪ್ರತಿಯೊಬ್ಬ ತೆರಿಗೆದಾರರ ಹೊಣೆ ಇಲ್ಲವೇ ಜವಾಬ್ದಾರಿಯಾಗಿದೆೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಗಡುವನ್ನು ತಪ್ಪಿಸಿಕೊಂಡರೆ, ಸಮಸ್ಯೆಗಳು ಎದುರಾಗುವುದು ನಿಶ್ಚಿತ. ಸಂಬಳ ಪಡೆಯುವ ಪ್ರತಿ ಉದ್ಯೋಗಿ ಕೂಡ ತಮ್ಮ ಆದಾಯ ತೆರಿಗೆ ಉಳಿತಾಯ ಮಾಡುವತ್ತ ಗಮನ ಹರಿಸುತ್ತಾರೆ.ಆದರೆ, ಕೆಲವು ಆದಾಯಗಳಿಗೆ ನೀವು ಆದಾಯ ತೆರಿಗೆ ಕಟ್ಟಬೇಕಾದ(Non Taxable Income)ಅವಶ್ಯಕತೆ ಇಲ್ಲ.

 

ಹಣಕಾಸು ತಜ್ಞರ ಅನುಸಾರ, ಯಾವುದೇ ಆರ್ಥಿಕ ವರ್ಷದಲ್ಲಿ ನೀವು ಕೆಲವು ಆದಾಯಗಳಿಗೆ ತೆರಿಗೆ ಪಾವತಿಸುವ ಅಗತ್ಯವಿಲ್ಲ. ಕೆಲವು ಆದಾಯಗಳನ್ನು ತೆರಿಗೆಯಲ್ಲದ ಆದಾಯ ಕರೆಯಲಾಗುತ್ತದೆ.

# ಕೃಷಿ ಆದಾಯ
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 10(1) ಅಡಿಯಲ್ಲಿ ಕೃಷಿಯಿಂದ ಪಡೆದ ಆದಾಯಕ್ಕೆ ಯಾವುದೇ ತೆರಿಗೆ ಪಾವತಿಸಬೇಕಾದ ಅವಶ್ಯಕತೆ ಇಲ್ಲ.

# ವಿಮಾ ಪಾಲಿಸಿ
ನೀವು ಒಂದು ಆರ್ಥಿಕ ವರ್ಷದಲ್ಲಿ ವಿಮಾ ಪಾಲಿಸಿಯ ಮೆಚ್ಯೂರಿಟಿ ಇಲ್ಲವೇ ಇನ್ನೊಬ್ಬರ ಮರಣದಿಂದ ಪಡೆದ ಯಾವುದೇ ವಿಮಾ ಪಾಲಿಸಿಯ ಹಣವು ಆದಾಯ ತೆರಿಗೆಯಿಂದ ಮುಕ್ತವಾಗಿರುತ್ತದೆ.

# ಉಡುಗೊರೆಯಿಂದ ಪಡೆದ ಆದಾಯ
ಆದಾಯ ತೆರಿಗೆ ಮಾನದಂಡಗಳ ಅನುಸಾರ, ನೀವು ಉಡುಗೊರೆ ಮೂಲಕ ಪಡೆದ ಆದಾಯಗಳನ್ನು ತೆರಿಗೆಯ ಆದಾಯವೆಂದು ಪರಿಗಣಿಸಲಾಗದು. ಆದಾಗ್ಯೂ, ನೀವು ಸ್ವೀಕರಿಸುವ ಉಡುಗೊರೆಗಳ ಮೌಲ್ಯವು 50,000 ರೂ.ಗಿಂತ ಕಡಿಮೆಯಿದ್ದಾಗ ಮಾತ್ರ ವಿನಾಯಿತಿ ಸಿಗುವುದು ಎಂಬುದನ್ನು ನೆನಪಿಡಿ.

# ಸರ್ಕಾರದ ಠೇವಣಿ ಯೋಜನೆಗಳು
ಸರ್ಕಾರ ನಡೆಸುವ ಯಾವುದೇ ಪಿಪಿಎಫ್, ಸುಕನ್ಯಾ ಸಮೃದ್ದಿ ಠೇವಣಿ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವ ಮೂಲಕ ತೆರಿಗೆ ವಿನಾಯಿತಿ ಪಡೆಯಬಹುದು. ಈ ಯೋಜನೆಗಳ ಮುಕ್ತಾಯದ ಸಮಯದಲ್ಲಿ ನೀವು ಪಡೆಯುವ ಒಟ್ಟು ಮೊತ್ತಕ್ಕೂ ಯಾವುದೇ ತೆರಿಗೆ ಪಾವತಿ ಮಾಡಬೇಕಾಗಿಲ್ಲ.

# ಗ್ರಾಚ್ಯುಟಿ ಹಣ
ಸರ್ಕಾರೇತರ ನೌಕರರು ಗ್ರಾಚ್ಯುಟಿ ಕಾಯ್ದೆ 1972 ರ ಅಡಿಯಲ್ಲಿ ಉದ್ಯೋಗಿಗೆ ಕಂಪನಿ ತೊರೆದ ಬಳಿಕ ನೀಡಲಾಗುವ ದೀರ್ಘ ಸಮಯದ ಸೇವೆಯ ಗ್ರಾಚ್ಯುಟಿ ಹಣಕ್ಕೆ ಕೂಡ ತೆರಿಗೆ ಪಾವತಿಸುವ ಅವಶ್ಯಕತೆ ಇಲ್ಲ.

ಇದನ್ನೂ ಓದಿ: Delhi High Court: ಸಂಗಾತಿ ಸಂಭೋಗ ಬೇಡ ಅನ್ನುವುದು ಕ್ರೂರಕ್ಕೆ ಸಮ – ಮಹತ್ವದ ತೀರ್ಪು ಕೊಟ್ಟ ಹೈಕೋರ್ಟ್

Leave A Reply

Your email address will not be published.