Rape: ಗಂಡು ಮಗುವಿನ ಆಸೆಗೆ, ಹೆತ್ತ ತಂದೆಯಿಂದ ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಸತತ 10 ವರ್ಷದಿಂದ ರೇಪ್‌, ತಾಯಿ ಕೂಡಾ ಸಾಥ್‌!

Share the Article

ದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇರುತ್ತದೆ. ಇನ್ನು ತಂದೆಯೇ ಮಕ್ಕಳ ಮೇಲೆ ರೇಪ್‌ ಮಾಡಿದಂತಹ ವರದಿಗಳು ಕೂಡಾ ಪ್ರಕಟಗೊಳ್ಳುತ್ತಲೇ ಇರುತ್ತದೆ. ಇಲ್ಲೊಬ್ಬ ತಂದೆ ತನ್ನ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಸತತವಾಗಿ ಹತ್ತು ವರ್ಷದಿಂದ ಅತ್ಯಾಚಾರ ಮಾಡಿದಂತಹ ಘೋರ ಘಟನೆಯೊಂದು ಬಿಹಾರದಲ್ಲಿ ನಡೆದಿದೆ.

ಮಾಂತ್ರಿಕನೋರ್ವನ ಸಲಹೆಯ ಮೇರೆಗೆ ಈ ವ್ಯಕ್ತಿ ತನ್ನ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಷ್ಟಕ್ಕೂ ಗಂಡು ಮಗು ಆಗಲಿ ಎನ್ನುವ ಕಾರಣಕ್ಕೆ ತಾನು ಹೆತ್ತ ಹೆಣ್ಣು ಮಕ್ಕಳ ಮೇಲೆಯೇ ಅತ್ಯಾಚಾರ ಎಸಗಿದ್ದು, ಅದು ಕೂಡಾ ಓರ್ವ ಮಾಂತ್ರಿಕನ ಮಾತಿಗೆ ಮರುಳಾಗಿ. ಇಂತಹ ಒಂದು ಘಟನೆಗೆ ನಿಜಕ್ಕೂ ಸಮಾಜವೇ ಆಘಾತಗೊಂಡಿದೆ ಎಂದು ಹೇಳಬಹುದು.

2012 ರಲ್ಲಿ ಸ್ಥಳೀಯ ಮಾಂತ್ರಿಕನೋರ್ವನ ಮೊರೆ ಹೋದ ಆರೋಪಿ ತಂದೆ, ಆತನ ಸಲಹೆಯ ಮೇರೆಗೆ ಹೆಣ್ಣು ಮಕ್ಕಳನ್ನು ರೇಪ್‌ ಮಾಡಿದ್ದಾನೆ. ಈತನಿಗೆ ಅನಂತರ ಗಂಡು ಮಗು ಆದರೂ ಕೂಡಾ, ನಿನ್ನ ಜೀವಕ್ಕೆ ಅಪಾಯವಿದೆ ಎಂದು ರೇಪ್‌ ಮಾಡೋದನ್ನು ಮುಂದುವರಿಸಲು ಮಾಂತ್ರಿಕ ಮತ್ತೆ ಸಲಹೆ ನೀಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಇಷ್ಟು ಮಾತ್ರವಲ್ಲದೇ ಮಾಂತ್ರಿಕ ಸಹ ಅಪ್ರಾಪ್ತ ಹುಡುಗಿಯರ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಈ ಲೈಂಗಿಕ ಕಿರುಕುಳದಿಂದ ಬೇಸತ್ತ ಸಹೋದರಿಯರು ಕಳೆದ ವರ್ಷ ಮೇ ತಿಂಗಳಲ್ಲಿ ಮನೆಯಿಂದ ಓಡಿ ಹೋಗಿದ್ದು, ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು. ನಂತರ ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದರು.

ಈ ಪ್ರಕರಣ ಹಳೆಯದಾಗಿದ್ದು, POCSO ನ್ಯಾಯಾಲಯವು ಆರೋಪಿ ಬಿನೋದ್‌ ಕುಮಾರ್‌ ಸಿಂಗ್‌ ಮತ್ತು ತಂತ್ರಿ ಅಜಯ್‌ ಕುಮಾರ್‌ಗೆ ಮಂಗಳವಾರ ಜೀವಾವಧಿ ಶಿಕ್ಷೆ ನೀಡಿದೆ. ಅಷ್ಟು ಮಾತ್ರವಲ್ಲದೇ, ಈ ಅತ್ಯಾಚಾರಕ್ಕೆ ಪ್ರೇರಣೆ ನೀಡಿದಂತಹ ಅಪ್ರಾಪ್ತ ಹೆಣ್ಣು ಮಕ್ಕಳ ತಾಯಿ ಹಾಗೂ ಚಿಕ್ಕಮ್ಮನಿಗೆ ಕೂಡಾ 20 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

Leave A Reply