ವಂಚನೆ ಪ್ರಕರಣ: ಚೈತ್ರಾ ಕುಂದಾಪುರ ಬಾಯಿಯಲ್ಲಿ ನೊರೆ, ಆಸ್ಪತ್ರೆಗೆ ದಾಖಲು ಮಾಡಿದ ಸಿಸಿಬಿ ಪೊಲೀಸರು!!!
Chaitra kundapur cheating case update chaitra kundapur admitted hospital in Bengaluru

chaitra kundapur admitted hospital: ಉದ್ಯಮಿಯೊಬ್ಬರಿಗೆ ವಂಚನೆ ಪ್ರಕರಣದಲ್ಲಿ ಸಂಬಂಧಿಸಿದಂತೆ ಬಂಧಿಯಾಗಿರುವ ಚೈತ್ರಾ ಕುಂದಾಪುರ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಅನಾರೋಗ್ಯದ ಕಾರಣದ ಸಿಸಿಬಿ ಪೊಲೀಸರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ(chaitra kundapur admitted hospital).

ಸ್ಟ್ರೆಚರ್ ತಂದು ಚೈತ್ರಾ ಕುಂದಾಪುರ ಅವರನ್ನ ಆಸ್ಪತ್ರೆ ಸಿಬ್ಬಂದಿ ಕರೆದೊಯ್ದಿದ್ದಾರೆ. ಚೈತ್ರಾ ಕುಂದಾಪುರ ಅವರ ಬಾಯಿಯಲ್ಲಿ ನೊರೆ ಬಂದಿದೆ ಅಂತ ತಿಳಿದು ಬಂದಿದೆ.
ಚೈತ್ರಾ ಕುಂದಾಪುರ ಅವರನ್ನು ಆಸ್ಪತ್ರೆಗೆ ಸಿಬ್ಬಂದಿ ಸ್ಟ್ರೆಚರ್‌ನಲ್ಲಿ ಕೊಂಡೊಯ್ಯುವ ವೀಡಿಯೋ ಲಭ್ಯವಾಗಿದೆ. ಬಾಯಿಯಲ್ಲಿ ನೊರೆ ಬಂದಿದೆ ಎಂದು ತಿಳಿದು ಬಂದಿದೆ. ಸಿಸಿಬಿ ಪೊಲೀಸರು ತಕ್ಷಣಾ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಉದ್ಯಮಿಗೆ ವಂಚನೆ ಎಸಗಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಚೈತ್ರಾ ಕುಂದಾಪುರ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಬೆಳಗ್ಗೆ 8 ಗಂಟೆಯ ವೇಳೆಗೆ ಮಹಿಳಾ ಸಾಂತ್ವನ ಕೇಂದ್ರದಿಂದ ಚೈತ್ರಾಳನ್ನು ಸಿಸಿಬಿ ಕಚೇರಿಗೆ ವಿಚಾರಣೆಗೆ ಕರೆತಂದಿದ್ದಾರೆ. 45 ನಿಮಿಷದ ವಿಚಾರಣೆ ವೇಳೆ ಆಕೆ ಪ್ರಜ್ಞಾಹೀನ ಸ್ಥಿತಿಗೆ ಬಂದು ಕುಸಿದು ಬಿದ್ದಿದ್ದಾಳೆ.
ವಿಚಾರಣೆ ವೇಳೆ ಮೂರ್ಛ ಹೋದ ಚೈತ್ರಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸದ್ಯ ತುರ್ತು ಚಿಕಿತ್ಸಾವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಚೈತ್ರಾ ಬಾಯಿಯಲ್ಲಿ ನೊರೆ ಬಂದ ದೃಶ್ಯ ಸೆರೆಯಾಗಿದೆ. ಈಗ ಬಂದಿರುವ ಮಾಹಿತಿ ಪ್ರಕಾರ ಚೈತ್ರಾ ಮೂರ್ಛ ರೋಗದಿಂದ ಬಳಲುತ್ತಿದ್ದು ವಿಚಾರಣೆ ವೇಳೆ ಪ್ರಜ್ಞೆ ತಪ್ಪಿರುವ ಸಾಧ್ಯತೆಯಿದೆ.