Women Reservation Bill: ಇನ್ಮುಂದೆ ಮಹಿಳೆಯರಿಗೆ MP, MLA ಆಗೋದು ಸುಲಭ, ಇವತ್ತು ಮಂಡನೆ ಆಗ್ತಿದೆ ಹೊಸ ಕಾಯ್ದೆ !
Cabinet approves Women Reservation Bill granting 33 percent seats to women in Parliament
Women Reservation Bill: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಗೆ ಸಂಪುಟದಲ್ಲಿ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಹಾಗಾಗಿ ಇಂದು ಮಂಗಳವಾರ ಹೊಸ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ(Women Reservation Bill) ವಿಧೇಯಕ ಮಂಡನೆಯಾಗುವ ಸಾಧ್ಯತೆ ಇದೆ. ಇನ್ನು ಮುಂದೆ ರಾಜ್ಯ ವಿಧಾನಸಭೆಗಳಲ್ಲಿ ಮತ್ತು ಲೋಕಸಭೆಗಳಿಗೆ ಹೆಚ್ಚಿನ ಸಂಖ್ಯೆಯ ಮಹಿಳೆಯರು ಪ್ರವೇಶಿಸಲಿದ್ದಾರೆ.
ಭಾನುವಾರ ಸೆಪ್ಟೆಂಬರ್ 17ನೇ ತಾರೀಕಿನಂದು ನಡೆದ ಸರ್ವ ಪಕ್ಷ ಸಭೆಯಲ್ಲಿ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಮಹಿಳಾ ಮೀಸಲಾತಿ ಮಸೂದೆ ಮಂಡನೆಯನ್ನು ಅಂಗೀಕರಿಸುವಂತೆ ಒತ್ತಾಯ ಮಾಡಿದ್ದವು. ಇದೇ ಹೊಸ ಸಂಸತ್ತಿನಲ್ಲಿ ನಡೆಯುತ್ತಿರುವ ವಿಶೇಷ ಅಧಿವೇಶನದಲ್ಲಿ ಮಸೂದೆಯನ್ನು ಅಂಗೀಕರಿಸಬೇಕು ಎಂದು ಒತ್ತಾಯಿಸಲಾಗಿತ್ತು. ಬೇಡಿಕೆಯ ಬೆನ್ನಿಗೆ ಕೇಂದ್ರ ಸಂಪುಟ ಕೂಡ ಮಹಿಳಾ ಮೀಸಲಾತಿ ಮಸೂದೆಗೆ ಅಸ್ತು ಎಂದಿದೆ.
ರಾಜ್ಯ ವಿಧಾನಸಭೆಗಳಲ್ಲಿ ಮತ್ತು ಲೋಕಸಭೆಗಳಲ್ಲಿ ಮಹಿಳೆಯರಿಗೆ ಒಟ್ಟು 33% ನಷ್ಟು ಮೀಸಲಾತಿ ಕಲ್ಪಿಸುವ ಸಂಬಂಧಿಸಿದ ಮಸೂದೆ ಇದಾಗಿದೆ. ವಾಸ್ತವವಾಗಿ ಈ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಿ 23 ವರ್ಷಗಳೇ ಕಳೆದು ಹೋದವು. 1996ರಲ್ಲಿ ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿತ್ತು. ಆದರೆ ಆಗ ಅದಕ್ಕೆ ಉಭಯ ಸದನಗಳ ಒಪ್ಪಿಗೆ ಸಿಕ್ಕಿರಲಿಲ್ಲ. ಇದೀಗ ಮಹಿಳಾ ಮೀಸಲಾತಿ ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ 33% ಆಗಿ ಮಸೂದೆ ಅಂಗೀಕಾರ ಆಗುವುದು ಬಹುತೇಕ ಖಚಿತವಾಗಿದೆ. ಈಗ ಲೋಕಸಭೆಯಲ್ಲಿ ಮಹಿಳೆಯರ ಪಾಲು 15 ಪರ್ಸೆಂಟ್ ಗಿಂತ ಕಮ್ಮಿ ಇದೆ. ಮತ್ತು ಹಲವು ವಿಧಾನಸಭೆಗಳಲ್ಲಿ ಮಹಿಳೆಯರು 10% ಗಿಂತಲೂ ಕಮ್ಮಿ ಇದ್ದಾರೆ.
ಇದನ್ನೂ ಓದಿ: ಇಂದು ಈ ರಾಶಿಯವರಿಗೆ ಸಮಾಜದಲ್ಲಿ ಗೌರವ ಹೆಚ್ಚಳ! ಖುಷಿಯಿಂದ ಸಾಗುತ್ತೆ ಈ ದಿನ!!!