Sunil kumar: ಚೈತ್ರಾ ಕುಂದಾಪುರ ಆಡಿಯೋದಲ್ಲಿ ಸುನಿಲ್ ಕುಮಾರ್ ಹೆಸರು – ಮೌನ ಮುರಿದ ಶಾಸಕರು ಹೇಳಿದ್ದೇನು ಗೊತ್ತಾ?

Sunil kumar ರಾಜ್ಯದಲ್ಲಿ ಭಾರೀ ಸದ್ದುಮಾಡ್ತಿರೋ ಚೈತ್ರಾ ಕುಂದಾಪುರ(Chaitra kundapura)ಪ್ರಕರಣ ಕ್ಷಣ ಕ್ಷಣಕ್ಕೂ ಹೊಸ ಹೊಸ ರೂಪ ಪಡೆದುಕೊಳ್ಳುತ್ತಿದೆ. ಅಲ್ಲದೆ ಆಕೆಯ ಕೆಲವು ಬಣ್ಣದ ರೂಪಗಳೂ ಬಯಲಾಗುತ್ತಿವೆ. ಅಲ್ಲದೆ ದಿನದಿಂದ ದಿನಕ್ಕೆ ಖತರ್ನಾಕ್ ಚೈತ್ರಳ ಒಂದೊಂದು ಆಡಿಯೋ ರಿಲೀಸ್ ಆಗುತ್ತಿದ್ದು ಸ್ಪೋಟಕ ವಿಚಾರಗಳು ಹೊರಬುತ್ತಿವೆ. ಜೊತೆಗೆ ಹೊಸಬರ ಹೆಸರು ಕೂಡ ಈ ಪ್ರಕರಣದಲ್ಲಿ ಕೇಳಿಬರುತ್ತಿದೆ. ಅಚ್ಚರಿ ಏನಂದ್ರೆ ಇದೀಗ ಬಿಜೆಪಿ ಪ್ರಬಲ ನಾಯಕ, ಹಾಲಿ ಶಾಸಕ, ಮಾಜಿ ಸಚಿವ ಸುನಿಲ್ ಕುಮಾರ್(Sunil kumar) ಹೆಸರು ಕೂಡ ವೈರಲ್ ಆದ ಆಡಿಯೋ ಒಂದರಲ್ಲಿ ಕೇಳಿ ಬರುತ್ತಿದೆ.

ಹೌದು, ಚೈತ್ರಾ ಕುಂದಾಪುರಳು ಮಾತನಾಡಿರುವ ಆಡಿಯೋಗಳು ದಿನಕ್ಕೊಂದಂತೆ ರಿಲೀಸ್ ಆಗುತ್ತಿದ್ದು, ಭಾರೀ ವೈರಲ್ ಆಗ್ತಿದೆ. ಸದ್ಯ ವೈರಲ್ ಆಗಿರೋ ಫೋನ್ ಆಡಿಯೋ ಒಂದರಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರ ಹೆಸರನ್ನು ಹೇಳಿ ಬಂದಿದ್ದು, ರಾಜ್ಯ ರಾಜಕೀಯದಲ್ಲಿ ಕೊಂಚಮಟ್ಟಿಗೆ ಸಂಚಲನ ಉಂಟುಮಾಡಿದೆ. ಮೊನ್ನೆ ಮೊನ್ನೆ ತಾನೆ ಚೈತ್ರಾ ಅವರು ಸ್ವಾಮಿಜಿ ಸಿಕ್ಕಿಬೀಳಲಿ ಆಮೇಲೆ ಎಲ್ಲಾ ದೊಡ್ಡ ದೊಡ್ಡವರ ಹೆಸರು ಹೊರಬೀಳುತ್ತೆ ಅಂದಿದ್ರು. ಆದರೆ ಇದಕ್ಕೂ ಮುಂಚೆಯೇ ವೈರಲ್ ಆದ ಆಡಿಯೋದಲ್ಲಿ ಸುನಿಲ್ ಕುಮಾರ್ ಹೆಸರು ಕೇಳಿಬಂದಿರುವುದು ಭಾರೀ ಕುತೂಹಲ ಕೆರಳಿಸಿದೆ.

ಏನಂದ್ರು ಸುನಿಲ್ ಕುಮಾರ್?
ಈ ಬಗ್ಗೆ ಮೊದಲ ಬಾರಿಗೆ ಶಾಸಕ ಸುನಿಲ್ ಕುಮಾರ್ ಅವರು ಪ್ರತಿಕ್ರಿಯಿಸಿದ್ದು, ಕೆಲವು ಅಚ್ಚರಿ ಹೇಳಿಕೆ ನೀಡಿದ್ದಾರೆ.
ಎಂಎಲ್‌ಎ ಸಿಟ್ ವಂಚನೆ ಪ್ರಕರಣದಲ್ಲಿ ಸಿಸಿಬಿ ಅಧಿಕಾರಿಗಳು ಬಂಧಿಸಿರುವವರ ಮುಖಪರಿಚಯವೂ ಇಲ್ಲ, ಅವರೊಂದಿಗೆ ನಾನು ಮಾತನಾಡಿಲ್ಲ, ಆಕಸ್ಮಿಕವಾಗಿಯೂ ಕೂಡ ಯಾವುದೇ ಕಾರ್ಯಕ್ರಮದಲ್ಲಿ ಅವರೊಂದಿಗೆ ನಾನು ಭೇಟಿಯಾಗಿಲ್ಲ. ಅಲ್ಲದೆ ಬಿಜೆಪಿಯಲ್ಲಿ ಹಣದಿಂದ ಟಿಕೆಟ್ ಸಿಗುತ್ತದೆ ಎನ್ನುವುದು ಭ್ರಮೆ, ಬಿಜೆಪಿಯಲ್ಲಿ ಯಾರೋ ರಾಜಕಾರಣಿಗಳ ಹೆಸರು ಹೇಳಿ ಹಣ ಮಾಡುವವರ ವಿರುದ್ದ ನಿರ್ಧ್ಯಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಬಿಜೆಪಿ ಹೆಸರಲ್ಲಿ ಯಾರಿಗೂ ಯಾರೂ ಕೂಡ ಮೋಸ ಮಾಡಬಾರದು. ಈ ಘಟನೆ ತಾರ್ಕಿಕ ಅಂತ್ಯ ತರಬೇಕೆಂದು ಪೊಲೀಸ್ ಇಲಾಖೆಯನ್ನು ಆಗ್ರಹಿಸುವುದಾಗಿ ಹೇಳಿದ್ದಾರೆ.

ಇನ್ನು ಆಡಿಯೋ ಬಗ್ಗೆ ಮಾತನಾಡಿದ ಅವರು ಅದರ ಬಗ್ಗೆ ನನಗೇನು ಗೊತ್ತಿಲ್ಲ. ನನಗೇನೂ ಸಂಬಂಧವೂ ಇಲ್ಲ. ಯಾವುದೇ ರೀತಿಯಿಂದಲೂ ನನಗೆ ಸಂಬಂಧ ಇಲ್ಲದ ವಿಷಯ ಇದು. ಒಂದು ವೇಳೆ ತನಿಖೆ ನೆಡೆದರೆ ಖಂಡಿತವಾಗಿಯೂ ಸಹಕರಿಸುತ್ತೇನೆ. ಯಾವುದೇ ರೀತಿಯ ತನಿಖೆ ನಡೆದರೂ ಎದುರಿಸಲು ನಾನು ಸಿದ್ಧ. ಆದರೆ ಈ ಆಡಿಯೋ ಕರೆ ಹಿಂದೆ ಯಾರಿದ್ದಾರೆ. ಅದರಲ್ಲೆಲ್ಲ ಯಾರು ಸಂಭಾಷಣೆ ಮಾಡಿದ್ದಾರೆ. ಅವರೆಲ್ಲರನ್ನು ಮಟ್ಟಹಾಕಬೇಕು ಎಂದಿದ್ದಾರೆ.

ಬಿಜೆಪಿಯನ್ನು ಕುಟುಕಿದ ಕಾಂಗ್ರೆಸ್:
ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಕರ್ನಾಟಕ ಕಾಂಗ್ರೆಸ್‌, ‘ಬಿಜೆಪಿಯ ಟಿಕೆಟ್ ಹಗರಣದಲ್ಲಿ ದಿನಕ್ಕೊಂದೊಂದು ಹೆಸರು ಹೊರಬರುತ್ತಿವೆ. ಚೈನ್ ಚೈತ್ರಳ ಆಡಿಯೋದಲ್ಲಿ ಮಾಜಿ ಸಚಿವ ಸುನಿಲ್ ಕುಮಾರ್ ಅವರ ಹೆಸರು ಪ್ರಸ್ತಾಪವಾಗಿದೆ’ ಎಂದು ಕೆಪಿಸಿಸಿ ಆರೋಪಿಸಿದೆ. ಅಲ್ಲದೆ ಸುನಿಲ್ ಕುಮಾರ್ ಅವರಿಗೂ ಚೈತ್ರಳಿಗೂ ಈ ಹಗರಣದಲ್ಲಿ ಇರುವ ಸಂಬಂಧವೇನು ಎಂಬುದು ಇನ್ನೂ ನಿಗೂಢ. ಬಿಜೆಪಿ ನಾಯಕರ ಹೆಸರುಗಳು ಕೇಳಿಬಂದರೂ ಬಿಜೆಪಿ ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುತ್ತಿರುವುದೇಕೆ ? ಪಕ್ಷದ ಹೆಸರಲ್ಲೇ ವಂಚನೆ ನಡೆದಿದ್ದರೂ ಬಿಜೆಪಿ ದೂರು ದಾಖಲಿಸದೆ ಸುಮ್ಮನಿರುವುದೇಕೆ?’ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ಇಷ್ಟೇ ಅಲ್ಲದೆ ಟಿಕೆಟ್ ವಂಚನೆ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧವಿಲ್ಲ ಎಂದಿದ್ದಾರೆ ಬಸವರಾಜ ಬೊಮ್ಮಾಯಿ, ಯಾವುದಾದ್ರೂ ಹೆಣ ಕಂಡರೆ ಹಿಂದೂ ಕಾರ್ಯಕರ್ತರು ಎಂದು ಬೊಬ್ಬೆ ಹೊಡೆಯುವ ಬಿಜೆಪಿ ತನ್ನ ಕಾರ್ಯಕರ್ತರು ಅಕ್ರಮ, ಅನಾಚಾರ ನಡೆಸಿದಾಗ ಜಾರಿಕೊಳ್ಳುವುದೇಕೆ?’ ಎಂದು ಪ್ರಶ್ನಿಸುವುದಲ್ಲದೆ ಆರೋಪಿ ಚೈನ್ ಚೈತ್ರ ಎಬಿವಿಪಿ ಕಾರ್ಯಕರ್ತೆಯಾಗಿದ್ದಾಳೆ. ಮತ್ತೊಬ್ಬ ಆರೋಪಿ ಗಗನ್ ಕಡೂರು ಬಿಜೆಪಿ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿದ್ದ. ವಂಚನೆ ನಡೆಸಿದ್ದು ಬಿಜೆಪಿ ಟಿಕೆಟ್ ಹೆಸರಲ್ಲಿ. ಶಿವಮೊಗ್ಗ ಬಿಜೆಪಿ ಕಚೇರಿಯಲ್ಲಿ ಡೀಲ್ ನಡೆಸಲು ಬಳಸಿಕೊಳ್ಳಲಾಗಿತ್ತು. ಹೀಗಿದ್ದೂ ಸಂಬಂಧವಿಲ್ಲ ಎಂದು ಕೈತೊಳೆದುಕೊಳ್ಳುವುದು ಆತ್ಮವಂಚನೆ ಅಲ್ಲವೇ’ ಎಂದು ಕಾಂಗ್ರೆಸ್‌ ಕೇಳಿದ್ದಾರೆ.

ಜೊತೆಗೆ ಕರ್ನಾಟಕದ ಬಿಜೆಪಿಯನ್ನು ಸಂತೋಷ ‘ಜಿ’ ಮುಳುಗಿಸಿದರು. ಕರ್ನಾಟಕದ ಬಿಜೆಪಿಯನ್ನು ಮೋದಿ ‘ಜಿ’ ಕೈಬಿಟ್ಟರು. ವಿರೋಧ ಪಕ್ಷದ ನಾಯಕನ ಆಯ್ಕೆಗೆ ಅದ್ಯಾರೋ ವಿಶ್ವನಾಥ್ ‘ಜಿ’ ಅವರ ಸಹಾಯವನ್ನದರೂ ಪಡೆಯಿರಿ’ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

Leave A Reply

Your email address will not be published.