Chandrayana-3: ಅಬ್ಬಬ್ಬಾ.. ಚಂದ್ರಯಾನ-3 ಗೆ ಮೊದಲು ಇಸ್ರೋದಲ್ಲಿ ಇದೆಲ್ಲಾ ನಡೆದಿತ್ತಾ? ವಿಜ್ಞಾನಿಗಳು ಇದನ್ನೆಲ್ಲಾ ಮಾಡಿದ್ರಾ? ರೋಚಕ ಸತ್ಯ ಹೊರಹಾಕಿದ ಪ್ರಜೆಕ್ಟ್ ಡೈರೆಕ್ಟರ್ !!

ISRO chandrayaan-3 success Dialogues with project director and associate project director of Chandrayaan 3 mission

Chandrayaan-3 success : ಭಾರತವು ಚಂದ್ರಯಾನ-3(Chandrayana-3)ಅನ್ನು ಅತ್ಯಂತ ಯಶಸ್ವಿಯಾಗಿ ಉಡಾವಣೆ ಮಾಡಿ ಅದನ್ನು ಚಂದ್ರನ ಮೇಲೆ ಅಷ್ಟೇ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿ ಇಡೀ ಜಗತ್ತಿನ ಗಮನವನ್ನು ಸೆಳೆದಿದೆ. ಈ ಚಂದ್ರನಯಾನ-3 ಎಂಬುದು ಭಾರತದ ಹಲವು ವರ್ಷಗಳ ಕನಸು. ಇದು 2019ರಲ್ಲೇ ಈಡೇರೇಬೇಕಾಗಿತ್ತು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಆಗಲಿಲ್ಲ. ಆದರಿಂದು ನಾವು ಇದರಲ್ಲಿ ಯಶಸ್ವಿಯಾಗಿದ್ಧೇವೆ. ಈ ಸಾಧನೆಯ ಹಿಂದೆ ಇಸ್ರೋ ವಿಜ್ಞಾನಿಗಳ 4 ವರ್ಷಗಳ ನಿರಂತರ ಶ್ರಮ ಇದೆ. ಆ ಶ್ರಮ ಎಂತಾದ್ದು ಅನ್ನೋದ್ರು ಬಗ್ಗೆ ಹಲವು ರೋಚಕ ಸತ್ಯಗಳನ್ನು ಹೊರಹಾಕಿದ್ದಾರೆ ಚಂದ್ರಯಾನ-3 ಪ್ರಾಜೆಕ್ಟ್ ಡೈರೆಕ್ಟರ್.

ಹೌದು, ಚಂದ್ರಯಾನ-3 ಇಸ್ರೋ ವಿಜ್ಞಾನಿಗಳ 4 ವರ್ಷಗಳ ಶ್ರಮ ಹಾಗೂ ಹಲವು ವರ್ಷಗಳ ಕನಸು. ಇದು ಇಂದು ನೆರವೇರಿ (Chandrayaan-3 success )ಇಡೀ ಜಗತ್ತು ಭಾರತವನ್ನು ಹಾಡಿ ಹೊಗಳಿ ಕೊಂಡಾಡಿದೆ. ಆದರೆ ಇದರ ಹಿಂದೆ ಎಷ್ಟು ಶ್ರಮವಿತ್ತು ಗೊತ್ತಾ? ಏನೇನು ಪ್ರಯೋಗಗಳು ನಡೆದಿದ್ದವು ಗೊತ್ತಾ? ಇದನ್ನು ಎಳೆಎಳೆಯಾಗಿ ಈ ಯಾನದ ಪ್ರಾಜೆಕ್ಟ್ ಡೈರೆಕ್ಟರ್ ಆಗಿದ್ದ ಪಿ. ವೀರಮುತ್ತುವೇಲ್‌ ಅವರೇ ಸ್ವತಃ ಬಹಿರಂಗಪಡಿಸಿದ್ದಾರೆ.

ಚಂದ್ರಯಾನ- 3 ಯಶಸ್ಸು ಸುಲಭವಾಗಿ ಬಂದಿಲ್ಲ. ಇದರ ಹಿಂದೆ ನಮಗೆ ಚಂದ್ರಯಾನ-2 ವಿಫಲದ ಪಾಠವಿತ್ತು. ಮುಂದೇನು ಮಾಡಬೇಕು, ಗೆಲುವಿಗಾಗಿ ಎಲ್ಲಿ ಎಚ್ಚೆತ್ತುಕೊಳ್ಳಬೇಕು ಎಂಬ ಹಲವು ವಿಚಾರಗಳನ್ನು ಚಂದ್ರನ ಎರಡನೇ ಯಾನ ನಮಗೆ ಕಲಿಸಿತ್ತು. ಒಟ್ಟಿನಲ್ಲಿ ಚಂದ್ರನಯಾನ-2 ನಮಗೆ ದೊಡ್ಡ ಪಾಠ ಮಾಡಿತ್ತು. ಹೀಗಾಗಿ ನಾವು ಇದರಿಂದೆಲ್ಲ ಎಚ್ಚೆತ್ತಿದ್ದೆವು ಎಂದು ಮಾತು ಆರಂಬಿಸಿದರು ಪ್ರಾಜೆಕ್ಟ್ ಡೈರೆಕ್ಟರ್.

ಬಳಿಕ ಇದಕ್ಕಾಗಿ ಕಳದ 4 ವರ್ಷ ಸತತ ಪರಿಶ್ರಮ ವಹಿಸಲಾಗಿತ್ತು. ಅದು ಏನೆಂದರೆ ಭೂಮಿ ಮೇಲೆಯೇ ಕೃತಕ ಚಂದ್ರನ ಸೃಷ್ಟಿಸಲಾಗಿತ್ತು. ಅಲ್ಲಿನ ವಾತಾವರಣ, ತಾಪಮಾನ ಸೇರಿದಂತೆ ಸೂಕ್ಷ್ಮ ವಿಚಾರಗಳನ್ನು ಸೇಮ್ ಚಂದ್ರನ ಮೇಲಿರುವಂತೆಯೇ ಸೃಷ್ಟಿಸಿ ಪ್ರಯೋಗ ನಡೆಸಲಾಗಿತ್ತು. ಅದೆಲ್ಲವನ್ನು ಇಲ್ಲಿ ಪ್ರಯೋಗ ಮಾಡಿದ ಬಳಿಕ ಸತತ 4 ವರ್ಷದ ಪರಿಶ್ರಮದ ಬಳಿಕ ಇಸ್ರೋ ಯಶಸ್ವಿಯಾಗಿ ಚಂದ್ರನ ಮೇಲೆ ಕಾಲಿಟ್ಟಿತು ಎಂದು ಚಂದ್ರಯಾನ 3ರಲ್ಲಿ ಎದುರಾದ ಸವಾಲು, ಚಂದ್ರಯಾನದ ಪಯಣದ ಕುರಿತು ಇಸ್ರೋ ವಿಜ್ಞಾನಿ ವೀರಮುತ್ತುವೇಲ್‌ ಕೆಲವು ರೋಚಕ ಅನುಭವಗಳನ್ನು ತೆರೆದಿಟ್ಟಿದ್ದಾರೆ.

ಇದನ್ನೂ ಓದಿ: Pramod mutalik: ಚೈತ್ರಾ ಕುಂದಾಪುರ ಪರ ಬ್ಯಾಟ್ ಬೀಸಿದ ಶ್ರೀ ರಾಮ ಸೇನೆಯ ಪ್ರಮೋದ್ ಮುತಾಲಿಕ್ !! ಭಾರೀ ಅಚ್ಚರಿ ಮೂಡಿಸಿದ ಹಿಂದೂ ಹುಲಿಯ ಹೇಳಿಕೆ.

Leave A Reply

Your email address will not be published.