Women: ಮಹಿಳೆಯರೇ ಒಂದೇ ಬ್ರಾ ಅನ್ನು ವಾಶ್ ಮಾಡದೆ ಎಷ್ಟು ಬಾರಿ ಹಾಕ್ತೀರಿ? ತಜ್ಞರು ಏನ್ ಹೇಳ್ತಾರೆ ಗೊತ್ತಾ

Women: ಮಹಿಳೆಯರ (Women) ಒಳ ಉಡುಪಿನ ಪೈಕಿಯಲ್ಲಿ ಬ್ರಾ ಕೂಡ ಒಂದಾಗಿದೆ. ಆದರೆ ಬ್ರಾ ಬಗೆಗಿನ ಕೆಲವೊಂದು ವಿಷಯಗಳನ್ನು ನೀವು ಗಂಭೀರವಾಗಿ ಪರಿಗಣಿಸದೆ ಇರಬಹುದು. ಅಂದರೆ ಕೆಲವರು ಕೆಲವು ಗಂಟೆ ಮಾತ್ರ ಧರಿಸಿ ಕಳಚಿಟ್ಟು, ನಾಳೆ ಮತ್ತೊಮ್ಮೆ ಅದೇ ಬ್ರಾ ವನ್ನು ಉಪಯೋಗಿಸುವುದು ಇದೆ. ಇನ್ನು ಕೆಲವರು ಒಂದ್ಸಲ ಹಾಕಿದ ಬ್ರಾವನ್ನು ಎರಡು ಮೂರು ಸಲ, ಕೆಲವರು ವಾರದವರೆಗೂ ಬಳಸುವುದು ಉಂಟು. ಆದ್ರೆ ಈ ಬ್ರಾವನ್ನು ಎಷ್ಟು ಸಮಯ ವಾಶ್ ಮಾಡದೇ ಬಳಸಬಹುದು ಅನ್ನೋದರ ಬಗ್ಗೆ ನಿಮಗೆ ಇಲ್ಲಿ ಮಾಹಿತಿ ನೀಡಲಾಗಿದೆ.

 

ದಿನವಿಡಿ ಚಟುವಟಿಕೆಯಲ್ಲಿರುವ ನೀವು ಪ್ರತಿದಿನ ಬಟ್ಟೆಗಳನ್ನು ಬದಲಾಯಿಸುವುದು ಅನಿವಾರ್ಯ. ಅಂತೆಯೇ ಬಟ್ಟೆ ಬದಲಾಯಿಸುವಂತೆ, ಒಳ ಉಡುಪುಗಳನ್ನು (Inner Wears) ಬದಲಾಯಿಸುವುದು ಸಹ ತುಂಬಾನೆ ಮುಖ್ಯ. ಬ್ರಾದ ಕೆಲಸವು ಸ್ತನಗಳಿಗೆ ಸಪೋರ್ಟ್ ನೀಡೋದು ಮಾತ್ರ ಎಂದುಕೊಳ್ಳಬೇಡಿ. ಯಾಕೆಂದರೆ ಬ್ರಾ ಬಟ್ಟೆಗಳಿಗಿಂತ ಹೆಚ್ಚಾಗಿ ನಿಮ್ಮ ಚರ್ಮದೊಂದಿಗೆ ನಿಕಟ ಸಂಬಂಧ ಹೊಂದಿದೆ. ಬೆವರು, ಕೊಳೆ ಮತ್ತು ಬ್ಯಾಕ್ಟೀರಿಯಾಗಳು ಅದರ ಬಟ್ಟೆಗಳಲ್ಲಿ ಸಂಗ್ರಹವಾಗುತ್ತವೆ.

ನೀವು ಪ್ರತಿದಿನ ಸ್ವಚ್ಛವಾದ ಬ್ರಾ ಧರಿಸಿದರೆ, ಅದು ನಿಮ್ಮ ಚರ್ಮವನ್ನು ಆರೋಗ್ಯಕರವಾಗಿರಿಸುವುದಲ್ಲದೆ (healthy skin), ಅದು ಆರಾಮವನ್ನು ಹೆಚ್ಚಿಸುತ್ತದೆ ಮತ್ತು ದಿನವಿಡೀ ಆತ್ಮವಿಶ್ವಾಸವನ್ನು ಉಳಿಸಿಕೊಳ್ಳುತ್ತದೆ, ಇದು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಒಂದು ವೇಳೆ ಹಲವಾರು ದಿನಗಳವರೆಗೆ ಬ್ರಾ ತೊಳೆಯದಿದ್ದರೆ ಅದು ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಬೆವರು, ಸತ್ತ ಚರ್ಮದ ಕೋಶಗಳು ಮತ್ತು ಕೊಳಕು ಬ್ರಾದಲ್ಲಿ ಸಂಗ್ರಹವಾಗುತ್ತದೆ, ಇದು ಶಿಲೀಂಧ್ರಗಳ ಬೆಳವಣಿಗೆಗೆ ಕಾರಣವಾಗುತ್ತದೆ. ನೀವು ಫೋಲಿಕ್ಯುಲಿಟಿಸ್ ಅಥವಾ ಕ್ಯಾಂಡಿಡಾ ಇಂಟರ್ಟ್ರಿಗೊದಂತಹ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರ ಸೋಂಕುಗಳಿಗೆ ಬಲಿಯಾಗಬಹುದು.

ಈ ಫೋಲಿಕ್ಯುಲಿಟಿಸ್ ಒಂದು ರೀತಿಯ ಚರ್ಮದ ಸೋಂಕಾಗಿದ್ದು, (skin infection) ಇದು ಕೂದಲಿನ ಕಿರುಚೀಲಗಳಲ್ಲಿ ಬೆಳೆಯುತ್ತದೆ ಮತ್ತು ಮೊಡವೆಗಳನ್ನು ಹೋಲುತ್ತದೆ. ಇದರಿಂದ ತುಂಬಾ ನೋವಾಗುತ್ತೆ. ಬಿಗಿಯಾದ ಬಟ್ಟೆಗಳನ್ನು ಧರಿಸುವುದರಿಂದ ಬಿಸಿ ಮತ್ತು ತೇವವಾದ ಚರ್ಮದ ಕಿರುಚೀಲಗಳು ಹಾನಿಗೊಳಗಾಗುತ್ತವೆ, ಇದು ಸೋಂಕಿಗೆ ಕಾರಣವಾಗುತ್ತದೆ.

ಅದಲ್ಲದೆ ಕ್ಯಾಂಡಿಡಾ ಇಂಟರ್ಟ್ರಿಗೊ ಕೂಡ ಒಂದು ರೀತಿಯ ಸೋಂಕು, ಇದು ಚರ್ಮದ ಎಡೆಗಳಲ್ಲಿ ಕಾಣಿಸಿಕೊಳ್ಳುತ್ತದೆ, ಇದು ಯೀಸ್ಟ್‌ನಿಂದ ಉಂಟಾಗುತ್ತದೆ. ಈ ಸೋಂಕಿನ ಯಾವುದೇ ಲಕ್ಷಣ ನೀವು ನೋಡಿದರೆ, ನಿಮ್ಮ ಎಲ್ಲಾ ಬ್ರಾಗಳನ್ನು ಸೋಂಕುನಿವಾರಕದಿಂದ ತೊಳೆಯಿರಿ.

ಇನ್ನು ತಜ್ಞರ ಪ್ರಕಾರ ಒಂದೇ ಬ್ರಾ ಧರಿಸುವುದು ಸರಿಯಾದ ಅಭ್ಯಾಸವಲ್ಲ. ಬ್ರಾವನ್ನು ಎರಡರಿಂದ ಮೂರು ಬಾರಿ ಧರಿಸಿದ ನಂತರ, ಅದನ್ನು ತೊಳೆಯಬೇಕು, ಇದರಿಂದ ನೈರ್ಮಲ್ಯ ಮತ್ತು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಒಂದೇ ಬ್ರಾವನ್ನು ಸತತ ಹಲವಾರು ದಿನಗಳವರೆಗೆ (wearing bra for many days) ಧರಿಸುವುದರಿಂದ ಬ್ಯಾಕ್ಟೀರಿಯಾ, ಸತ್ತ ಚರ್ಮದ ಕೋಶಗಳು, ಬೆವರು ಕೊಳೆ ಇತ್ಯಾದಿಗಳು ಸಂಗ್ರಹವಾಗುತ್ತವೆ, ಇದು ನಿಮ್ಮನ್ನು ಅನಾರೋಗ್ಯಕ್ಕೆ ತಳ್ಳಬಹುದು ಎಂದಿದ್ದಾರೆ.

ಸಾಮಾನ್ಯವಾಗಿ ಇತರ ಬಟ್ಟೆಗಳನ್ನು ಬದಲಾಯಿಸುವಂತೆಯೇ ಬ್ರಾ ಬದಲಾಯಿಸುವುದು ಸಹ ತುಂಬಾ ಮುಖ್ಯ. ವ್ಯಾಯಾಮದಿಂದಾಗಿ ಹೆಚ್ಚು ಬೆವರುತ್ತದೆ, ಬೆವರು ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ, ಇದು ಅಲರ್ಜಿ ಅಥವಾ ಮೊಡವೆಗೆ ಕಾರಣವಾಗಬಹುದು. ಅಷ್ಟೇ ಅಲ್ಲದೇ, ಪ್ರತಿದಿನ ಲೋಷನ್ ಮತ್ತು ಸುಗಂಧ ದ್ರವ್ಯವನ್ನು ಹಚ್ಚೋದ್ರಿಂದಲೂ ಬ್ಯಾಕ್ಟೀರಿಯಾ ಹೆಚ್ಚಾಗುತ್ತದೆ. ಹಾಗಾಗಿ ಬ್ರಾ ಪ್ರತಿ ದಿನ ವಾಶ್ ಮಾಡುವುದು ಸೂಕ್ತ.

ಇನ್ನು ಬ್ರಾ ವಾಶ್ ಮಾಡಲು ಸರಿಯಾದ ವಿಧಾನ ಅಂದರೆ, ಬ್ರಾವನ್ನು ಲಘು ಡಿಟರ್ಜೆಂಟ್ (mild detergent) ಮತ್ತು ತಣ್ಣೀರಿನಿಂದ ಕೈಗಳಿಂದ ತೊಳೆಯುವುದು ಉತ್ತಮ ಎಂದು ತಜ್ಞರು ಹೇಳ್ತಾರೆ. ಪ್ಯಾಡೆಡ್ ಬ್ರಾವನ್ನು ವಾಶ್ ಮಾಡುವಾಗ ಹೆಚ್ಚು ಗಮನ ಹರಿಸಬೇಕು, ಅದರಲ್ಲಿ ಡಿಟರ್ಜೆಂಟ್ ಉಳಿಯದಂತೆ ಚೆನ್ನಾಗಿ ವಾಶ್ ಮಾಡಬೇಕು. ನಂತರ ಸರಿಯಾದ ಬಿಸಿಲಿನಲ್ಲಿ ಅದು ಸಂಪೂರ್ಣವಾಗಿ ಒಣಗುವವರೆಗೆ ಡ್ರೈ ಮಾಡಬೇಕು.

ಇದನ್ನೂ ಓದಿ : ಚೈತ್ರಾ ವಂಚನೆ ಪ್ರಕರಣ1 ಕೋಟಿ ಆಸ್ತಿ, 65 ಲಕ್ಷ ಚಿನ್ನ, 40 ಲಕ್ಷ ಹಣ ಪತ್ತೆ!!!

Leave A Reply

Your email address will not be published.