Home Business Big Update On 500 Rupees Note: ನಿಮ್ಮ ಕಿಸೆಯಲ್ಲಿರುವ 500 ರ ನೋಟು ಅಸಲಿಯೇ-...

Big Update On 500 Rupees Note: ನಿಮ್ಮ ಕಿಸೆಯಲ್ಲಿರುವ 500 ರ ನೋಟು ಅಸಲಿಯೇ- ನಕಲಿಯೇ ? ಸರಕಾರ ನೀಡಿದೆ ಬಿಗ್ ಅಪ್ಡೇಟ್!

500 Rupees Note

Hindu neighbor gifts plot of land

Hindu neighbour gifts land to Muslim journalist

Big update on 500 rupee note :500 ರೂಪಾಯಿ ನೋಟ್(Big update on 500 rupee note) ಕುರಿತಾಗಿ ಸರ್ಕಾರ ಮಹತ್ವದ ಮಾಹಿತಿ ನೀಡಿದೆ. 500 ರೂಪಾಯಿ ನೋಟು ಕುರಿತಂತೆ ಕೆಲವೊಂದು ಮಾಹಿತಿಗಳು ಕಳೆದ ಕೆಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 500 ರೂಪಾಯಿಯ ನಕಲಿ ನೋಟಿನ (500 Rupees Note)ಬಗ್ಗೆ ಮಾಹಿತಿ ನೀಡಲಾಗಿದ್ದು, ಅಸಲಿ ನೋಟನ್ನು ಪತ್ತೆ ಮಾಡುವುದು ಹೇಗೆ ಎಂದು ವಿವರಿಸಲಾಗಿದೆ.

ಕೇಂದ್ರ ಸರ್ಕಾರ (Central Government)ಕಳ್ಳ ನೋಟಿನ ಹರಿವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನೋಟು ಅಮಾನ್ಯಗೊಳಿಸಿದ್ದು ಗೊತ್ತಿರುವ ವಿಷಯವೇ..ಸರ್ಕಾರ ಅದೆಷ್ಟೇ ಕ್ರಮ ಕೈಗೊಂಡರು ಕೂಡ ಕಳ್ಳ ನೋಟು ದಂಧೆ ಎಗ್ಗಿಲ್ಲದೆ ತೆರೆಮರೆಯಲ್ಲಿ ನಡೆಯುತ್ತಿವೆ. ವಂಚಕರು ತಮ್ಮ ಬತ್ತಳಿಕೆಯಿಂದ ಹೊಸ ಹೊಸ ಬ್ರಹ್ಮಾಸ್ತ್ರ ಬಳಸಿ ಕಳ್ಳ ಮಾರ್ಗಗಳನ್ನು ಅನುಸರಿಸಿಕೊಂಡು ತಮ್ಮ ಕೈ ಚಳಕ ತೋರಿಸುತ್ತಲೇ ಇರುತ್ತಾರೆ.

ಕೆಲವು ತಿಂಗಳ ಹಿಂದೆ ಆರ್‌ಬಿಐ 2000 ರೂಪಾಯಿ ನೋಟುಗಳನ್ನು ಹಿಂಪಡೆಯುವ ಕುರಿತಂತೆ ಘೋಷಣೆ ಮಾಡಿದೆ. ಒಂದು ವೇಳೆ, 2000 ರೂ. ಮುಖ ಬೆಲೆಯ ನೋಟಿನ ಚಲಾವಣೆ ನಿಂತು ಹೋದಲ್ಲಿ 500 ರೂಪಾಯಿ ನೋಟು ಭಾರತದ ಅತಿದೊಡ್ಡ ಮುಖಬೆಲೆಯ ನೋಟು ಆಗಲಿದೆ. ಈ ನಡುವೆ ನಕಲಿ ನೋಟುಗಳ ಹಾವಳಿ ಹೆಚ್ಚಾಗುತ್ತಿದೆ. ನಕಲಿ ನೋಟುಗಳನ್ನು ಕಂಡು ಹಿಡಿಯುವುದು ಅಷ್ಟು ಸುಲಭವಲ್ಲ. ನಿಮ್ಮಲ್ಲಿ ಕೂಡ 500 ರ ನೋಟು ಇದ್ದರೆ ಅದು ಅಸಲಿಯೇ ನಕಲಿಯೇ ಎಂದು ಹೀಗೆ ತಿಳಿಯಿರಿ.

500 Rupees Note
Image source: ABP live

ನಕಲಿ 500 ನೋಟು ಗುರುತಿಸುವುದು ಹೇಗೆ? ಎಂಬ ಪ್ರಶ್ನೆ ಸಹಜವಾಗಿ ಸಾಮಾನ್ಯರಲ್ಲಿ ಮೂಡುತ್ತದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ: RBI ಪ್ರಕಾರ, 500 ರೂ. ನೋಟು ಕೆಲವು ಸ್ಥಿರ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ನಿಮ್ಮಲ್ಲಿರುವ 500 ರೂಪಾಯಿ ನೋಟಿನಲ್ಲಿ ಈ ವೈಶಿಷ್ಟ್ಯಗಳ ಪೈಕಿ ಒಂದು ವೈಶಿಷ್ಟ್ಯ ಇಲ್ಲದೆ ಹೋದರೂ ಅದು ನಕಲಿ ನೋಟು ಎನ್ನುವುದನ್ನು ಅರಿತುಕೊಳ್ಳಬೇಕು.

* ನೋಟಿನ ಮೇಲೆ 500ರ್ ನಂಬರ್ ಬರೆದಿರಬೇಕು.
* ಲೆಟೆಂಟ್ ಇಮೇಜ್ ಮೇಲೆ 500 ಸಂಖ್ಯೆಯನ್ನು ಬರೆಯಬೇಕು.
* ನೋಟಿನ ಮೇಲೆ ದೇವನಾಗರಿಯಲ್ಲಿ 500 ಎಂದು ಬರೆಯಬೇಕು.
* ನೋಟಿನ ಮಧ್ಯದಲ್ಲಿ ಮಹಾತ್ಮ ಗಾಂಧಿ ಚಿತ್ರ ಇರಬೇಕು.
* ಸೂಕ್ಷ್ಮ ಅಕ್ಷರಗಳಲ್ಲಿ ಭಾರತ ಮತ್ತು ‘India’ ಎಂದು ಬರೆದಿರಬೇಕು.
* RBI ಲಾಂಛನವು ರಾಜ್ಯಪಾಲರ ಸಹಿ ಮತ್ತು ಮಹಾತ್ಮ ಗಾಂಧಿಯವರ ಭಾವಚಿತ್ರದ ಬಲಭಾಗದಲ್ಲಿರಬೇಕು.
*ಮಹಾತ್ಮ ಗಾಂಧಿ ಚಿತ್ರ ಮತ್ತು 500 ರ ವಾಟರ್‌ಮಾರ್ಕ್ ಇರಬೇಕು.
*ಮೇಲಿನ ಎಡ ಮತ್ತು ಕೆಳಗಿನ ಬಲಭಾಗದಲ್ಲಿರುವ ನಂಬರ್ ಪ್ಯಾನೆಲ್ ಕೂಡಾ ಗಮನಿಸಿ.
* ಕೆಳಗೆ ಬಲಭಾಗದಲ್ಲಿ ಬಣ್ಣ ಬದಲಾಯಿಸುವ ಶಾಯಿಯಲ್ಲಿ ಅಂದರೆ ಹಸಿರಿನಿಂದ ನೀಲಿ ಬಣ್ಣಕ್ಕೆ ತಿರುಗಿವ ಶಾಯಿಯಲ್ಲಿ 500 ಎಂದು ಬರೆದಿರಬೇಕು ಜೊತೆಗೆ ಬಲಭಾಗದಲ್ಲಿ ಅಶೋಕ ಸ್ತಂಭದ ಚಿಹ್ನೆ ಇರಬೇಕು.
ಮೇಲೆ ತಿಳಿಸಿದ ಎಲ್ಲ ಮಾಹಿತಿಗಳು ಇದ್ದರೆ ಮಾತ್ರ 500 ರ ನೋಟು ಅಸಲಿ ಎಂದು ಪರಿಗಣಿಸಹುದಾಗಿದೆ.

ಇದನ್ನೂ ಓದಿ : Kidnap News: ಕೊಡಗಿನಲ್ಲಿ ಬೆಚ್ಚಿ ಬೀಳಿಸುವ ಪ್ರಕರಣ: ಹಿಂದೂ ಹುಡುಗಿಯರ ಕಿಡ್ನಾಪ್: ನಾಲ್ವರು ಮುಸ್ಲಿಂ ಯುವಕರ ಬಂಧನ!