ISRO: ಗಣೇಶ ಹಬ್ಬದಂದೇ ಸಖತ್ ಗುಡ್ ನ್ಯೂಸ್ ಕೊಟ್ಟ ‘ಇಸ್ರೋ’ – ಸೂರ್ಯನ ಕುರಿತು ‘ಆದಿತ್ಯ’ನಿಂದ ಬಂತೊಂದು ಬಿಗ್ ಅಪ್ಡೇಟ್
Aditya L1 Mission Launch ಚಂದ್ರಯಾನ- 3ರ ಯಶಸ್ಸಿನ ಗುಂಗಿನಲ್ಲಿರುವ ಭಾರತ, ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ವಿಶೇಷ ಸಾಧನೆ ಮಾಡಿದೆ. ಸೂರ್ಯನ ಬಗ್ಗೆ ಸಂಶೋಧನೆ ನಡೆಸಲು ಆರಂಭಿಸಲಾದ ಇಸ್ರೋದ ಆದಿತ್ಯ ಎಲ್ -1 ಮಿಷನ್ ಮತ್ತೊಂದು ಮೈಲಿಗಲ್ಲನ್ನು ಬರೆದಿದ್ದು, ಆದಿತ್ಯ-ಎಲ್ 1 ವೈಜ್ಞಾನಿಕ ಡೇಟಾವನ್ನು ಸಂಗ್ರಹಿಸಲು ಆರಂಭಿಸಿರುವ ಕುರಿತು ಇಸ್ರೋ ಮಾಹಿತಿ ಹಂಚಿಕೊಂಡಿದೆ
ಸೂರ್ಯನ ಅಧ್ಯಯನಕ್ಕಾಗಿ ನೌಕೆ ಕಳುಹಿಸಿದ ಜಗತ್ತಿನ ಮೂರನೇ ದೇಶ ಎಂಬ ವಿಶಿಷ್ಟ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಭಾರತದ ಮೊದಲ ಸೌರ ಯೋಜನೆ ಆದಿತ್ಯ ಎಲ್1(Aditya L1 Mission Launch) ಯಶಸ್ವಿಯಾಗಿ ಉಡಾವಣೆಗೊಂಡಿದ್ದು ಗೊತ್ತಿರುವ ಸಂಗತಿ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಆದಿತ್ಯ ಎಲ್1 ನೌಕೆಯನ್ನು ಹೊತ್ತ ಪಿಎಸ್‌ಎಲ್‌ವಿ- ಸಿ57 ಸೂರ್ಯನ ಕಡೆಗಿನ 125 ದಿನಗಳ ತನ್ನ ಪ್ರಯಾಣವನ್ನು ಶನಿವಾರ ಪ್ರಾರಂಭ ಮಾಡಿದೆ. ಸೂರ್ಯನ ಬಗ್ಗೆ ಸಂಶೋಧನೆ ನಡೆಸಲು ಆರಂಭಿಸಲಾದ ಇಸ್ರೋದ ಆದಿತ್ಯ ಎಲ್ -1 ಮಿಷನ್ ಮತ್ತೊಂದು ಮೈಲಿಗಲ್ಲನ್ನು ಬರೆದಿದೆ. ಆದಿತ್ಯ-ಎಲ್ 1 ವೈಜ್ಞಾನಿಕ ಡೇಟಾವನ್ನು ಸಂಗ್ರಹಿಸಲು ಆರಂಭಿಸಿರುವ ಕುರಿತು ಇಸ್ರೋ ಮಾಹಿತಿ ಹಂಚಿಕೊಂಡಿದೆ.
ಸ್ಟೆಪ್ಸ್ ಉಪಕರಣದ ಸಂವೇದಕಗಳು ಭೂಮಿಯಿಂದ 50,000 ಕಿ.ಮೀ.ಗಿಂತ ಹೆಚ್ಚಿನ ದೂರದಲ್ಲಿ ಸೂಪರ್-ಥರ್ಮಲ್ ಮತ್ತು ಶಕ್ತಿಯುತ ಅಯಾನುಗಳು ಮತ್ತು ಎಲೆಕ್ಟ್ರಾನ್ಗಳನ್ನು ಅಳೆಯಲು ಆರಂಭಿಸಿವೆ. ಈ ದತ್ತಾಂಶವು ವಿಜ್ಞಾನಿಗಳಿಗೆ ಭೂಮಿಯ ಸುತ್ತಲಿನ ಕಣಗಳ ವರ್ತನೆಯ ಬಗ್ಗೆ ಮಾಹಿತಿ ತಿಳಿಯಲು ಸಹಕರಿಸುತ್ತದೆ. ಈ ಚಿತ್ರದ ಮೂಲಕ ಒಂದು ಘಟಕದಿಂದ ಸಂಗ್ರಹ ಮಾಡಿದ ಶಕ್ತಿಯುತ ಕಣ ಪರಿಸರದಲ್ಲಿನ ವ ಪ್ರದರ್ಶಿಸುತ್ತದೆ ಎಂದು ಮಾಹಿತಿ ನೀಡಿದೆ. ಚಂದ್ರಯಾನ- 3ರ ಯಶಸ್ಸಿನ ಸಂಭ್ರಮದಲ್ಲಿರುವ ಭಾರತಕ್ಕೆ ಇದು ಜಾಗತಿಕ ಮಟ್ಟದಲ್ಲಿ ಮತ್ತೊಂದು ಹಿರಿಮೆಯ ಗರಿಯನ್ನು ತನ್ನ ಮಡಿಲಿಗೆ ಬಾಚಿಕೊಳುವಲ್ಲಿ ಯಶಸ್ವಿಯಾಗಿದೆ. ಈ ಕುರಿತು ಟ್ವಿಟ್ ಮಾಡಿರುವ ಇಸ್ರೋ, ಆದಿತ್ಯ-ಎಲ್ 1 ವೈಜ್ಞಾನಿಕ ಡೇಟಾವನ್ನು ಸಂಗ್ರಹಿಸಲು ಪ್ರಾರಂಭ ಮಾಡಿದೆ ಎಂದು ಮಾಹಿತಿ ಹಂಚಿಕೊಂಡಿದೆ.
Aditya-L1 Mission:
Aditya-L1 has commenced collecting scientific data.The sensors of the STEPS instrument have begun measuring supra-thermal and energetic ions and electrons at distances greater than 50,000 km from Earth.
This data helps scientists analyze the behaviour of… pic.twitter.com/kkLXFoy3Ri
— ISRO (@isro) September 18, 2023