Aadhaar Card: 5 ವರ್ಷದೊಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸ್ಬೇಕಾ ?! ಹಾಗಿದ್ರೆ ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ !
Aadhaar Card : ಸರಕಾರದ ಮೂಲಭೂತ ಸೌಕರ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಭಾರತದಲ್ಲಿ ಪ್ರತಿಯೊಬ್ಬ ನಾಗರಿಕ ಕೂಡ ಆಧಾರ್ ಕಾರ್ಡ್ (Aadhaar card) ಹೊಂದಿರುವುದು ಅತ್ಯಗತ್ಯವಾಗಿದೆ. ಆಧಾರ್ ಕಾರ್ಡ್ ಅನ್ನು ವ್ಯಕ್ತಿಯ ಗುರುತನ್ನು ಸಂಕೇತಿಸುವ ಮೂಲ ದಾಖಲೆಯಾಗಿ ಕೂಡ ಪರಿಗಣಿಸಲಾಗುತ್ತದೆ. ನೀವು 5 ವರ್ಷದೊಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸ್ಬೇಕಾ ?! ಹಾಗಿದ್ರೆ ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ !
ಮಕ್ಕಳಿಗೆ ಆಧಾರ್ ಪಡೆಯಲು ಈ ವಿಧಾನ ಅನುಸರಿಸಿ :-
• ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ. ಅಥವಾ https://uidai.gov.in/en ಭೇಟಿ ನೀಡುವ ಮೂಲಕ ಸಮೀಪದ ನೋಂದಣಿ ಕೇಂದ್ರದ ಮಾಹಿತಿ ಪಡೆಯಬಹುದು.
• ಆಧಾರ್ ನೋಂದಣಿ ಅರ್ಜಿಯನ್ನು ಭರ್ತಿ ಮಾಡಿ ಹಾಗೂ ಅದರಲ್ಲಿ ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ.
• ಐದು ವರ್ಷದೊಳಗಿನ ಮಕ್ಕಳ ನೋಂದಣಿಗೆ ತಾಯಿ ಅಥವಾ ತಂದೆಯ ಆಧಾರ್ ಮಾಹಿತಿಗಳು ಅಗತ್ಯವಾಗಿ ಬೇಕಿರುತ್ತದೆ.
• ನೋಂದಣಿ ಕೇಂದ್ರದಲ್ಲಿ ಮಗುವಿನ ಫೋಟೋ ತೆಗೆಯಲಾಗುತ್ತದೆ.
• ಮಗುವಿನ ಜನನ ಪ್ರಮಾಣಪತ್ರ ಅಥವಾ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ಪ್ರಮಾಣಪತ್ರದ ಪ್ರತಿಯನ್ನು ಸಲ್ಲಿಸಿ.
• ನೋಂದಣಿ ಸಂಖ್ಯೆಯನ್ನು ಒಳಗೊಂಡಿರುವ ಸ್ವೀಕೃತಿ ಸ್ಲಿಪ್ ಅನ್ನು ಆಧಾರ್ ಎಕ್ಸಿಕ್ಯುಟಿವ್ ನೀಡುತ್ತಾರೆ.
• ಆಧಾರ್ ಕಾರ್ಡ್ ತಯಾರಾಗಿದೆಯೇ ಎಂಬುದನ್ನು ಅದರ ಸ್ಟೇಟಸ್ ಚೆಕ್ ಮಾಡಲು ನೋಂದಣಿ ಸಂಖ್ಯೆಯನ್ನು ಬಳಸಬಹುದು.
• ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದೀರಿ.
• ಅರ್ಜಿ ಪ್ರಕ್ರಿಯೆ ಮುಂದುವರಿದ ಬಳಿಕ ನೀವು ಯುಐಡಿಎಐ ಅಧಿಕೃತ ವೆಬ್ ಸೈಟ್ ನಿಂದ ನಿಮ್ಮ ಮಗುವಿನ ಆಧಾರ್ ಕಾರ್ಡ್ ಡಿಜಿಟಲ್ ಪ್ರತಿಯನ್ನು ಡೌನ್ ಲೋಡ್ ಮಾಡಬಹುದಾಗಿದೆ.
ಅಂದಹಾಗೆ, ಐದು ವರ್ಷದೊಳಗಿನ ಮಕ್ಕಳ ಆಧಾರ್ ಕಾರ್ಡ್ ನೀಲಿ ಬಣ್ಣದಲ್ಲಿರುತ್ತದೆ. ಇದನ್ನು ಬಾಲ್ ಆಧಾರ್ ಎಂದು ಕರೆಯಲಾಗುತ್ತದೆ. ಐದು ವರ್ಷದ ಬಳಿಕ ಆಧಾರ್ ನವೀಕರಿಸಬೇಕು. ಮತ್ತೆ ಮಕ್ಕಳಿಗೆ 15 ವರ್ಷವಾಗ್ತಿದ್ದಂತೆ ಆಧಾರ್ ನವೀಕರಣ ಮಾಡಬೇಕು.