India: ಒಳ ಉಡುಪು ಖರೀದಿ ನಿಲ್ಲಿಸಿದ ಭಾರತೀಯರು!!! ಯಾಕೆ ಗೊತ್ತೇ?

National news business news Indians are not buying enough underwear and innerwear

India: ಬಟ್ಟೆ (Dress)ಎಂದ ಕೂಡಲೇ ಎಲ್ಲರಿಗೂ ಮೊದಲು ನೆನಪಾಗುವುದು ಮಹಿಳೆಯರು!! ಹಬ್ಬ ಹರಿದಿನ ಬಂದರೆ ಸಾಕು!! ಹೆಂಗೆಳೆಯರು ಬಟ್ಟೆ ಖರೀದಿ ಮಾಡಲು ಮುಗಿ ಬೀಳುವುದು ಸಹಜ. ಸಾಲು ಸಾಲು ಹಬ್ಬ, ಮದುವೆ ಸಮಾರಂಭಗಳು ಬರುತ್ತಿದ್ದಂತೆ ಜನರು ಬಟ್ಟೆ ಮಳಿಗೆಗಳತ್ತ ಮುಖ ಮಾಡುವುದು ಮಾಮೂಲಿ. ಆದರೆ ಇತ್ತೀಚೆಗಷ್ಟೇ ಒಳ ಉಡುಪು ಕಂಪೆನಿಗಳ ತ್ರೈಮಾಸಿಕ ಅಂಕಿ ಅಂಶಗಳ ಪ್ರಕಾರ ಆಘಾತಕಾರಿ ವಿಷಯವೊಂದು ಮುನ್ನಲೆಗೆ ಬಂದಿದೆ.

 

ಪ್ರಮುಖ ಒಳ ಉಡುಪು(Inner Dress)ಕಂಪೆನಿಗಳಾದ ಜಾಕಿ, ಡಾಲರ್ ಮತ್ತು ರೂಪಾ ಒಳಉಡುಪುಗಳ ಖರೀದಿಯಲ್ಲಿ ಭಾರಿ ಇಳಿಕೆ ಕಂಡಿದೆ. ಡಿಸೆಂಬರ್ 2022 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ, ಜಾಕಿ ಮತ್ತು ಲಕ್ಸ್ ಇಂಡಸ್ಟ್ರೀಸ್ನ ಮೂಲ ಕಂಪನಿಯಾದ ಪೇಜ್ ಇಂಡಸ್ಟ್ರೀಸ್ನ ಮಾರಾಟ ಕುಸಿತ ಕಂಡಿದ್ದು, ರೂಪಾ & ಕಂಪನಿ ಪರಿಮಾಣದಲ್ಲಿ 52 ಪ್ರತಿಶತ ಕುಸಿತವನ್ನು ವರದಿ ಮಾಡಿದೆ.

ಯುರೋಮಾನಿಟರ್ ಇಂಟರ್ನ್ಯಾಶನಲ್ ವರದಿಯ ಪ್ರಕಾರ, ಭಾರತದಲ್ಲಿ ಒಳಉಡುಪು ಮಾರುಕಟ್ಟೆಯು $ 5.8 ಶತಕೋಟಿ ಅಂದರೆ ಭಾರತದ ರೂಪಾಯಿಗೆ ಹೋಲಿಸಿದರೆ 48,123 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.ಹಬ್ಬ ಹರಿದಿನಗಳಲ್ಲಿ ಶಾಪಿಂಗ್, ಫ್ಯಾಶನ್ ಬಟ್ಟೆಗಳ ಮಾರಾಟ ಹೆಚ್ಚಾಗಿದ್ದರೂ ಕೂಡ ಒಳಉಡುಪುಗಳ ಮಾರಾಟ ಕಡಿಮೆ ಎನ್ನಲಾಗಿದೆ. ಸಾಮಾನ್ಯವಾಗಿ ಪಾರ್ಟಿ ವೇರ್ ನಿಂದ ನಾರ್ಮಲ್ ಮತ್ತು ಆಫೀಸ್ ವೇರ್ ವರೆಗೆ ಎಲ್ಲಾ ರೀತಿಯ ಬಟ್ಟೆ, ಶೂ, ಬ್ಯೂಟಿ ಉತ್ಪನ್ನಗಳನ್ನು ಜನರು ಹೆಚ್ಚೆಚ್ಚು ಖರೀದಿ ಮಾಡಿದ್ದಾರೆ. ಆದರೆ, ಒಳಉಡುಪು ಖರೀದಿಯಲ್ಲಿ ಮಾತ್ರ ಭಾರೀ ಇಳಿಕೆಯಾಗಿದೆ. ಇದರಿಂದ ಜಾಕಿ, ಡಾಲರ್, ರೂಪಾ ಮುಂತಾದ ಒಳಉಡುಪು ಮಾರಾಟ ಮಾಡುವ ಕಂಪೆನಿಗಳ ಮಾರಾಟ ಭಾರೀ ಕುಸಿತ ಕಂಡಿದೆ.

ಭಾರತೀಯರು ಹೆಚ್ಚು ಆನ್ ಲೈನ್ ಮಾರ್ಕೆಟಿಂಗ್ ಗಳಿಂದ ಖರೀದಿ ಮಾಡುವ ಹಿನ್ನೆಲೆ ಆನ್‌ಲೈನ್ ಸ್ಟೋರ್‌ಗಳಲ್ಲಿ ಹೆಚ್ಚಿನ ರಿಯಾಯಿತಿಯನ್ನು ಪಡೆಯುತ್ತಿರುವುದರಿಂದ ಒಳಉಡುಪು ಮಾರಾಟದಲ್ಲಿ ಕುಂಠಿತ ಕಾಣಲು ಕಾರಣವಾಗಿರಬಹುದು. ಮತ್ತೊಂದೆಡೆ ಹಣದುಬ್ಬರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಖರ್ಚು ಮಾಡಲು ಬೇಕಾದಷ್ಟು ಹಣವನ್ನು ಹೊಂದಿಲ್ಲದೆ ಇರುವುದರಿಂದ ಕೂಡ ಮಾರಾಟದಲ್ಲಿ ಕುಸಿತ ಕಾಣುತ್ತಿದೆ.

ಕಳೆದ ವರ್ಷದ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಇದು ಆದಾಯದಲ್ಲಿ ಶೇಕಡಾ 7.5 ರಷ್ಟು ಮತ್ತು ಪ್ರಮಾಣದಲ್ಲಿ ಶೇಕಡಾ 11.5 ಕುಸಿತವಾಗಿದೆ. ಕಳೆದ ಒಂದೂವರೆ ವರ್ಷದಲ್ಲಿ ರೂಪಾ ಷೇರುಗಳು ಶೇ.52ಕ್ಕೂ ಹೆಚ್ಚು ಕುಸಿತ ಕಂಡಿದೆ ಎನ್ನಲಾಗಿದೆ. ಪೇಜ್ ಇಂಡಸ್ಟ್ರೀಸ್ ಪ್ರಮಾಣವು 11 ಪ್ರತಿಶತದಷ್ಟು ಇಳಿಕೆ ಕಂಡಿದ್ದು ಷೇರಿನ ಬೆಲೆಯು ಐದು ಪ್ರತಿಶತದಷ್ಟು ಕಡಿಮೆ ಆಗಿದೆ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಒಳಉಡುಪು ಖರೀದಿಯಲ್ಲಿ ಇಳಿಕೆ ಕಂಡು ಬಂದಿದೆ.

ಇದನ್ನೂ ಓದಿ: Chaitra Kundapura Fraud Case: ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಅಭಿನವ ಹಾಲಶ್ರೀ ಕಾರು ಚಾಲಕ ವಶಕ್ಕೆ!!! ಕುತೂಹಲ ಮೂಡಿಸಿದ ತನಿಖೆ ಪ್ರಗತಿ!!!

Leave A Reply

Your email address will not be published.