RBI: ನಿಮ್ಮ ಹಣ ಈ ಮೂರು ಬ್ಯಾಂಕ್‌ನಲ್ಲಿ ಸುರಕ್ಷಿತ- ಆರ್‌ಬಿಐ ಬಿಡುಗಡೆ ಮಾಡಿದೆ ಪಟ್ಟಿ

ಜನರಿಗೆ ತಾವು ದುಡಿದು ಸಂಪಾದಿಸಿದ ಹಣ ಸೇಫ್‌ ಆಗಿ ಇರಲಿ ಎಂದು ಬ್ಯಾಂಕ್‌ನಲ್ಲಿ ಠೇವಣಿ ಮಾಡುತ್ತಾರೆ. ಆದರೆ ಕೆಲವೊಮ್ಮೆ ಬ್ಯಾಂಕ್‌ ನಷ್ಟ ಅನುಭವಿಸಿ ಮುಚ್ಚುವ ಪರಿಸ್ಥಿತಿ ಬಂದಾಗ ತಲೆಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ಜನರದ್ದಾಗುತ್ತದೆ. ಇಲ್ಲಿ ಬ್ಯಾಂಕ್‌ನಲ್ಲಿ ಹಣ ಇಟ್ಟವರ ಸ್ಥಿತಿ ಆಯೋಮಯವಾಗುತ್ತದೆ. ಸಾಮಾನ್ಯ ಬಂಡವಾಳ ಸಂರಕ್ಷಣೆ ಬಫರ್ ( usual capital conservation buffer) ಜೊತೆಗೆ ಹೆಚ್ಚುವರಿ ಸಾಮಾನ್ಯ ಇಕ್ವಿಟಿ ಶ್ರೇಣಿ 1 (additional Common Equity Tier 1 (CET1) ಅನ್ನು ನಿರ್ವಹಿಸುವ ಅಗತ್ಯವಿರುವ ಬ್ಯಾಂಕುಗಳು ಮಾತ್ರ ಈ ಪಟ್ಟಿಯಲ್ಲಿ ಬರುತ್ತವೆ.

 

ಹಾಗಾಗಿ ನಿಮ್ಮೆಲ್ಲರ ಸಂಕಷ್ಟವನ್ನು ಹೋಗಲಾಡಿಸಲು ಈ ವರ್ಷದ ಆರಂಭದಲ್ಲಿ ಆರ್‌ಬಿಐ ಒಂದು ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ದೇಶದ ಸುರಕ್ಷಿತ ಬ್ಯಾಂಕ್‌ಗಳ ಹೆಸರನ್ನು ಇದರಲ್ಲಿ ಆರ್‌ಬಿಐ ಹೇಳಿದೆ.

ಈ ಪಟ್ಟಿಯಲ್ಲಿ ಆರ್‌ಬಿಐ ನಿಮ್ಮ ಹಣ ಯಾವ ಬ್ಯಾಂಕ್‌ನಲ್ಲಿ ಸುರಕ್ಷಿತವಾಗಿದೆ, ಯಾವ ಬ್ಯಾಂಕ್‌ ಸುರಕ್ಷಿತ ಅಲ್ಲ ಎಂಬುವುದನ್ನು ಸೇರಿಸಿದೆ. ಆರ್‌ಬಿಐ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಒಂದು ಸರಕಾರಿ ಮತ್ತು ಎರಡು ಖಾಸಗಿ ಬ್ಯಾಂಕ್‌ಗಳು ಸೇರಿದೆ. ಇದರಲ್ಲಿ ಸರಕಾರಿ ವಲಯದ ಬ್ಯಾಂಕ್‌ ಎಂದರೆ ಅದು ಸ್ಟೇಟ್‌ಬ್ಯಾಂಕ್‌ ಆಫ್‌ ಇಂಡಿಯಾ. ಇನ್ನು ಖಾಸಗಿ ಬ್ಯಾಂಕ್‌ ಪಟ್ಟಿಗೆ HDFC, ICICI ಬ್ಯಾಂಕ್‌ ಸೇರಿದೆ. ಇದರರ್ಥ ನಿಮ್ಮ ಹಣ ಈ ಮೂರು ಬ್ಯಾಂಕ್‌ಗಳಲ್ಲಿ ಸುರಕ್ಷಿತ ಎಂದರ್ಥ.

ರಿಸರ್ವ್‌ ಬ್ಯಾಂಕ್‌ ಪಟ್ಟಿಯಲ್ಲಿ ಬರುವ ಎಲ್ಲಾ ಬ್ಯಾಂಕ್‌ಗಳ ಮೇಲೆ ನಿಗಾ ಇಡುತ್ತದೆ. ದಿನನಿತ್ಯದ ಕಾರ್ಯಾಚರಣೆ, ಯಾವುದೇ ದೊಡ್ಡ ಸಾಲ, ಖಾತೆಯ ಮೇಲ್ವಿಚಾರಣೆ, ಅಷ್ಟು ಮಾತ್ರವಲ್ಲದೇ, ದೊಡ್ಡ ಯೋಜನೆಗೆ ಬ್ಯಾಂಕ್‌ ಸಾಲ ನೀಡುವ ಕುರಿತು, ಇದರ ಮೌಲ್ಯಮಾಪನ ಎಲ್ಲ ಮಾಡುತ್ತದೆ. ಬ್ಯಾಂಕಿನ ವ್ಯವಹಾರದ ಮೇಲೆ ಯಾವುದೇ ಋಣಾತ್ಮಕ ಪರಿಣಾಮ ಬೀರುತ್ತದೆಯೇ ಎಂಬುವುದನ್ನು ಕೂಡಾ ಆರ್‌ಬಿಐ ಪರಿಶೀಲನೆ ಮಾಡುತ್ತದೆ.

 

 

 

 

Leave A Reply

Your email address will not be published.