Nirmala sitharaman: ಬಿಜೆಪಿ ಟಿಕೆಟ್ ವಂಚನೆ ಪ್ರಕರಣ- ಚೈತ್ರಾ ಕುಂದಾಪುರಳ ಖ್ಯಾತಿಗೆ ಕಾರಣವಾಯ್ತು ನಿರ್ಮಲಾ ಸೀತಾರಾಮನ್ ಮಾಡಿದ ಆ ಒಂದು ಟ್ವೀಟ್ !!
Political news Chaitra kundapura famous after union minister Nirmala sitharaman tweet
Nirmala sitharaman: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ ಚೈತ್ರ ಕುಂದಾಪುರ(Chaitra kundapura ) ವಂಚಿಸಿರುವ ಪ್ರಕರಣವ ದಿನದಿಂದ ದಿನಕ್ಕೆ ಹೊಸ ತಿರುಗುಗಳನ್ನು ಪಡೆದುಕೊಳ್ಳುತ್ತಿದೆ. ಹೊಸ ಹೊಸ ವಿಚಾರಗಳು ಹೊರಬರುತ್ತಿವೆ. ಇದರ ನಡುವೆ ಈ ಕರ್ತನಾಕ್ ಚೈತ್ರಾ ಇಷ್ಟು ಖ್ಯಾತಿ ಗಳಿಸಲು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್(Nirmala seetaraman) ಅವರು ಕಾರಣ ಎಂಬ ವಿಚಾರ ಸಾಕಷ್ಟು ಸುದ್ಧಿಯಾಗುತ್ತಿದೆ.
ಹೌದು, ಇಂದು ಸಿಸಿಬಿ ಪೋಲೀಸರ ಅತಿಥಿಯಾಗಿರೋ ಹಿಂದೂ ಕಾರ್ಯಕರ್ತೆಯೆಂದು ಪೈರ್ ನಾಯಕಿಯಾಗಿ ಹೇಳಕೊಂಡು, ಅರ್ಥವಿಲ್ಲದ ರೀತಿಯಲ್ಲಿ ಅಮಾಯಕ ಹಿಂದೂ ಮನಸ್ಸುಗಳನ್ನು ಗೊಂದಲಕ್ಕೆ ತಳ್ಳಿರೋ ಚೈತ್ರಾ ಕುಂದಾಪುರ ಇಷ್ಟು ಖ್ಯಾತಿ ಗಳಿಸಲು ಕೇಂದ್ರ ಸಚಿವೆ ಆಗಿರುವ ನಿರ್ಮಲಾ ಸೀತಾರಾಮನ್( Nirmala sitharaman)ಮಾಡಿದ ಆ ಒಂದು ಟ್ವೀಟ್ ಕಾರಣವಂತೆ. ಈ ಟ್ವೀಟ್ ಬಳಿಕ ಚೈತ್ರಾ ಕುಂದಾಪುರ ರಾಜ್ಯಾದ್ಯಂತ ತನ್ನ ಹವಾ ಕ್ರಿಯೇಟ್ ಮಾಡಿಕೊಂಡಿದ್ದರು. ಹಾಗಿದ್ರೆ ಏನಿತ್ತು ಆ ಟ್ವೀಟ್ ನಲ್ಲಿ?
ಟ್ವೀಟ್ ಮಾಡುವಂತದ್ದು ಏನು ಮಾಡಿದ್ರು ಈ ಚೈತ್ರಾ?
ಕೇಂದ್ರ ಸರ್ಕಾರದ ವಿರುದ್ಧ 2018 ರಲ್ಲಿ ಕಾಂಗ್ರೆಸ್ ಮತ್ತು ಇತರೆ ಎಡಪಕ್ಷಗಳು ಭಾರತ್ ಬಂದ್ ನಡೆಸಿದ್ದರು. ಈ ವೇಳೆ ಉಡುಪಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಂಗಡಿ, ಮುಂಗಟ್ಟು ಬಂದ್ ಮಾಡುವ ವೇಳೆ ಒಬ್ಬಂಟಿಯಾಗಿ ರಸ್ತೆಗಿಳಿದು ತರಾಟೆಗೆ ತೆಗೆದುಕೊಂಡಿದ್ದ ಚೈತ್ರಾ, ಮೋದಿ ಪರ ಘೋಷಣೆ ಕೂಗಿ ಕಾಂಗ್ರೆಸ್ ವಿರುದ್ಧ ಅಬ್ಬರಿಸಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲಗಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಬಿಜೆಪಿ ವರಿಷ್ಠರ ಕಣ್ಣಿಗೂ ಬಿದ್ದಿತ್ತು. ಅದರಂತೆ, ವೀಡಿಯೋ ರೀಟ್ವೀಟ್ ಮಾಡಿದ ನಿರ್ಮಲಾ ಸೀತಾರಾಮನ್, ಚೈತ್ರಾ ಕುಂದಾಪುರ ಅವರನ್ನು ಡೇರಿಂಗ್ ಗರ್ಲ್ ಎಂದು ಬಣ್ಣಿಸಿದ್ದರು.
ಇದನ್ನೇ ಬಂಡವಾಳವನ್ನಾಗಿಸಿಕೊಂಡ ಚೈತ್ರಾ, ತನಗೆ ನಿರ್ಮಲಾ ಸೀತರಾಮನ್ ಅವರ ಜೊತೆ ಲಿಂಕ್ ಇರುವುದಾಗಿಯೂ ಬಿಂಬಿಸಿಕೊಂಡಿದ್ದಳು. ಉಡುಪಿ ಮಾತ್ರವಲ್ಲದೆ ರಾಜ್ಯಾದ್ಯಂತ ತನ್ನ ಹವಾ ಕ್ರಿಯೇಟ್ ಮಾಡಿಕೊಂಡಿದ್ದರು. ಇದನ್ನು ನಂಬಿದ ಉದ್ಯಮಿ ಗೋವಿಂದ ಪೂಜಾರಿ ಅವರಿಗೆ ಟಿಕೆಟ್ ಕೊಡಿಸುವ ಭರವಸೆ ನೀಡಿದ ಚೈತ್ರಾ ಕುಂದಾಪುರ ಹಣ ಪಡೆದು ವಂಚಿಸಿದ್ದಾರೆ ಎಂದು ತಿಳಿದುಬಂದಿದೆ.