Child Care Center: ರಾಜ್ಯದ ಮಕ್ಕಳ ಆರೈಕೆಗಾಗಿ ಹೊಸ ಯೋಜನೆ ಘೋಷಣೆ ಮಾಡಿದ ಸರಕಾರ! ಗೃಹಲಕ್ಷ್ಮಿ, ಗೃಹಜ್ಯೋತಿ ನಂತರ ಹೊಸ ಯೋಜನೆ ಇಲ್ಲಿದೆ ವಿವರ!!!
Karnataka news political news child care centre in Karnataka koosina Mane logo launching by CM Siddaramaiah
Child Care Center: ಮಕ್ಕಳ ರಕ್ಷಣೆಗಾಗಿ ಕರ್ನಾಟಕದಲ್ಲಿ ಕೂಸಿನ ಮನೆ ಯೋಜನೆ (ಶಿಶು ಪಾಲನಾ ಕೇಂದ್ರ) ಜಾರಿಗೊಳಿಸುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಹೈದರಾಬಾದ್ ನಿಜಾಮರ ಆಡಳಿತದಲ್ಲಿದ್ದ ಕೆಲವೊಂದು ಪ್ರದೇಶಗಳು ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿದರೂ ಸೇರಲಿಲ್ಲ. ಬರೋಬ್ಬರಿ ಒಂದು ವರ್ಷದ ನಂತರ ಈ ಪ್ರದೇಶಗಳನ್ನು ಸೇರಿಸಲಾಯಿತು. ಭಾರತಕ್ಕೆ ಸೇರಿದ ಆ ಜಿಲ್ಲೆಗಳೇ ಕಲಬುರಗಿ, ಬೀದರ್ ಮತ್ತು ರಾಯಚೂರು.
ಹಾಗಾಗಿ ಆ ಜಿಲ್ಲೆಗಳ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಹಾಗಾಗಿ ನಿನ್ನೆ ಕಲ್ಯಾಣ ಕರ್ನಾಟಕ ದಿನಾಚರಣೆ ಕಲಬುರಗಿಯಲ್ಲಿ ನಡೆಯಿತು. ಇಲ್ಲಿ ಸಿದ್ದರಾಮಯ್ಯ ಅವರು ಧ್ವಜಾರೋಹಣ ಮಾಡಿ, ನಂತರ, ಹಲವು ಯೋಜನೆಗಳ ಬಗ್ಗೆ ಮಾತನಾಡುತ್ತ, ಮಕ್ಕಳ ಲಾಲನೆ ಪಾಲನೆಯಲ್ಲಿ ಮಹಿಳೆಯರ ಪಾಲು ಹೆಚ್ಚು. ಮೂರು ವರ್ಷದೊಳಗಿನ ಮಕ್ಕಳನ್ನು ಮಡಿಲಲ್ಲಿ ಕಟ್ಟಿಕೊಂಡು ಕೂಲಿ ಮಾಡಲು ಬರುವ ಗ್ರಾಮೀಣ ಮಹಿಳೆಯರಿಗೆ ʼಕೂಸಿನ ಮನೆʼಗಳು (Child Care Center) ನೆರವಿಗೆ ಬರಲಿದೆ. ಹಾಗೂ ರಾಜ್ಯದಲ್ಲಿ ಕೂಸಿನ ಮನೆ ಶಿಶು ಪಾಲನಾ ಕೇಂದ್ರಗಳನ್ನು ನಿರ್ಮಿಸಲು ಸರಕಾರ ನಿರ್ಧರಿಸಿದೆ.
ಗ್ರಾಮೀಣ ಕೂಲಿ ಕಾರ್ಮಿಕರ ಮಕ್ಕಳ ರಕ್ಷಣೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದ 400 ಗ್ರಾಮ ಪಂಚಾಯತಿಗಳಲ್ಲಿ ʼಕೂಸಿನ ಮನೆʼ ಯೋಜನೆ ಜಾರಿಗೊಳಿಸಲಾಗುವುದು ಎಂದು ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: Bank Jobs 2023: ಡಿಸಿಸಿ ಬ್ಯಾಂಕ್‌ನಲ್ಲಿ FDA, SDA, ಇತರೆ ವಿವಿಧ ಹುದ್ದೆಗಳ ಭರ್ತಿ! 23 ರಿಂದ 78ಸಾವಿರದವರೆಗೆ ವೇತನ!!!