World Record: 5 ಸಾವಿರ ವಿಷಕಾರಿ ಚೇಳುಗಳೊಂದಿಗೆ 33 ದಿನಗಳನ್ನು ಕಳೆದ ಮಹಿಳೆ!! ವಿಶ್ವದ ಅತ್ಯಂತ ಶ್ರೇಷ್ಠ ವಿಶ್ವದಾಖಲೆ!!!

trending news thailand woman lived with 5000 poisonous scorpions made world record lived for 33 days

World Record: ಚೇಳುಗಳು ಎಷ್ಟೊಂದು ಅಪಾಯಕಾರಿ ಜೀವಿ ಎಂದು ನಿಮಗೆ ತಿಳಿದಿರಬಹುದು. ಅದರ ಒಂದೇ ಒಂದು ಕುಟುಕು ಜನರ ಸ್ಥಿತಿ ಎನಿಸಲು ಕಷ್ಟ ಸಾಧ್ಯ. ಮನುಷ್ಯನ ಸ್ಥಿತಿಯನ್ನೇ ಹದಗೆಡಿಸುವಲ್ಲಿ ಎತ್ತಿದ ಕೈ ಎಂದೇ ಹೇಳಬಹುದು. ಕೆಲವೊಂದು ಚೇಳು ಎಷ್ಟೊಂದು ಮಾರಣಾಂತಿಕವಾಗಿರುತ್ತದೆ ಸಾವನ್ನಪ್ಪಿದವರು ಎಷ್ಟೋ ಮಂದಿ. ಆದರೆ ಈ ವಿಷಕಾರಿ ಚೇಳುಗಳ ಸಹಾಯದಿಂದ ವಿಶ್ವದಾಖಲೆಯನ್ನೂ(World Record) ಮಾಡಬಹುದು ಎಂಬುವುದರ ಕುರಿತು ನೀವೇನಾದರೂ ಯೋಚನೆ ಮಾಡಿದ್ದೀರಾ?

ಹೌದು, ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಅಂತಹ ಮಹಿಳೆಯೊಬ್ಬರ ಕುರಿತು. ಈಕೆ ಚೇಳುಗಳಿರುವ ಕೋಣೆಯಲ್ಲಿ ಹಲವಾರು ದಿನಗಳನ್ನು ಕಳೆದು, ಇದೀಗ ಅವರ ಹೆಸರು ಗಿನ್ನೆಸ್ ವಿಶ್ವ ದಾಖಲೆಯಲ್ಲಿ ದಾಖಲಾಗಿದೆ.

ಇದು 2009 ರ ಮಾತು. ಥಾಯ್ಲೆಂಡ್ ನಿವಾಸಿ ಕಾಂಚನಾ ಕೆಟ್ಕೇವ್ ಅವರು 12 ಚದರ ಮೀಟರ್ ಗಾಜಿನ ಕೋಣೆಯೊಂದರಲ್ಲಿ 5,320 ವಿಷಕಾರಿ ಚೇಳುಗಳೊಂದಿಗೆ 33 ಹಗಲು ರಾತ್ರಿಗಳನ್ನು ಕಳೆದಿದ್ದಾರೆ. ಇಂತಹ ವಿಶಿಷ್ಟ ಸಾಧನೆ ಮಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅವರು ಚೇಳುಗಳೊಂದಿಗೆ ಹೆಚ್ಚು ಕಾಲ ವಾಸಿಸುವ ವಿಶ್ವ ದಾಖಲೆಯನ್ನು ಹೊಂದಿದ್ದಾರೆ ಮತ್ತು ಈ ದಾಖಲೆಯನ್ನು ಮುರಿಯಲು ಯಾರಿಗೂ ಸಾಧ್ಯವಾಗಲಿಲ್ಲ. ಇದಕ್ಕೂ ಮುನ್ನ 2002ರಲ್ಲಿ ಕಾಂಚನಾ ಮಾಡಿದ್ದ ಈ ವಿಶಿಷ್ಟ ದಾಖಲೆ ಕಾಂಚನಾ ಹೆಸರಿನಲ್ಲಿ ದಾಖಲಾಗಿತ್ತು.

ಕಾಂಚನಾ ಅವರು ಮಾಡಿದ ದಾಖಲೆಗೂ ಮುನ್ನ ಈ ವಿಶಿಷ್ಟ ದಾಖಲೆ ಮಾಡಿದವರು ಮಲೇಷ್ಯಾದ ನೋರ್ ಮಲೆನಾ ಹಾಸನ್ (Nor Malena Hassan) ಹೆಸರಿನಲ್ಲಿತ್ತು. ಇವರು ಕೂಡಾ 30 ದಿನಗಳನ್ನು ಗಾಜಿನ ಕೋಣೆಯಲ್ಲಿ ಸಾಕಷ್ಟು ಚೇಳುಗಳೊಂದಿಗೆ ಕಳೆದರು. ಇವರು ಸ್ವಇಚ್ಛೆಯಿಂದ ತನ್ನ ದಾಖಲೆಯನ್ನು ಕೊನೆಗೊಳಿಸಲಿಲ್ಲ. ಚೇಳುಗಳ ಕುಟುಕಿನಿಂದ ಪ್ರಜ್ಞಾಹೀನಳಾಗಿ ಕೊನೆಗೆ ಅವರನ್ನು ಹೊರಗೆ ಕರೆತರಲಾಯಿತು. ನೋರ್‌ ಅವರಿ ಒಟ್ಟು ಏಳು ಬಾರಿ ಚೇಳುಗಳು ಕಚ್ಚಿದ್ದವು.

ಕಾಂಚನಾ ಅವರಿಗೆ ಕೂಡ ವಿಷಕಾರಿ ಚೇಳುಗಳು ಒಟ್ಟು 13 ಬಾರಿ ಕುಟುಕಿದೆ. ಆದರೆ ಇವರ ರೋಗನಿರೋಧಕ ಶಕ್ತಿ ಉತ್ತಮವಾಗಿದ್ದು, ಇದು ಅವರ ಮೇಲೆ ಕಡಿಮೆ ಪರಿಣಾಮ ಬೀರಿತು ಎಂದು ಗಿನ್ನಿಸ್‌ ದಾಖಲೆಯಲ್ಲಿ ಪ್ರಕಟವಾಗಿದೆ. ಕುತೂಹಲಕಾರಿ ಸಂಗತಿ ಏನೆಂದರೆ ಕಾಂಚನಾ ಅವರ ಈ ಕೋಣೆಯನ್ನು ಶಾಪಿಂಗ್‌ ಮಾಲ್‌ನಲ್ಲಿ ಮಾಡಲಾಗಿತ್ತು. ಅಲ್ಲಿ ಅನೇಕ ಜನರು ಈ ಕುತೂಹಲ ದೃಶ್ಯ ನೋಡಲು ಬರುತ್ತಿದ್ದರು.

ವಿಶ್ವದಾಖಲೆ ಮಾಡುವ ಸಮಯದಲ್ಲಿ ಕಾಂಚಾನಾ ಅವರಿಗೆ ಎಲ್ಲಾ ಸೌಲಭ್ಯ ನೀಡಲಾಗಿತ್ತು. ಹಾಸಿಗೆ, ಟಿವಿ, ಪುಸ್ತಕಗಳು, ಫ್ರಿಡ್ಜ್‌. ಆಕೆ ಅದೇ ಕೋಣೆಯಲ್ಲಿ ಇರಬೇಕಿತ್ತು. ಪ್ರತಿ ಎಂಟು ಗಂಟೆಗೊಮ್ಮೆ ಟಾಯ್ಲೆಟನ್ನು ಕೇವಲ 15ನಿಮಿಷಕ್ಕೆ ಮಾತ್ರ ಬಳಸುತ್ತಿದ್ದರು ಕಾಂಚನ.

Leave A Reply

Your email address will not be published.