Cleaning Tips: ಬಟ್ಟೆಯಲ್ಲಿ ಆದ ಕಲೆ ಹೋಗ್ತಾ ಇಲ್ವಾ?! ತಿಕ್ಕಿ ತಿಕ್ಕಿ ಸಾಕಾಯ್ತಾ? ಹಾಗಿದ್ರೆ ಜಸ್ಟ್ ಈ ಟಿಪ್ಸ್ ಫಾಲೋ ಮಾಡಿ!

Lifestyle tips to keep your clothes new remove stains from clothes tips

Remove Stains From Clothes: ನಾವು ಉಪಯೋಗಿಸುವ ಬಟ್ಟೆಗಳು ಯಾವಾಗಲೂ ಹೊಸತಾಗಿ ಶುಭ್ರವಾಗಿರಬೇಕೆಂದು ಬಯಸುತ್ತೇವೆ. ಆದರೆ ಬಟ್ಟೆಯ ಮೇಲೆ ಕಲೆ ಎಲ್ಲಿ, ಯಾವ ಸಮಯಕ್ಕೆ, ಹೇಗೆ ಅಂಟಿಕೊಳ್ಳುತ್ತದೆ ಎಂದು ಗೊತ್ತಾಗುವುದಿಲ್ಲ. ಕೆಲವೊಮ್ಮೆ ಎಷ್ಟೇ ಪ್ರಯತ್ನಗಳನ್ನು ಮಾಡಿದರೂ ಬಟ್ಟೆ ಮೇಲಿನ ಕಲೆ ತೆಗೆಯಲು ಮಾತ್ರ ಸಾಧ್ಯವಾಗುವುದಿಲ್ಲ. ಆದ್ರೆ ಈ ಕೆಲವು ಟಿಪ್ಸ್ ಮೂಲಕ ಈಸಿಯಾಗಿ ಬಟ್ಟೆಯಲ್ಲಾದ ಕಲೆಯನ್ನು ರಿಮೂವ್ ಮಾಡಬಹುದು (Remove Stains From Clothes).

ಹೌದು, ನೀವು ಬಟ್ಟೆಗಳನ್ನು ವಾಷಿಂಗ್ ಮೆಷಿನ್ಗೆ ಹಾಕುವ ಮುನ್ನ ಒಳಗಿನಿಂದ ಅದನ್ನು ತಿರುಗಿಸಿ ಹಾಕಿ. ನಿಮ್ಮ ಬಟ್ಟೆಯ ಮೇಲೆ ಪ್ರಿಂಟಿಂಗ್ ಡಿಸೈನ್ಗಳಿದ್ದರೆ ಅವುಗಳಿಗೆ ಹಾನಿ ಆಗುವುದನ್ನು ತಡೆಗಟ್ಟಲು ಈ ರೀತಿ ಮಾಡುವುದು ಉತ್ತಮ.

ವಾಷಿಂಗ್ ಮೆಷಿನ್ ಅನ್ನು ಒಂದೆರಡು ಬಾರಿ ಬಳಸಿದ ನಂತರ ಅದರಲ್ಲಿ ಕೊಳಕು ಸಂಗ್ರಹವಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ನಿಮ್ಮ ವಾಷಿಂಗ್ ಮೆಷಿನ್ನಲ್ಲಿರುವ ಡ್ರಮ್ ಮತ್ತು ಟಬ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರಬೇಕು.

ತುಂಬಾ ಕೊಳಕು ಬಟ್ಟೆಗಳು ಮತ್ತು ಬಣ್ಣ, ಬಣ್ಣದ ಬಟ್ಟೆಗಳನ್ನು ತೊಳೆಯುವ ಮುನ್ನ ಪ್ರತ್ಯೇಕ ಬಕೆಟ್ನಲ್ಲಿ ಹೆಚ್ಚು ಹೊತ್ತು ನೆನೆಸಿ. ನಿಮ್ಮ ವಾಷಿಂಗ್ ಮಷಿನ್ ಇನ್ಲೈನ್ ಸೋಕಿಂಗ್ ತಂತ್ರಜ್ಞಾನವನ್ನು ಹೊಂದಿದ್ದರೆ, ನೀವು ಬಟ್ಟೆಗಳನ್ನು ಪ್ರತ್ಯೇಕವಾಗಿ ನೆನೆಸುವ ಅಗತ್ಯವಿಲ್ಲ.

ಮುಖ್ಯವಾಗಿ ಹೆಚ್ಚು ವಾಷಿಂಗ್ ಪೌಡರ್ ಬಳಸುವುದರಿಂದ ನಿಮ್ಮ ಬಟ್ಟೆಯ ಗುಣಮಟ್ಟ ಕಡಿಮೆಯಾಗಬಹುದು. ನೀವು ಎಷ್ಟು ಬಟ್ಟೆ ತೆಗೆದುಕೊಂಡಿದ್ದೀರಿ ಎಂದು ಲೆಕ್ಕ ಹಾಕಿ ಮತ್ತು ಅದಕ್ಕೆ ತಕ್ಕಷ್ಟು ವಾಷಿಂಗ್ ಪೌಡರ್ ಬಳಸಿ.

ಮುಖ್ಯವಾಗಿ ವಾಷಿಂಗ್ ಮೆಷಿನ್ನಲ್ಲಿ ಒಂದೇ ಬಾರಿಗೆ ಹೆಚ್ಚು ಬಟ್ಟೆಗಳನ್ನು ಲೋಡ್ ಮಾಡಬೇಡಿ. ಯಂತ್ರವು ಯಾವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಅದರ ಬಳಕೆಯ ನಿಯಮಗಳು ಏನೆಂಬುದನ್ನು ತಿಳಿದುಕೊಂಡು ಅದನ್ನು ಸುರಕ್ಷಿತವಾಗಿ ಬಳಸಬೇಕು.

ಇನ್ನು ಚಹಾ-ಕಾಫಿಯ ಕಲೆಗಳನ್ನು ತೆಗೆದುಹಾಕಲು ನೀವು ಬೆಚ್ಚಗಿನ ನೀರಿನ ಸಹಾಯವನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ, ಬಟ್ಟೆಯನ್ನು ಬಿಸಿ ನೀರಿನಲ್ಲಿ ಹಾಕಿ ಹದಿನೈದು ನಿಮಿಷಗಳ ಕಾಲ ಇಡಿ. ನಂತರ ಮೆಷಿನ್ ಹಾಕಿ ತೊಳೆಯಿರಿ.
ಇನ್ನು ಕಾಫಿ ಕಲೆಯನ್ನು ತೆಗೆದುಹಾಕಲು ಕಲೆ ಬಿದ್ದಿರುವ ಜಾಗ ಒದ್ದೆ ಮಾಡಿಕೊಳ್ಳಿ, ನಂತರ ನೀವು ಕೆಲವು ಹನಿ ಬಿಳಿ ವಿನೆಗರ್ ಅನ್ನು ಡಿಟರ್ಜೆಂಟ್‌ ಪುಡಿಯೊಂದಿಗೆ ಕಲೆಯಾಗಿರುವ ಜಾಗದಲ್ಲಿ ಟೂತ್ ಬ್ರಷ್ ಬಳಸಿ ಉಜ್ಜಿದಾಗ ಆ ಗುರುತು ಸಂಪೂರ್ಣವಾಗಿ ಹೊರಟುಹೋಗುತ್ತದೆ.

ಕೆಚಪ್ ಕಲೆ ತೆಗೆಯಲು ನೀವು ತಕ್ಷಣವೇ ಬಟ್ಟೆಯನ್ನು ನೀರಿನಲ್ಲಿ ನೆನೆಸಿ, ಸಾಬೂನಿನಿಂದ ತೊಳೆಯಿರಿ. ಸ್ಪಂಜನ್ನು ಬಳಸಿ ಕಲೆಗಳನ್ನು ಅಳಿಸಿ, ಕಲೆಗಳನ್ನು ತೆಗೆಯಲು ಬೇಕಾದರೆ ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಬಳಸಬಹುದು.

ಎಣ್ಣೆ ಮತ್ತು ಜಿಡ್ಡಿನ ಕಲೆಗಳು ಸುಲಭವಾಗಿ ತೆಗೆಯಲು ನೀವು ನಿಂಬೆ ಮತ್ತು ಉಪ್ಪನ್ನು ಬಳಸಬಹುದು. ಇದಕ್ಕಾಗಿ ಮೊದಲು ನಿಂಬೆಹಣ್ಣನ್ನು ಕತ್ತರಿಸಿ ಅದಕ್ಕೆ ಉಪ್ಪು ಹಾಕಿ ಬಟ್ಟೆಯ ಕಲೆಯ ಮೇಲೆ ಉಜ್ಜಿ. ಇದು ಕೆಲವೇ ನಿಮಿಷಗಳಲ್ಲಿ ಬಟ್ಟೆಯ ಕಲೆಗಳನ್ನು ತೆಗೆದುಹಾಕುತ್ತದೆ.

ಬಟ್ಟೆಯ ಮೇಲೆ ಪಾನ್ ಮಸಾಲಾ ಅಥವಾ ಇತರೆ ಯಾವುದೇ ಕಲೆಗಳಿದ್ದರೆ ಇದಕ್ಕಾಗಿ ಕಲೆಯಾದ ಜಾಗವನ್ನು ಮೊಸರು ಅಥವಾ ಮಜ್ಜಿಗೆಯಲ್ಲಿ ಅದ್ದಿ ಹತ್ತು ನಿಮಿಷ ಹಾಗೆಯೇ ಬಿಡಿ. ಇದರ ನಂತರ ಬಟ್ಟೆಯನ್ನು ಶುದ್ಧ ನೀರಿನಿಂದ ತೊಳೆಯಿರಿ. ಇದು ಬಟ್ಟೆಯಿಂದ ಕಲೆಗಳನ್ನು ತೆಗೆದುಹಾಕುತ್ತದೆ.

ಬಟ್ಟೆಯ ಮೇಲಿನ ಕಲೆಗಳನ್ನು ತೆಗೆದುಹಾಕಲು ಕಾಸ್ಟಿಕ್ ಸೋಡಾವನ್ನು ಸ್ವಲ್ಪ ನೀರಿಗೆ ಸೇರಿಸಿ ಮತ್ತು ಬಟ್ಟೆಯನ್ನು ಹತ್ತು ನಿಮಿಷಗಳ ಕಾಲ ಅದರಲ್ಲಿ ಹಾಕಿಡಿ. ನಂತರ ಅದನ್ನು ಹೊರತೆಗೆದು ಸಾಮಾನ್ಯ ನೀರಿನಿಂದ ತೊಳೆಯಿರಿ.

ಇದನ್ನೂ ಓದಿ: ತಿಂದದ್ದು ಮೈಕ್ರೋವೇವ್ ನಲ್ಲಿ ಬೇಯಿಸಿದ ಬಿಸಿ ತಿಂಡಿ- ಕಂಡದ್ದು ಮಾತ್ರ ಸಾವು !! ಅರೆ ಇದೇನಿದು ವಿಚಿತ್ರ ?

Leave A Reply

Your email address will not be published.