Vajradehi shri: ಚೈತ್ರಾ ಕುಂದಾಪುರ ಪ್ರಕರಣದಲ್ಲಿ ಕರಾವಳಿಯ ಪ್ರಭಾವಿ ಸ್ವಾಮೀಜಿ ಹೆಸರು ಮುನ್ನಲೆಗೆ !!

Chitra kundapur cheating case rajasekhara swamiji of vajradehi math clarification at Mangalore

vajradehi shree: ಹಿಂದೂ ಧರ್ಮದ ಹೆಸರಿಟ್ಟುಕೊಂಡು ಮೋಸದ ಜಾಲವನ್ನೇ ಹೆಣೆದಿರುವ ಚೈತ್ರಾ ಕುಂದಾಪುರ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವ ಪಡೆದುಕೊಳ್ಳುತ್ತಿದೆ. ಬಗೆದಷ್ಟು ಹೊಸ ಹೊಸ ವಿಚಾರಗಳು, ಪ್ರಭಾವಿಗಳ ಹೆಸರುಗಳು ಕೇಳಿಬರುತ್ತಿವೆ. ಅಂತೆಯೇ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಿ ಸ್ವಾಮಿಜಿಗಳಲ್ಲಿ ಒಬ್ಬರಾದ ವಜ್ರದೇಹಿ ಮಠದ(Vajradehi mutt) ರಾಜಶೇಖರಾನಂದ ಸ್ವಾಮಿಗಳ(rajashekarannda shree) ಹೆಸರು ಈ ಪ್ರಕರಣದಲ್ಲಿ ಮುನ್ನಲೆಗೆ ಬಂದಿದೆ.

ಚೈತ್ರ ಕುಂದಾಪುರ(Chaitra kundapura) ಪ್ರಕರಣ ಬಯವಾಗುತ್ತಿದ್ದಂತೆ ಉತ್ತರ ಕರ್ನಾಟಕ ಭಾಗದ ಪ್ರಭಾವಿ ಸ್ವಾಮಿಗಳಲ್ಲಿ ಒಬ್ಬರಾದ ಅಭಿನವ ಹಾಲಸ್ವಾಮಿಗಳ(Abhinava hala swamy) ಹೆಸರು ಇದರಲ್ಲಿ ತಳುಕುಹಾಕಿಕೊಂಡು, ಸ್ವಾಮಿಗಳು ನಾಪತ್ತೆಯಾಗಿ ಸಿಸಿಬಿ ಪೋಲೀಸರು ಅವರ ಬೆನ್ನತ್ತಿರುವಂತಹ ಘಟನೆಗಳನ್ನು ನಾವು ನೋಡುತ್ತಿದ್ದೇವೆ. ಅಲ್ಲದೆ ಈ ಬೆನ್ನಲ್ಲೇ ಬಿಜೆಪಿ ಪ್ರಬಲ ನಾಯಕ ಸುನಿಲ್ ಕುಮಾರ್ ಹಾಗೂ ವಿಜಯಪುರ ಸಂಹದ ರಮೇಶ್ ಜಿಗಜಿಣಗಿ ಅವರ ಹೆಸರೂ ಈ ಪ್ರಕರಣದಲ್ಲಿ ಮುನ್ನಲೆಗೆ ಬಂದದ್ದನ್ನು ನಾವು ನೋಡಿದ್ದೇವೆ. ಆದರೆ ಈಗ ಅಚ್ಚರಿ ಎಂಬಂತೆ ಸದಾ ಹಿಂದೂಗಳ ಪರ ಧ್ವನಿ ಎತ್ತಿ ಕರಾವಳಿಯಲ್ಲಿ ತಮ್ಮದೇ ಛಾಪು ಮೂಡಿಸಿರುವ ವಜ್ರದೇಹಿ ಮಠದ ಪೀಠಾದಿಪತಿಗಳಾದ ಶ್ರೀ ರಾಜಶೇಖರಾನಂದ ಸ್ವಾಮಿಗಳ ಹೆಸರೂ ಇದೀಗ ಇದರಲ್ಲಿ ಹೆಣೆದುಕೊಂಡಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಹೌದು, ಚೈತ್ರಾ ಕುಂದಾಪುರ ಆದಾಯ ತೆರಿಗೆ ಇಲಾಖೆಗೆ ಬರೆದ ಪತ್ರದಲ್ಲಿ ವಿಶ್ವ ಹಿಂದು ಪರಿಷತ್ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ, ಸದಾ ಹಿಂದೂಗಳ ಪರ ಸೆಟುದುನಿಲ್ಲುವ ಕರಾವಳಿಯ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಯವರ ಹೆಸರನ್ನು ಉಲ್ಲೇಖಿಸಲಾಗಿದೆ. ಜೊತೆಗೆ ಅದರಲ್ಲಿ ಬಿಜೆಪಿ ಟಿಕೆಟ್ ವಿಚಾರದಲ್ಲಿ ವಜ್ರದೇಹಿ ಮಠದ ಸ್ವಾಮೀಜಿ ನನಗೆ ಫೋನ್ ಮಾಡಿದ್ದರು ಎಂದು ಉಲ್ಲೇಖಿಸಿರುವುದು ಇನ್ನೂ ಹಲವು ಅನುಮಾನಗಳಿಗೆ ಕಾರಣವಾಗಿದೆ. ಹೀಗಾಗಿ ಉತ್ತರ ಕರ್ನಾಟಕದ ಭಾಗದ ಅಭಿನವ ಹಾಲಸ್ವಾಮಿ ಬೆನ್ನಲ್ಲೇ ದಕ್ಷಿಣ ಕನ್ನಡದ ವಜ್ರದೇಹಿ ಸ್ವಾಮಿಗಳ ಹೆಸರು ಇದರಲ್ಲಿ ತಗಲಾಕೊಂಡಂತಾಗಿದೆ.

ವಜ್ರದೇಹಿ ಸ್ವಾಮೀಜಿ ಹೇಳೋದೇನು?
ಚೈತ್ರಾ ವಂಚನೆ ಪ್ರಕರಣದಲ್ಲಿ ತಮ್ಮ ಹೆಸರು ಕೂಡ ಕೇಳಿಬರುತ್ತಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಈ ಕುರಿತು ವಿಡಿಯೋ ಮೂಲಕ ಸ್ವಾಮಿಗಳು ಸ್ಪಷ್ಟೀಕರಣ ಕೊಡಲು ಮುಂದಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ನನಗೂ, ಚೈತ್ರಾ ಕುಂದಾಪುರ ವಂಚನೆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ ಜುಲೈ ತಿಂಗಳಲ್ಲಿ ಹಿಂದೂ ಸಂಘಟನೆ ಮುಖಂಡ ಸತ್ಯಜಿತ್ ಸುರತ್ಕಲ್ ನನಗೆ ಫೋನ್ ಮಾಡಿದ್ದರು. ಗೋವಿಂದ ಪೂಜಾರಿ ಟಿಕೆಟ್ ವಿಚಾರದಲ್ಲಿ ನನಗೆ ಪ್ರಶ್ನೆ ಮಾಡಿದ್ದರು. ಆದರೆ ನನಗೆ ಆ ವಿಚಾರದ ಬಗ್ಗೆ ಏನೂ ತಿಳಿದಿರಲಿಲ್ಲ, ನನ್ನಲ್ಲಿ ಯಾಕೆ ಪ್ರಶ್ನೆ ಮಾಡುತ್ತೀರೆಂದು ನಾನು ಅಂದೇ ಕೇಳಿದ್ದೆ. ಆಗ ಅವರೇ ಫೋನ್ ಮಾಡಿ ಈ ಪ್ರಕರಣದಲ್ಲಿ ಚೈತ್ರಾ ಮತ್ತು ಅಭಿನವ ಹಾಲಶ್ರೀ ಹೆಸರಿದೆ ಹೇಳಿದ್ದರು. ನನಗೆ ಚೈತ್ರಾ ಕುಂದಾಪುರ ಪರಿಚಯವಿದ್ದುದರಿಂದ ಆಕೆಗೆ ಫೋನ್ ಮಾಡಿ ಈ ವಿಚಾರದ ಬಗ್ಗೆ ಸ್ಪಷ್ಟನೆ ಕೇಳಿದ್ದೆ.

ಶ್ರೀಗಳಿಗೆ ಚೈತ್ರಾ ಹೇಳಿದ್ದೇನು?
ಸತ್ಯಜಿತ್ ಅವರೊಂದಿಗೆ ಫೋನ್ ನಲ್ಲಿ ಮಾತನಾಡಿದ ನಂತರ, ನನಗೆ ಪ್ರಕರಣದ ಬಗ್ಗೆ ಸ್ವಲ್ಪ ಮಾಹಿತಿ ಸಿಕ್ಕಿತು. ಟಿಕೆಟ್ ಡೀಲ್ ಪ್ರಕರಣದ ಬಗ್ಗೆ ನಾನು ಚೈತ್ರಾ ಕುಂದಾಪುರಗೆ ಕರೆ ಮಾಡಿ ಮೂರು ಕೋಟಿ ದುಡ್ಡಿನ ಬಗ್ಗೆ ಕೇಳಿದಾಗ, ಒಂದೂವರೆ ಕೋಟಿ ಇದ್ದಿದ್ದು ಆಗಲೇ ಮೂರು ಕೋಟಿ ಆಯ್ತಾ? ಇನ್ನು ಅದು 4-5 ಕೋಟಿ ಆಗಬಹುದು ಎಂದು ಆಕೆ ಹೇಳಿದ್ದಳು. ಆಗ ನಾನು ಘಟನೆ ಬಗ್ಗೆ ಸತ್ಯ ಹೇಳು ಎಂದಿದ್ದೆ. ಆಕೆ ತನಗೇನೂ ಗೊತ್ತಿಲ್ಲ ಎಂದಿದ್ದರು ಎಂದು ಸ್ವಾಮೀಜಿ ಹೇಳಿದ್ದಾರೆ.

ಇಷ್ಟೇ ಅಲ್ಲದೆ ನಾವು ವಿಶ್ವ ಹಿಂದೂ ಪರಿಷತ್ತಿನಲ್ಲಿ ಗುರುತಿಸಿಕೊಂಡಿದ್ದರಿಂದ ಶರಣ್ ಪಂಪ್ ವೆಲ್ ಅವರಿಗೂ ವಿಷಯ ತಿಳಿಸಿದ್ದೇವೆ. ಆಗ ಅವರು ‘ನಿಮಗೆ ಅವರ ಸಂಪರ್ಕವೇ ಇಲ್ಲಾಂದ್ರೆ ನೀವ್ಯಾಕೆ ಅಷ್ಟು ತಲೆ ಬಿಸಿ ಮಾಡ್ತೀರಿ ಬಿಟ್ಹಾಕಿ’ ಎಂದು ಹೇಳಿದ್ದರು. ಆದರೀಗ ನನ್ನ ಹೆಸರನ್ನು ಐಟಿ ಇಲಾಖೆಗೆ ಬರೆದ ಪತ್ರದಲ್ಲಿ ಚೈತ್ರಾ ಕುಂದಾಪುರ ಉಲ್ಲೇಖ ಮಾಡಿರುವುದಕ್ಕೆ ತುಂಬಾ ಬೇಸರ ಆಗಿದೆ. ಹಣದ ವಿಚಾರದಲ್ಲಿ ತನಗೇನೂ ಗೊತ್ತಿಲ್ಲ, ಚೈತ್ರಾಳ ಪರಿಚಯ ಇದ್ದುದು ಮಾತ್ರ ಸತ್ಯ ಎಂದು ಅವರು ತಿಳಿಸಿದ್ದಾರೆ. ಆಕೆಯ ಜೊತೆಗೆ ಬೇರೇನೂ ಸಂಪರ್ಕ, ಮಾತುಕತೆ, ವಹಿವಾಟು ಇಲ್ಲ ಎಂದು ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Bengalore: ಬೆಂಗಳೂರಿನ ಜನರೇ.. ನಿಮಗಿನ್ನು ಕುಡಿಯೋದಕ್ಕೆ ಸಿಗಲ್ಲ ಈ ನೀರು – ಗೃಹ ಸಚಿವ ಪರಮೇಶ್ವರ್ ಕೊಟ್ರು ಅಚ್ಚರಿಯ ಸ್ಟೇಟ್ಮೆಂಟ್

Leave A Reply

Your email address will not be published.