Home Business Bank Jobs 2023: ಡಿಸಿಸಿ ಬ್ಯಾಂಕ್‌ನಲ್ಲಿ FDA, SDA, ಇತರೆ ವಿವಿಧ ಹುದ್ದೆಗಳ ಭರ್ತಿ! 23...

Bank Jobs 2023: ಡಿಸಿಸಿ ಬ್ಯಾಂಕ್‌ನಲ್ಲಿ FDA, SDA, ಇತರೆ ವಿವಿಧ ಹುದ್ದೆಗಳ ಭರ್ತಿ! 23 ರಿಂದ 78ಸಾವಿರದವರೆಗೆ ವೇತನ!!!

Bank Jobs 2023

Hindu neighbor gifts plot of land

Hindu neighbour gifts land to Muslim journalist

Bank Jobs 2023: ಚಿತ್ರದುರ್ಗ, ಸೆಪ್ಟೆಂಬರ್ 18; ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ಚಿತ್ರದುರ್ಗ ವಿವಿಧ ವೃಂದದಲ್ಲಿ ಹುದ್ದೆಗಳ (Bank Jobs 2023)ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-10-2023
ಹುದ್ದೆಗಳ ಸಂಖ್ಯೆ: 68

ಹುದ್ದೆಗಳ ವಿವರ: ಸಹಾಯಕ ವ್ಯವಸ್ಥಾಪಕರು 6 ಹುದ್ದೆ
ಪ್ರಥಮ ದರ್ಜೆ ಗುಮಾಸ್ತರು 9
ದ್ವಿತೀಯ ದರ್ಜೆ ಗುಮಾಸ್ತರು 35
ಕಂಪ್ಯೂಟರ್ ಇಂಜಿನಿಯರ್ 2
ವಾಹನ ಚಾಲಕರು 2
ಅಟೆಂಡರ್ಸ್/ ಸಹಾಯಕರು 14 ಹುದ್ದೆ

ವೇತನ; ಸಹಾಯಕ ವ್ಯವಸ್ಥಾಪಕ ಹುದ್ದೆಗೆ 40,900-78,200 ರೂ.
ಪ್ರಥಮ ದರ್ಜೆ ಗುಮಾಸ್ತ 37,900-70,850 ರೂ.
ದ್ವಿತೀಯ ದರ್ಜೆ ಗುಮಾಸ್ತ 30,350-58,250 ರೂ.
ಕಂಪ್ಯೂಟರ್ ಇಂಜಿನಿಯರ್ 30,350-58,250 ರೂ.
ವಾಹನ ಚಾಲಕರು 27,650-52,650 ರೂ.
ಅಟೆಂಡರ್ಸ್/ ಸಹಾಯಕರು ಹುದ್ದೆಗೆ 23,500-47,650 ರೂ.

ವಯೋಮಿತಿ: ಅರ್ಜಿ ಸಲ್ಲಿಕೆ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.
ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗ 35, 2ಎ/ 2ಬಿ/ 3ಎ/ 3ಬಿ 38 ವರ್ಷ, ಪ. ಜಾ/ ಪ.ಪಂ/ ಪ್ರವರ್ಗ-1 40 ವರ್ಷಗಳನ್ನು ಮೀರಿರಬಾರದು.
ಮಾಜಿ ಸೈನಿಕರಿಗೆ ಮಿಲಿಟರಿ ಸೇವೆಯಲ್ಲಿ ಸೇವೆ ಸಲ್ಲಿಸಿದ ಅವಧಿ, ವಿಧವೆಯರಿಗೆ 10 ವರ್ಷ, ಅಂಗವಿಕಲರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ: ಸಾಮಾನ್ಯ ವರ್ಗ, ಪ್ರವರ್ಗ 2(ಎ), 2(ಬಿ), 3 (ಎ), 3(ಬಿ)- 1500 ರೂ.ಗಳು ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಅಂಗವಿಕಲ, ಮಾಜಿ ಸೈನಿಕ ಹಾಗೂ ವಿಧವಾ ಅಭ್ಯರ್ಥಿಗಳಿಗೆ ರೂ. 750 ಶುಲ್ಕ

ಒಂದೇ ಹುದ್ದೆಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸತಕ್ಕದ್ದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಖುದ್ದಾಗಿ ಅಥವಾ ಕೊರಿಯರ್‌, ಅಂಚೆ ಮೂಲಕ ಸಲ್ಲಿಸಬಾರದು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಆನ್‌ಲೈನ್‌ ಅರ್ಜಿಯ ಡೈರೆಕ್ಟ್‌ ಲಿಂಕ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ: KSRTC ನೌಕರರಿಗೆ ʼಗೌರಿ-ಗಣೇಶʼ ಹಬ್ಬದಂದೇ ಸಿಕ್ಕಿದೆ ಭರ್ಜರಿ ಗುಡ್‌ನ್ಯೂಸ್‌!! ಹೆಚ್ಚುವರಿ ವೇತನಕ್ಕೆ ಆದೇಶ!