Google pay: ಫೋನ್ ಪೇ, ಗೂಗಲ್ ಪೇ ಮತ್ತು ಪೇಟಿಎಂ ಬಳಕೆದಾರರೇ ಇತ್ತ ಗಮನಿಸಿ- ಇಲ್ಲಿದೆ ನೋಡಿ ನಿಮಗೊಂದು ಮಹತ್ವದ ಮಾಹಿತಿ
National news here is important information for phonepe Google pay and paytm users
Google Pay: ಗೂಗಲ್ ಪೇ (Google Pay) ಅತ್ಯಂತ ಜನಪ್ರಿಯ ಡಿಜಿಟಲ್ ಪಾವತಿ ಅಪ್ಲಿಕೇಶನ್ ಅನ್ನೋ ವಿಚಾರ ಗೊತ್ತಿರದೆ ಇರುವವರೇ ವಿರಳ. ಈ ಅಪ್ಲಿಕೇಷನ್ ಅತೀ ಸುಲಭ ಹಾಗೂ ಸುರಕ್ಷಿತ ಪಾವತಿ ವಿಧಾನವನ್ನು ಹೊಂದಿದ್ದು, ಹಣ ಪಾವತಿ ಮಾಡಲು ಜೊತೆಗೆ ಹಣ ವರ್ಗಾವಣೆಗಾಗಿ ಒಂದಕ್ಕಿಂತ ಹೆಚ್ಚು ವಿಭಿನ್ನ ಬ್ಯಾಂಕ್ ಖಾತೆಗಳನ್ನು ಹೊಂದಬಹುದಾಗಿದೆ. ಹೀಗಾಗಿ, ಮನೆಯ ದಿನನಿತ್ಯದ ವೆಚ್ಚ ಹಾಗೂ ಸ್ವಂತ ವೆಚ್ಚಗಳನ್ನು ಭರಿಸಲು ನೆರವಾಗುತ್ತದೆ. ಗೂಗಲ್ ಪೇ ಮಾತ್ರವಲ್ಲದೇ ಪೇಟಿಎಂ, ಫೋನ್ ರೀತಿಯ ಅಪ್ಲಿಕೇಶನ್ ಗಳ ಮೂಲಕ ಕೂಡ ವಹಿವಾಟುಗಳನ್ನು ಸುಲಭವಾಗಿ ಮಾಡಬಹುದಾಗಿದೆ.
ಗೂಗಲ್ ಪೇ ಅಪ್ಲಿಕೇಶನ್ನಲ್ಲಿ ಈಗ ಆಧಾರ್ ನಂಬರ್ ಮೂಲಕ ಸೈನ್ ಇನ್ ಆಗಲು ಅವಕಾಶ ಕಲ್ಪಿಸಲಾಗಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ (NPCI) ಮೂಲಕ ಈ ಪ್ರಕ್ರಿಯೆ ನಡೆಸಲು ಸಾಧ್ಯವಾಗಿದೆ. ಗೂಗಲ್ ಪೇ ಮೂಲಕ ನೀವು ಸುಲಭವಾಗಿ ಹಣ ವರ್ಗಾವಣೆ, ಪಡೆಯುವ ಪ್ರಕ್ರಿಯೆ ಮತ್ತಷ್ಟು ಸರಳ ಹಾಗೂ ಸುಲಭವಾಗಿ ಮಾಡಬಹುದು.ಫೋನ್ ಸಂಖ್ಯೆಯನ್ನು ಖಾತೆ ಸಂಖ್ಯೆಗೆ ಲಿಂಕ್ ಮಾಡಿಕೊಂಡರೆ ಯಾವುದೇ ತೊಂದರೆಗಳಿಲ್ಲದೆ ವಹಿವಾಟು ನಡೆಸಲು ಸಾಧ್ಯವಾಗುತ್ತದೆ. .
ಕ್ಯೂಆರ್ ಕೋಡ್ (QR Code Scan)ಅನ್ನು ಸ್ಕ್ಯಾನ್ ಮಾಡಿ ಮತ್ತು ನಿಮ್ಮ ಪಾಸ್ವರ್ಡ್ ನಮೂದಿಸಿ ಮತ್ತು ವಹಿವಾಟು ಸೆಕೆಂಡುಗಳಲ್ಲಿ ಮಾಡಬಹುದು. ಆದಾಗ್ಯೂ, ಈ ವಿಧಾನ ಅನುಸರಿಸುವ ಮೂಲಕ ಕೆಲವೊಂದು ಅಪಾಯದ ಸಾಧ್ಯತೆ ಬಗ್ಗೆ ತಜ್ಞರು ಮುನ್ನೆಚ್ಚರಿಕೆ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ, ಕ್ಯೂಆರ್ ಕೋಡ್ಗಳು (QR Code)ನಕಲಿಯೇ ಅಥವಾ ಅಸಲಿಯೇ ಎಂದು ತಿಳಿದಿರುವುದು ಅವಶ್ಯಕ.
ಇತ್ತೀಚಿನ ದಿನಗಳಲ್ಲಿ ನಕಲಿ ಕ್ಯೂಆರ್ ಕೋಡ್ಗಳು ಹೆಚ್ಚು ಕಂಡುಬರುತ್ತಿವೆ. ಹೀಗಾಗಿ, ನಕಲಿ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ, ನಿಮ್ಮ ವೈಯಕ್ತಿಕ ಡೇಟಾ ಹ್ಯಾಕ್ ಆಗುವ ಸಂಭವ ಹೆಚ್ಚು. ಅಷ್ಟೆ ಅಲ್ಲದೇ, ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಸ್ಕ್ಯಾಮರ್ಗಳು ನಿಮ್ಮನ್ನು ಫಿಶಿಂಗ್ ವೆಬ್ಸೈಟ್ಗಳಿಗೆ ಕರೆದೊಯ್ಯುವ ಸಾಧ್ಯತೆ ಇದೆ. ನೀವೇನಾದರೂ ನಿಮ್ಮ ಹೆಸರು, ಸಂಪರ್ಕ ಸಂಖ್ಯೆ, ವಿಳಾಸ, ಬ್ಯಾಂಕ್ ವಿವರಗಳಂತಹ ಮಾಹಿತಿಯನ್ನು ನೀವು ನೀಡಿದರೆ ವಂಚಕರು ನಿಮ್ಮ ಗುರುತನ್ನು ಕದಿಯುವ ಸಾಧ್ಯತೆಯಿದೆ.
ಹಾಗಿದ್ರೆ, ನಕಲಿ ಕ್ಯೂಆರ್ ಕೋಡ್ ಅನ್ನು ಹೇಗೆ ಗುರುತಿಸೋದು?
ಯಾವುದೇ ಅಂಗಡಿ ಅಥವಾ ರೆಸ್ಟೋರೆಂಟ್ ನಲ್ಲಿ ಕ್ಯೂಆರ್ ಕೋಡ್ ಗಳನ್ನು ಸ್ಕ್ಯಾನ್ ಮಾಡುವ ಮೊದಲು ಕೋಡ್ ಆಕಾರವನ್ನು ಸೂಕ್ಷ್ಮವಾಗಿ ಗಮನಿಸಿ. ಒಂದು ವೇಳೆ ಆಕಾರವನ್ನು ತಿರುಚಲಾಗಿದೆ ಅಥವಾ ಕೋಡ್ ಅನ್ನು ಯಾವುದಕ್ಕಾದರೂ ಅಂಟಿಸಲಾಗಿದ್ದರೆ ಕ್ಯೂಆರ್ ಕೋಡ್ನಲ್ಲಿ ಪಾವತಿಸದೆ ಇರುವುದು ಉತ್ತಮ. ಏಕೆಂದರೆ ಆಕಾರವನ್ನು ಬದಲಾಯಿಸಿದ ಕ್ಯೂಆರ್ ಕೋಡ್ ನಕಲಿಯಾಗಿರುವ ಸಂಭವ ಹೆಚ್ಚಿದೆ. ಹೀಗಾಗಿ, ಸ್ಕ್ಯಾನ್ ಮಾಡಿ ಪಾವತಿಸುವ ಬದಲಿಗೆ ನಗದು ರೂಪದಲ್ಲಿ ಪಾವತಿ ಮಾಡಲು ಪ್ರಯತ್ನಿಸಿ.
ನಿಮ್ಮ ಇ-ಮೇಲ್ ಐಡಿಗಳಲ್ಲಿ ಇಲ್ಲವೇ ಜಂಕ್ ಮೇಲ್ ಮೂಲಕ ನಿಮಗೆ ಯಾವುದೇ ಕ್ಯೂಆರ್ ಕೋಡ್ ಬಂದರು ಕೂಡ ಅದನ್ನು ಎಂದಿಗೂ ಸ್ಕ್ಯಾನ್ ಮಾಡಲು ಹೋಗದಿರಿ. ನೀವು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಯುಪಿಐ ಪಿನ್ ಅನ್ನು ನಮೂದಿಸಿದರೆ, ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗುವ ಸಂಭವವನ್ನು ಕೂಡ ಅಲ್ಲಗಳೆಯುವಂತಿಲ್ಲ.
ನೀವು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದ ಬಳಿಕ, ಆ ವ್ಯಾಪಾರಿ ಇಲ್ಲವೇ ಅಂಗಡಿಯ ಹೆಸರನ್ನು ಪರಿಶೀಲಿಸಿ. ಹಣವನ್ನು ಯಾವ ಹೆಸರಿನಲ್ಲಿ ವರ್ಗಾವಣೆ ಆಗಲಿದೆ ಎಂಬುದನ್ನು ತಿಳಿದುಕೊಳ್ಳಿ. ಅಂಗಡಿಯವನ ಹೆಸರು ನಿಮ್ಮ ಮೊಬೈಲ್ ಪರದೆಯಲ್ಲಿ ಕಾಣಿಸಿಕೊಂಡರೆ ಮಾತ್ರವೇ ಸ್ಕ್ಯಾನ್ ಮಾಡಿ ಪಾವತಿ ಮಾಡಿ. ಅಂಗಡಿ ಅಥವಾ ಮಾರಾಟಗಾರರ ಹೆಸರು ಹೊಂದಿಕೆಯಾಗದಿದ್ದರೆ ಹುಷಾರಾಗಿರಿ. ನೀವು ಮೋಸ ಹೋಗುವ ಸಾಧ್ಯತೆಯ ಜೊತೆಗೆ ನಿಮ್ಮ ವೈಯುಕ್ತಿಕ ಮಾಹಿತಿ ಕೂಡ ಸೋರಿಕೆ ಆಗಬಹುದು.
ಇದನ್ನೂ ಓದಿ: Shocking News: ದೇವಸ್ಥಾನದಲ್ಲಿ ನಮಾಜ್ ಮಾಡಿದ ತಾಯಿ, ಮಗಳು- ಮುಂದಾದದ್ದೇ ವಿಚಿತ್ರ