Asia Cup 2023: ಪಂದ್ಯದ ನಂತರವೂ ಮನಗೆದ್ದ ಸಿರಾಜ್‌; ಬಹುಮಾನವಾಗಿ ಬಂದ ಹಣವನ್ನು ಮೈದಾನದ ಸಿಬ್ಬಂದಿಗೆ ನೀಡಿದ ವೇಗಿ!!!

Sports news Asia Cup 2023 Mohammed Siraj donates his 'Player of the Match' prize money to ground staff

Asia Cup 2023: ಏಷ್ಯಾಕಪ್‌ 2023ರ (Asia Cup 2023) ಅಂತಿಮ ಪಂದ್ಯದಲ್ಲಿ ಶ್ರೀಲಂಕಾವನ್ನು ಭಾರತ 10ವಿಕೆಟ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಭಾರತ ತಂಡ ಎಂಟನೇ ಬಾರಿಗೆ ಏಷ್ಯಾಕಪ್‌ ಪ್ರಶಸ್ತಿ ಗೆದ್ದುಕೊಂಡಿದೆ. ಅಂತಿಮ ಪಂದ್ಯದಲ್ಲಿ ವೇಗಿ ಮೊಹಮ್ಮದ್‌ ಸಿರಾಜ್‌ ವಿಧ್ವಂಸಕ ದಾಳಿ ನಡೆಸಿ ಶ್ರೀಲಂಕಾ ತಂಡದ ಬ್ಯಾಂಟಿಂಗ್‌ ಕ್ರಮಾಂಕವನ್ನು ಕಸಿದುಕೊಂಡರು. ಸಿರಾಜ್‌ ಅವರು 7 ಓವರ್‌ನಲ್ಲಿ ಒಟ್ಟು 6 ವಿಕೆಟ್‌ ಪಡೆದು ದಾಖಲೆಯನ್ನು ನಿರ್ಮಿಸಿದರು.

ಈ ಪಂದ್ಯದಲ್ಲಿ ಶ್ರೀಲಂಕಾ ನಾಯಕ ದಸುನ್ ಶನಕ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ ಭಾರತದ ಬೌಲರ್‌ಗಳು ಲಂಕಾವನ್ನು ಕೇವಲ 50 ರನ್‌ಗಳಿಗೆ ಆಲೌಟ್ ಮಾಡಿದರು. ಬಳಿಕ 6.1 ಓವರ್‌ಗಳಲ್ಲಿ ಟೀಂ ಇಂಡಿಯಾ ಸುಲಭವಾಗಿ ಗೆಲುವು ದೊರಕಿತು.

ಈ ಪಂದ್ಯದ ಹೀರೋ ಮೊಹಮ್ಮದ್ ಸಿರಾಜ್ 6 ವಿಕೆಟ್ ಪಡೆದು ಶ್ರೀಲಂಕಾದ ಬ್ಯಾಟಿಂಗ್ ಧ್ವಂಸ ಮಾಡಿದರು. ಅತ್ಯುತ್ತಮ ಆಟವಾಡಿದ ಸಿರಾಜ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತು. ಅದರ ನಂತರ ಅವರು ಮತ್ತೊಂದು ಹೃದಯ ಗೆಲ್ಲುವ ಕೆಲಸವನ್ನು ಮಾಡಿದರು.

ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಸಿರಾಜ್ ಅವರಿಗೆ 5000 ಅಮೆರಿಕನ್ ಡಾಲರ್ ಬಹುಮಾನ ನೀಡಲಾಯಿತು. ಅಂದರೆ ಸುಮಾರು 4,15,451 ಭಾರತೀಯ ರೂಪಾಯಿಗಳು. ಸಿರಾಜ್‌ ತಮಗೆ ಲಭಿಸಿದ ಈ ಎಲ್ಲಾ ಹಣವನ್ನು ಶ್ರೀಲಂಕಾದ ಗ್ರೌಂಡ್‌ ಸ್ಟಾಫ್‌ಗೆ ನೀಡಿದ್ದಾರೆ. ಈ ಕೆಲಸಕ್ಕೆ ಸಿರಾಜ್‌ ಅವರಿಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ. ಶ್ರೀಲಂಕಾದಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಮಳೆಯು ಪ್ರತಿಯೊಂದು ಪಂದ್ಯಕ್ಕೂ ಅಡ್ಡಿಯಾಯಿತು. ಆದರೆ ಶ್ರೀಲಂಕಾದ ಮೈದಾನದ ಸಿಬ್ಬಂದಿ ಪ್ರತಿ ಪಂದ್ಯದಲ್ಲೂ ಮೈದಾನವನ್ನು ಉತ್ತಮಗೊಳಿಸಲು ತಮ್ಮ ಎಲ್ಲ ಪ್ರಯತ್ನಗಳನ್ನು ಮಾಡಿ, ಆಟ ಆಡಲು ಸುಗಮ ದಾರಿ ಮಾಡಿಕೊಟ್ಟದ್ದರು.

ಇದನ್ನೂ ಓದಿ: ರಾಜ್ಯದ ಮಕ್ಕಳ ಆರೈಕೆಗಾಗಿ ಹೊಸ ಯೋಜನೆ ಘೋಷಣೆ ಮಾಡಿದ ಸರಕಾರ! ಗೃಹಲಕ್ಷ್ಮಿ, ಗೃಹಜ್ಯೋತಿ ನಂತರ ಹೊಸ ಯೋಜನೆ ಇಲ್ಲಿದೆ ವಿವರ!!!

Leave A Reply

Your email address will not be published.