Naga Chaitanya:ನಾಗ ಚೈತನ್ಯಗೆ ಎರಡನೇ ಮದುವೆ? ವಧು ಕೂಡಾ ಫಿಕ್ಸಾ?

Naga Chaitanya: ಟಾಲಿವುಡ್ ತಾರೆಯರಾದ ನಾಗ ಚೈತನ್ಯ(Naga Chaitanya) ಮತ್ತು ಸಮಂತಾ(Samantha Ruth Prabhu) ಜೋಡಿ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಗೊತ್ತಿರುವ ಸಂಗತಿ. ಸುಂದರ ಜೀವನ ನಡೆಸುತ್ತಿದ್ದ ಜೋಡಿಗೆ ಯಾರ ದೃಷ್ಟಿ ತಾಗಿತೋ ಏನೋ? ಇಬ್ಬರ ನಡುವೆ ಮನಸ್ತಾಪ ಭುಗಿಲೆದ್ದು, ಭಿನ್ನಾಭಿಪ್ರಾಯ ಮೂಡಿ ಸಂಬಂಧದಲ್ಲಿ ಬಿರುಕು ಮೂಡಿ ಸುಮಾರು ನಾಲ್ಕು ವರ್ಷಗಳ ದಾಂಪತ್ಯಕ್ಕೆ ಅಂತ್ಯವಾಗಿ 2021 ರಲ್ಲಿ ವಿಚ್ಛೇದನ ಕೂಡ ಆಯಿತು. ವಿಚ್ಛೇದನದ ಬಳಿಕ ಇಬ್ಬರೂ ಕೂಡ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ತಮ್ಮ ವೈವಾಹಿಕ ಜೀವನದಿಂದ ಮತ್ತು ತಮ್ಮ ಸಿನೆಮಾ ಜೀವನದಿಂದ ಭಾರಿ ಸುದ್ದಿಯಲ್ಲಿರುವ ತೆಲುಗಿನ ನಟಿ (Telugu Actress)ನಟಿ ಸಮಂತಾ ಮತ್ತು ನಾಗ ಚೈತನ್ಯ ಜೋಡಿ ಕಳೆದ ವರ್ಷ ತಮ್ಮ ವೈವಾಹಿಕ ಜೀವನದಲ್ಲಾದ ಕೆಲವು ಅಹಿತಕರವಾದ ಘಟನೆಗಳಿಂದ ಬೇಸತ್ತು ಹೋಗಿ ವಿಚ್ಛೇಧನ ಪಡೆದ ಬಳಿಕ ತಮ್ಮ ವೈಯಕ್ತಿಕ ಬದುಕಿನಲ್ಲಿ ಸಂತೋಷ ಕಾಣುತ್ತಿದ್ದಾರೆ.

ಮಜಿಲಿ’ ಚಿತ್ರದಲ್ಲಿ ನಾಗ ಚೈತನ್ಯ ಅವರು ಶೋಬಿತಾಗೆ ಲಿಪ್ ಲಾಕ್ ಮಾಡುವ ಹಸಿ ಬಿಸಿ ದೃಶ್ಯಗಳು ಸಿನೆಮಾದಲ್ಲಿದೆ. ಆದರೆ, ನಟಿ ಸಮಂತಾ ಹಾಗೂ ನಾಗ ಚೈತನ್ಯ ಅವರ ಸಂಬಂಧದಲ್ಲಿ ಬಿರುಕು ಮೂಡಿ ವಿಚ್ಛೇದನಕ್ಕೆ ತಲುಪಿದ ಬಳಿಕ ಈ ರೀತಿಯ ಗಾಳಿ ಸುದ್ದಿಗಳು ಹೆಚ್ಚು ಕೇಳಿ ಬರುತ್ತಿವೆ. ಇತ್ತೀಚೆಗಷ್ಟೇ ನಟಿ ಶೋಭಿತಾ ಧುಲಿಪಾಲ ಮತ್ತು ನಟ ನಾಗ ಚೈತನ್ಯ ಅವರ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ಧಿ ಎಲ್ಲೆಡೆ ಹರಿದಾಡುತ್ತಿತ್ತು. ಮೊದಲಿಂದಲೂ ಈ ಕುರಿತು ಊಹಾಪೋಹಗಳು ಹರಿದಾಡಿದರು ಕೂಡ ತಲೆಕೆಡಿಸಿಕೊಳ್ಳದ ಜೋಡಿ ತಮ್ಮ ಬಗ್ಗೆ ಹರಿದಾಡುತ್ತಿರುವ ವಿಚಾರದ ಕುರಿತಂತೆ ನಟಿ ತೆರೆ ಎಳೆಯುವ ಪಯತ್ನ ಕೂಡ ಮಾಡಿದ್ದಾರೆ.

ಡೇಟಿಂಗ್ ಸುದ್ದಿಯನ್ನು ಶೋಭಿತಾ ನಿರಾಕರಿಸಿದ್ದು, ‘ಸದ್ಯ ನನಗೆ ಒಳ್ಳೆಯ ಸಿನಿಮಾ ಅವಕಾಶಗಳು ಬರುತ್ತಿದ್ದು, ಜೀವನದಲ್ಲಿ ಎಷ್ಟೋ ಒಳ್ಳೆಯ ಅನುಭವಗಳನ್ನು ಬಿಟ್ಟು ಯಾರೋ ಹೇಳಿದರೆಂದು ತಲೆಕೆಡಿಸಿಕೊಳ್ಳುವ ಅವಶ್ಯಕತೆ ತನಗಿಲ್ಲ. ಅವರ ಬಗ್ಗೆ ಚಿಂತಿಸಲು ಕೂಡ ನನಗೆ ಸಮಯವಿಲ್ಲ. ನನ್ನ ಬಗೆಗಿನ ವದಂತಿಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನೇನೂ ತಪ್ಪು ಮಾಡಿಲ್ಲ. ತಪ್ಪಾಗದಿದ್ದಾಗ ಸ್ಪಷ್ಟತೆ ನೀಡುವ ಅಗತ್ಯವೇ ಬರುವುದಿಲ್ಲ. ನನ್ನ ಕೆಲಸವನ್ನು ನಾನು ಶ್ರದ್ಧೆಯಿಂದ ಮಾಡುತ್ತೇನೆ’ ಎಂದು ಶೋಭಿತ ಹೇಳಿಕೊಂಡಿದ್ದಾರೆ.

ಇದೀಗ ನಾಗ ಚೈತನ್ಯ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಜೋರಾಗಿ ಕೇಳಿ ಬರುತ್ತಿವೆ. ವರದಿಗಳ ಪ್ರಕಾರ, ನಾಗಾ ಚೈತನ್ಯ ಅವರ ತಂದೆ ನಾಗಾರ್ಜುನ ಅವರು ಮಗನ ಎರಡನೇ ಮದುವೆಗೆ ಸದ್ದಿಲ್ಲದೆ ತಯಾರಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ನಾಗಾರ್ಜುನರವರು ಈಗಾಗಲೇ ಹುಡುಗಿಯನ್ನು ನೋಡಿದ್ದು, ಉದ್ಯಮಿಯೊಬ್ಬರ ಮಗಳನ್ನು ನಾಗ ಚೈತನ್ಯ ಮದುವೆಯಾಗಲಿದ್ದಾರಂತೆ. ಹುಡುಗಿಯ ಕುಟುಂಬಕ್ಕೂ ಚಿತ್ರರಂಗಕ್ಕೂ ಯಾವುದೇ ರೀತಿಯ ನಂಟಿಲ್ಲ. ಈಗಾಗಲೇ ಮದುವೆಯ ಮಾತುಕತೆ ಎಲ್ಲವೂ ಆಗಿದೆಯಂತೆ. ಆದರೆ, ಈ ಬಗ್ಗೆ ಅಕ್ಕಿನೇನಿ ಅವರ ಕುಟುಂಬದವರು ಏನು ಪ್ರತಿಕ್ರಿಯೆ ನೀಡಿಲ್ಲ. ಒಟ್ಟಿನಲ್ಲಿ ನಾಗ ಚೈತನ್ಯ ಕೈ ಹಿಡಿಯುವ ಅದೃಷ್ಟವಂತೆ ಯಾರು ಎನ್ನುವುದೇ ಸದ್ಯ ಅಭಿಮಾನಿಗಳ ಪಾಲಿಗೆ ಕೌತುಕದ ವಿಚಾರವಾಗಿ ಮಾರ್ಪಟ್ಟಿದೆ.

Leave A Reply

Your email address will not be published.