Bathroom Vastu: ನಿಮ್ಮ ಮನೆ ಬಾತ್ ರೂಮ್ ಈ ತರ ಏನಾದ್ರೂ ಇದೆಯಾ? ಹಾಗಿದ್ರೆ ಖಂಡಿತಾ ಆಪತ್ತು ಕಟ್ಟಿಟ್ಟ ಬುತ್ತಿ

bathroom-vastu-choose bathroom colour as per vastu lifestyle tips

Bathroom vastu: ವಾಸ್ತು ಶಾಸ್ತ್ರದಲ್ಲಿ ಮನೆಯ ಅಡುಗೆ ಮನೆ, ದೇವರ ಮನೆ, ಮಲಗುವ ಕೋಣೆಗೆ ಇರುವಂತೆಯೇ ಸ್ನಾನ ಗೃಹದ ಬಗ್ಗೆಯೂ ಕೆಲವು ವಿಷಯಗಳನ್ನು ಉಲ್ಲೇಖಿಸಲಾಗಿದೆ. ವಾಸ್ತು ಪ್ರಕಾರ (Bathroom vastu) , ಮನೆಯಲ್ಲಿ ಸ್ನಾನಗೃಹವಿರುವ ದಿಕ್ಕು ಹಾಗೂ ಸ್ನಾನಗೃಹದಲ್ಲಿರುವ ವಸ್ತುಗಳು ವ್ಯಕ್ತಿಯ ಅದೃಷ್ಟದ ಮೇಲೆ ಬಹಳ ಮಹತ್ವದ ಪರಿಣಾಮವನ್ನು ಬೀರುತ್ತದೆ ಎಂದು ಹೇಳಲಾಗುತ್ತದೆ.

 

ಕೆಲವೊಮ್ಮೆ ವಾಸ್ತು ಸಮಸ್ಯೆಗಳಿಂದ ನಾವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೌಟುಂಬಿಕ, ಆರ್ಥಿಕ ಇನ್ನಿತರ ಅಪಾಯಗಳು ಎದುರಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇಲ್ಲಿ ಬಾತ್ ರೂಮ್ ವಾಸ್ತು ಬಗ್ಗೆ ತಿಳಿಸಲಾಗಿದೆ.

ಬಾತ್ ರೂಂಗೆ ಕೇವಲ ತಿಳಿ ಬಣ್ಣಗಳನ್ನು ಬಳಸಬೇಕು. ಅಂದರೆ ಬಿಳಿ, ಕೆನೆ ಮತ್ತು ಆಕಾಶ ಬಣ್ಣಗಳನ್ನು ಮಾತ್ರ ಬಳಸುವುದು ವಾಸ್ತು ಪ್ರಕಾರ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮುಖ್ಯವಾಗಿ ಸ್ನಾನಗೃಹದ ಗೋಡೆಗಳ ಬಣ್ಣವು ಗಾಢ ನೀಲಿ, ಹಳದಿ, ನೇರಳೆ ಅಥವಾ ಕೆಂಪು ಬಣ್ಣದ್ದಾಗಿರಬಾರದು.

ಇನ್ನು ವಾಸ್ತು ಶಾಸ್ತ್ರದ ಪ್ರಕಾರ ಸ್ನಾನಗೃಹಕ್ಕೆ ಮರದ ಬಾಗಿಲನ್ನು ಬಳಸುವುದು ಒಳ್ಳೆಯದೆಂದು ನಂಬಲಾಗಿದೆ. ನಿಮ್ಮ ಮನೆಯಲ್ಲಿ ಸ್ನಾನಗೃಹವನ್ನು ನಿರ್ಮಿಸುವಾಗ ನೀವು ಮರದ ಬಾಗಿಲನ್ನು ಮಾತ್ರ ಬಳಕೆ ಮಾಡಬೇಕು. ಇದರ ಹೊರತಾಗಿ ನೀವು ಕಬ್ಬಿಣದ ಬಾಗಿಲನ್ನು ಬಳಸಬಾರದು.

ಮುಖ್ಯವಾಗಿ ಬಾತ್ ರೂಂ ಬಾಗಿಲಿನ ಮೇಲೆ ಕಪ್ಪು ಬಣ್ಣವನ್ನು ಬಳಸಬೇಡಿ ಅದು ನಕಾರಾತ್ಮಕತೆಯನ್ನು ಆಕರ್ಷಿಸುತ್ತದೆ. ಅಲ್ಲದೆ, ಯಾವುದೇ ಕಾರಣಕ್ಕೆ ಮುರಿದ ಬಾಗಲನ್ನು ಬಾತ್ ರೂಂ ಗೆ ಬಳಸದಿರಿ. ಇನ್ನು ಮುರಿದ ಗಾಜು ಅಥವಾ ಮತ್ತಿತರ ಮುರಿದ ವಸ್ತುಗಳನ್ನು ಸ್ನಾನಗೃಹದ ಅಟ್ಟದಲ್ಲಿ ಇಟ್ಟಿದ್ದರೂ ಕೂಡ ಮೊದಲು ಅದನ್ನು ಎಸೆದು ಬಿಡಿ.

ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಬಾತ್‌ರೂಮ್‌ನಲ್ಲಿರುವ ಮಗ್ ಮತ್ತು ಬಕೆಟ್‌ಗಳನ್ನು ನೀವು ಕಪ್ಪು ಉಣ್ಣೆಬಟ್ಟೆ, ಕಂದು ಮತ್ತು ನೇರಳೆ ಬಣ್ಣದ ಮಗ್ ಮತ್ತು ಬಕೆಟ್ ಗಳನ್ನು ಬಳಸಬಾರದು.

ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಬಾತ್ ರೂಂ ನಲ್ಲಿ ನೀವು ನೀಲಿ ಬಣ್ಣದ ಮಗ್ ಗಳು ಮತ್ತು ಬಕೆಟ್ ಗಳನ್ನು ಬಳಸಬೇಕು. ವಾಸ್ತು ಪ್ರಕಾರ ನೀಲಿ ಬಣ್ಣವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮತ್ತು ಅದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಉತ್ಪಾದಿಸುತ್ತದೆ.

ಸಾಮಾನ್ಯವಾಗಿ ಕೆಲವು ಮನೆಗಳಲ್ಲಿ ಬಕೆಟ್ ಅನ್ನು ಖಾಲಿಯಾಗಿಡುವ ಅಭ್ಯಾಸ ಇರುತ್ತದೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ಸ್ನಾನಗೃಹದಲ್ಲಿರುವ ಖಾಲಿ ಬಕೆಟ್ ನಕಾರಾತ್ಮಕತೆ ಜೊತೆಗೆ ದುರಾದೃಷ್ಟವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ತಪ್ಪಿಸಲು ಇಂದಿನಿಂದಲೇ ನಿಮ್ಮ ಮನೆಯ ಬಾತ್ ರೂಂನಲ್ಲಿ ಖಾಲಿ ಬಕೆಟ್ ಇಡುವುದನ್ನು ತಪ್ಪಿಸಿ.

ಕೆಲವರ ಸ್ನಾನಗೃಹದಲ್ಲಿ ನೀರಿನ ಟ್ಯಾಪ್ ಸೋರುವುದನ್ನು ಕಾಣಬಹುದು. ಇದು ಟ್ಯಾಪ್ ದೋಷದಿಂದ ಆದರೂ ಸದಾ ಮನೆಯಲ್ಲಿ ನೀರು ತೊಟ್ಟಿಕ್ಕುವುದರಿಂದ ವಾಸ್ತು ದೋಷಕ್ಕೆ ಕಾರಣವಾಗಬಹುದು. ಹಾಗಾಗಿ, ನಿಮ್ಮ ಮನೆಯಲ್ಲಿಯೂ ಈ ಸಮಸ್ಯೆ ಇದ್ದರೆ ಮೊದಲು ಅದನ್ನು ಸರಿಪಡಿಸಿ.

ವಾಸ್ತು ಶಾಸ್ತ್ರದ ಪ್ರಕಾರ, ಸ್ನಾನಗೃಹದಲ್ಲಿ ಸದಾ ಒದ್ದೆ ಬಟ್ಟೆಗಳನ್ನು ಇಡುವುದನ್ನೂ ಕೂಡ ನಿಷೇಧಿಸಲಾಗಿದೆ. ಕಾರಣ, ಸದಾ ಮೂಲೆಯಲ್ಲಿಡುವ ಒದ್ದೆ ಬಟ್ಟೆಗಳು ನಕಾರಾತ್ಮಕ ಶಕ್ತಿಯನ್ನು ತರುತ್ತವೆ. ನೀವೂ ಸಹ ಮನೆಯ ಬಾತ್ ರೂಂನಲ್ಲಿ ಒದ್ದೆ ಬಟ್ಟೆಗಳನ್ನು ಇಡುವ ಅಭ್ಯಾಸ ಹೊಂದಿದ್ದರೆ ಇಂದೇ ಈ ಅಭ್ಯಾಸವನ್ನು ಬಿಡಿ.

ಇನ್ನು ನಿಮ್ಮ ಮನೆಯ ಬಾತ್ ರೂಂ ನ ವಾಶ್ ಬೇಸಿನ್ ಬಗ್ಗೆ ಕೂಡ ನೀವು ಕಾಳಜಿ ವಹಿಸಬೇಕು. ಏಕೆಂದರೆ ವಾಸ್ತು ಶಾಸ್ತ್ರದಲ್ಲಿ ಇದನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಹೀಗಾಗಿ ವಾಷ್ ಬೇಸಿನ್ ತಿಳಿ ಬಣ್ಣದಲ್ಲಿದ್ದರೆ ಒಳ್ಳೆಯದು. ಮುಖ್ಯವಾಗಿ ನಿಮ್ಮ ಬಾತ್ರೂಮ್ ಮತ್ತು ಟಾಯ್ಲೆಟ್ ಒಟ್ಟಿಗೆ ಇದ್ದರೆ, ಟಾಯ್ಲೆಟ್ ಸೀಟಿನ ಬಣ್ಣ ತಿಳಿ ಬಣ್ಣದಲ್ಲಿರಲಿ.

Leave A Reply

Your email address will not be published.