Anti conversion law: ಈಕೆ ಕ್ರಿಶ್ಚಿಯನ್ ಅಂತೆ, ಆದ್ರೆ ಕ್ರೈಸ್ತ ಯುವಕನನ್ನು ಇಸ್ಲಾಂಗೆ ಈಝಿ ಆಗಿ ಶಿಫ್ಟ್ ಮಾಡ್ತಾಳಂತೆ ! ಕೊನೆಗೂ ಬಯಲಾಯ್ತು ನೋಡಿ ಖತರ್ನಾಕ್ ಕಳ್ಳಿಯ ಮಾಫಿಯಾ ಕಥೆ
Anti conversion law: ಇತ್ತೀಚಿಗೆ ಮತಾಂತರ ಮಾಫಿಯ ಅಲ್ಲಲ್ಲಿ ಬೆಳಕಿಗೆ ಬರುತ್ತಿದೆ. ಜಾತಿಯ ಹೆಸರಲ್ಲಿ ಒಂದಷ್ಟು ಕಾಸು ಮಾಡುವ ಪೈಕಿ ಕೂಡ ಸೃಷ್ಟಿ ಆಗಿದೆ. ಅಂತೆಯೇ ಇಲ್ಲೊಬ್ಬಳು ಕ್ರಿಶ್ಚಿಯನ್ ಅಂತೆ ನಟಿಸುತ್ತ, ಕ್ರೈಸ್ತ ಯುವಕನನ್ನು ಇಸ್ಲಾಂಗೆ (Anti conversion law) ಈಝಿ ಆಗಿ ಶಿಫ್ಟ್ ಮಾಡುವ ಮಾಫಿಯಕ್ಕೆ ಇಳಿದು ಈಗ ಸಿಕ್ಕಿ ಬಿದ್ದಿದ್ದಾಳೆ.
ಹೌದು, ದೆಹಲಿಯ ಓಖ್ಲಾ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಕಬರ್ಬತುನ್ ಹಾಗೂ ಶೌಕಿನ್ ದಂಪತಿಗಳನ್ನು ಮತಾಂತರ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಶಾಮ್ಲಿಯ ಥಾನಭವನ್ ಪ್ರದೇಶದ ಮದಲ್ಪುರ ಗ್ರಾಮದಲ್ಲಿ ಕ್ರಿಶ್ಚಿಯನ್ ಯುವಕನನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ (Anti conversion law) ಒತ್ತಾಯ ಮಾಡಿದ್ದು, ಆತ ಪೊಲೀಸರಿಗೆ ದೂರು ನೀಡಿದ್ದಾನೆ.
ಎಸ್ಪಿ ಅಭಿಷೇಕ್ ಪ್ರಕಾರ ಮದಲ್ಪುರ ಗ್ರಾಮದಲ್ಲಿ ಸೂರಜ್ ಮತ್ತು ಅವನ ಸ್ನೇಹಿತ ಮಹಿ ಎಂಬ ಮಹಿಳೆಯ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ವಿಚಾರಣೆಗಾಗಿ ಅವರನ್ನು ಶುಕ್ರವಾರ ಥಾನಭವನ್ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಮತಾಂತರ ಸಂಚು ಬಯಲಾಗಿದೆ .
ಮಹಿ ಎಂಬ ಹೆಸರಿಟ್ಟುಕೊಂಡಿದ್ದ ಕಬರ್ಬತುನ್ ತನ್ನನ್ನು ಕ್ರಿಶ್ಚಿಯನ್ ಎಂದು ಪರಿಚಯಿಸಿಕೊಂಡಿದ್ದಳು. ವಾಸ್ತವದಲ್ಲಿ ಆಕೆ ಶೌಕಿನ್ ಪತ್ನಿ. ಆಕೆ ಸೂರಜ್ನನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯ ಮಾಡುತ್ತಿರುವುದು ಪೊಲೀಸರಿಗೆ ಗೊತ್ತಾಗಿದೆ.
ಎರಡು ವರ್ಷಗಳ ಹಿಂದೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ಸೂರಜ್, ಆನ್ಲೈನ್ ಆಟದ ಮೂಲಕ ಮಹಿ(ಕಬರ್ಬತುನ್) ಜತೆ ಸಂಪರ್ಕಕ್ಕೆ ಬಂದಿದ್ದ. ಅಲ್ಲಿ ಮಹಿ ತನ್ನನ್ನು ಕ್ರಿಶ್ಚಿಯನ್ ಎಂದು ಗುರುತಿಸಿಕೊಂಡಿದ್ದಳು. ಮಾತನಾಡುವ ವೇಳೆ ಸೂರಜ್ ತಮ್ಮ ಜೀವನದಲ್ಲಿ ಸಮಸ್ಯೆಗಳನ್ನು ಇದೆ ಎಂದು ಹೇಳಿಕೊಂಡಿದ್ದರು. ಅದರ ಪರಿಹಾರಕ್ಕಾಗಿ ಚಂಡೀಗಢದ ಕರಾಲಿ ಪ್ರದೇಶದ ತಾಂತ್ರಿಕನೊಬ್ಬನ ಬಳಿಗೆ ಸೂರಜ್ನನ್ನು ಕಬರ್ಬತುನ್ ಡೆಲ್ಲಿಗೆ ಕರೆದೊಯ್ದಿದ್ದಳು.
ನಂತರ ದೆಹಲಿಯ ಓಖ್ಲಾ ಪ್ರದೇಶದಲ್ಲಿ ತನ್ನ ಸೋದರಮಾವನ ಮನೆಯಿದೆ ಎಂದು ಸೂರಜ್ನನ್ನು ಆಕೆ ಅಲ್ಲಿಗೆ ಆಹ್ವಾನಿಸಿದ್ದಳು. ಈ ವೇಳೆ ಆಕೆಯ ಆಧಾರ್ ಕಾರ್ಡ್ ನೋಡಿದ ನಂತರ ಸೂರಜ್ಗೆ ಅನುಮಾನ ಬಂದಿತ್ತು. ಅದರಲ್ಲಿ ಅವಳ ನೈಜ ಹೆಸರಿತ್ತು. ಆದಾಗ್ಯೂ, ಆಕೆ ತನ್ನ ತಾಯಿ ಕ್ರಿಶ್ಚಿಯನ್ ಮತ್ತು ತಂದೆ ಮುಸ್ಲಿಂ ಎಂದು ವಿವರಿಸಿ ಸೂರಜ್ನ ಮನವೊಲಿಸಿದ್ದಳು.
ದೆಹಲಿಗೆ ಭೇಟಿ ನೀಡಿದಾಗ ಕಬರ್ಬತುನ್ನ ಪತಿ ಶೌಕಿನ್ ಪರಿಚಯವಾಗಿದ್ದ. ಆತ ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಎರಡು ಸಮಾನ ಧರ್ಮಗಳು. ಹೀಗಾಗಿ ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ಒತ್ತಾಯ ಮಾಡಿದ್ದ. ನಂತರ ಆಕೆ ಸೂರಜ್ಗೆ ನಮಾಜ್ ಮಾಡುವುದು ಹೇಗೆ ಎಂದು ಹೇಳಿಕೊಟ್ಟಿದ್ದಳು ಎಂಬುದು ಬಯಲಾಗಿದೆ. ಕಬರ್ಬತುನ್ ಹಾಗೂ ಶೌಕಿನ್ ತಾವಿಬ್ಬರು ಪತಿ ಪತ್ನಿ ಎಂಬುದಾಗಿಯೂ ಸೂರಜ್ಗೆ ಹೇಳಿರಲಿಲ್ಲ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.
ಇದನ್ನೂ ಓದಿ : ಚೈತ್ರಾ ವಂಚನೆ ಪ್ರಕರಣ1 ಕೋಟಿ ಆಸ್ತಿ, 65 ಲಕ್ಷ ಚಿನ್ನ, 40 ಲಕ್ಷ ಹಣ ಪತ್ತೆ!!!