Gruha Jyoti: ಫ್ರೀ ಯೋಜನೆಗಳಲ್ಲಿ ಒಂದಾದ ಉಚಿತ ಗೃಹಜ್ಯೋತಿ ಐಡಿಯಾ ನೀಡಿದ್ದು ಇವರೇ ನೋಡಿ!!

Share the Article

GruhaJyothi: ಕರ್ನಾಟಕ ರಾಜ್ಯದಲ್ಲಿ 2023 ರ ಚುನಾವಣೆಯಲ್ಲಿ ಕಾಂಗ್ರೆಸ್​​ ಪಕ್ಷ ಅಧಿಕಾರಕ್ಕೆ ಬರಲೇಬೇಕು ಎಂದು ಗ್ಯಾರಂಟಿ ಯೋಜನೆಗಳ ಅಸ್ತ್ರ ಪ್ರಯೋಗಿಸಿ, ಅದರಂತೆ ಭರ್ಜರಿಯಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆಗ ಸರ್ಕಾರದ ಆಳ್ವಿಕೆಗೆ ರಾಜನೊಬ್ಬನ ಆಯ್ಕೆಯಾಗಬೇಕಿತ್ತು. ಸದ್ಯ ರಾಜನ ಪಟ್ಟ ಸಿದ್ದರಾಮಯ್ಯನಿಗೆ ಸಿಕ್ಕಿತ್ತು.

ಸಿದ್ದರಾಮಯ್ಯನನ್ನು ಮುಖ್ಯಮಂತ್ರಿ ಆಗಿ ಆಯ್ಕೆಗೊಂಡ ಸಮಯದಲ್ಲಿ ಗೃಹಜ್ಯೋತಿ ಎಂಬ 200 ಯೂನಿಟ್ ಉಚಿತ ವಿದ್ಯುತ್​ ಐಡಿಯಾ ಕೊಟ್ಟಿದ್ದೇ ಸಿದ್ದರಾಮಯ್ಯ ಅವರಂತೆ. ಹೌದು, ಸಿದ್ದರಾಮಯ್ಯ ಅವರು ಕೊಟ್ಟ ಸಲಹೆಯಂತೆ, ಕುಟುಂಬದ ವಾರ್ಷಿಕ ಬಳಕೆಯ ಆಧಾರದ ಮೇಲೆ ರಾಜ್ಯಾದ್ಯಂತ ಎಲ್ಲ ಮನೆಗಳಿಗೂ 200 ಯೂನಿಟ್ ಉಚಿತ ವಿದ್ಯುತ್​ ಕೊಡಲಾಗುತ್ತಿದೆಯಂತೆ.

ಈ ಸಂಗತಿಯನ್ನು ನಿನ್ನೆ ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಶೃಂಗಸಭೆಯಲ್ಲಿ ವಿದ್ಯುತ್​ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ. ​ಅದಲ್ಲದೆ ಸಚಿವ ಕೆಜೆ ಜಾರ್ಜ್ ಹೇಳಿರುವ ವಿಡಿಯೋ ಕೂಡ ವೈರಲ್ ಆಗಿದೆ.

Leave A Reply