Home National DA Hike: ದೀಪಾವಳಿಗೂ ಮುನ್ನ ಸರಕಾರಿ ನೌಕರರಿಗೆ ಸಿಗಲಿದೆ ಬಂಪರ್‌ ಗಿಫ್ಟ್‌! ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ!

DA Hike: ದೀಪಾವಳಿಗೂ ಮುನ್ನ ಸರಕಾರಿ ನೌಕರರಿಗೆ ಸಿಗಲಿದೆ ಬಂಪರ್‌ ಗಿಫ್ಟ್‌! ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ!

Hindu neighbor gifts plot of land

Hindu neighbour gifts land to Muslim journalist

DA Hike: ಸರಕಾರಿ ನೌಕರರೇ ನಿಮಗೊಂದು ಭರ್ಜರಿ ಸಿಹಿ ಸುದ್ದಿ. ದೀಪಾವಳಿ ಮುನ್ನವೇ ಬಂಪರ್‌ ಗಿಫ್ಟ್‌ ನಿಮಗೆ ಸಿಗಬಹುದು. ಹೌದು, ಕೇಂದ್ರ ಸರಕಾರವು ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು (DA Hike)ಹೆಚ್ಚಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಈ ಬಾರಿ ನೌಕರರ ಡಿಎ ಯಲ್ಲಿ ಶೇ.3ರಷ್ಟು ಹೆಚ್ಚಳವಾಗಬಹುದು. ಸರಕಾರಿ ನೌಕರರು, ಪಿಂಚಣಿದಾರರು ಪ್ರಸ್ತುತ 42 ಪ್ರತಿಶತದಷ್ಟು ತುಟ್ಟಿ ಭತ್ಯೆ ಪಡೆಯುತ್ತಿದ್ದಾರೆ. ಈ ಮೂಲಕ 3 ಪ್ರತಿಶತ ಹೆಚ್ಚಳದ ನಂತರ ಇದು 45 ಪ್ರತಿಶತಕ್ಕೆ ಏರಿಕೆ ಆಗುತ್ತದೆ. ಸರಕಾರ ಶೀಘ್ರದಲ್ಲೇ ಈ ಸಿಹಿ ಸುದ್ದಿ ಘೋಷಿಸಬಹುದು.

ಈ ಬಾರಿ ಡಿಎ ಹೆಚ್ಚಿಸಿದರೆ, ಅದು ಮೂರು ಪ್ರತಿಶತದಷ್ಟು ಹೆಚ್ಚಾಗಬಹುದು. ನಾಲ್ಕು ಪರ್ಸೆಂಟ್ ಡಿಎ ಹೆಚ್ಚಳಕ್ಕೆ ಬೇಡಿಕೆ ಇಡುತ್ತಿದ್ದೇವೆ ಎಂದರು. ಇದನ್ನು ಸರ್ಕಾರ ಒಪ್ಪಿಕೊಂಡರೆ ಕೇಂದ್ರ ನೌಕರರ ಡಿಎ ಶೇ.46ಕ್ಕೆ ಏರಿಕೆಯಾಗಲಿದೆ ಎಂದು ಅಖಿಲ ಭಾರತ ರೈಲ್ವೇಮೆನ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಶಿವಗೋಪಾಲ್ ಮಿಶ್ರಾ ಅವರು ಹೇಳಿದ್ದಾರೆ.

ಉದ್ಯೋಗಿ ಪ್ರತಿ ತಿಂಗಳು 36,500 ರೂ ಮೂಲ ವೇತನವನ್ನು ಪಡೆದರೆ, ಪ್ರಸ್ತುತ ಅವರ ಡಿಎ 15,330 ರೂ. ಜುಲೈ 2023 ರಿಂದ ಮೂರು ಪ್ರತಿಶತದಷ್ಟು ಡಿಎ ಹೆಚ್ಚಿಸಿದರೆ, ನಂತರ ಅವರ ಡಿಎ 1,095 ರಿಂದ 16,425 ಕ್ಕೆ ಹೆಚ್ಚಾಗುತ್ತದೆ.

ಜನವರಿ 1, 2020 ರಿಂದ ಜೂನ್ 30, 2021 ರ ನಡುವೆ ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ ಡಿಎ ಪಾವತಿಸಿಲ್ಲ. ಈ ಸಮಯದಲ್ಲಿ ಕೊರೋನಾ ತಾಂಡವಾಡುತ್ತಿತ್ತು. ಹಾಗಾಗಿ 18 ತಿಂಗಳವರೆಗೆ ಅಂದರೆ ಕೊರೊನಾ ಸಮಯದಲ್ಲಿ ಹಾಗೂ ಪಿಂಚಣಿದಾರರಿಗೆ ಕೂಡ ತುಟ್ಟಿಭತ್ಯೆ (DR)ನ್ನು ಕೂಡಾ ಪಾವತಿಸಿಲ್ಲ. ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು ಇದರ ಮೂಲ ಉದ್ದೇಶವಾಗಿತ್ತು.

ಇದನ್ನೂ ಓದಿ: ಮಹಿಳೆಯರೇ, ನಿಮಗೆ 21 ವರ್ಷ ಆಗಿದೆಯೇ? ಹಾಗಾದರೆ ದೊರಕಲಿದೆ ತಿಂಗಳಿಗೆ ಸಾವಿರ ರೂಪಾಯಿ!!! ಹೊಸ ಯೋಜನೆ ಜಾರಿಗೆ ತಂದ ಸರಕಾರ!!!