Reliance Scholarship 2023: ವಿದ್ಯಾರ್ಥಿಗಳೇ ಗಮನಿಸಿ, ರಿಲಯನ್ಸ್ ಫೌಂಡೇಶನ್ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ! ನಿಮಗೆ ಸಿಗಲಿದೆ 2 ಲಕ್ಷ ರೂಪಾಯಿ: ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 15 ಕೊನೆಯ ದಿನ!

Reliance Foundation Scholarships 2023 :ವಿದ್ಯಾರ್ಥಿಗಳ( Students) ಶಿಕ್ಷಣಕ್ಕೆ(Education)ನೆರವಾಗುವ ನಿಟ್ಟಿನಲ್ಲಿ ಎಸ್ ಬಿಐ, ಹೆಚ್‌ಡಿಎಫ್‌ಸಿ ಬ್ಯಾಂಕ್ ಗಳು ಹಾಗೆ ಇನ್ನೂ ಕೆಲವು ಶಿಕ್ಷಣ ಸಂಸ್ಥೆಗಳು ಸ್ಕಾಲರ್‌ಶಿಪ್‌(Scholarship )ಮೂಲಕ ಮಕ್ಕಳ ಓದುವ ಕನಸಿಗೆ ಆಸರೆಯಾಗುತ್ತಿದೆ.ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ರಿಲಯನ್ಸ್‌ ಕಂಪನಿಯು ಕಳೆದ 25 ವರ್ಷಗಳಿಂದ ನೀಡುತ್ತಾ ಬಂದಿರುವ ರಿಲಾಯನ್ಸ್‌ ಫೌಂಡೇಷನ್‌ ಸ್ಕಾಲರ್‌ಶಿಪ್‌ಗೆ ಇದೀಗ ಪ್ರಸಕ್ತ 2023-24ನೇ ಸಾಲಿನ ಅಂಡರ್‌ ಗ್ರಾಜುಯೇಟ್‌ ಪ್ರೋಗ್ರಾಮ್‌ಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಂದ (Reliance Foundation Scholarships 2023)ಅರ್ಜಿ ಆಹ್ವಾನ ಮಾಡಲಾಗಿದೆ.

 

ರಿಲಾಯನ್ಸ್‌ ಫೌಂಡೇಷನ್‌ ಸ್ಕಾಲರ್‌ಶಿಪ್‌ಗೆ ಅಂಡರ್‌ ಗ್ರಾಜುಯೇಟ್ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದ್ದು ವಿದ್ಯಾರ್ಥಿಗಳ ಹೆಚ್ಚಿನ ಅಧ್ಯಯನಕ್ಕೆ ನೆರವಾಗುವ ನಿಟ್ಟಿನಲ್ಲಿ ಪ್ರತಿ ವಿದ್ಯಾರ್ಥಿಗಳಿಗೆ 2 ಲಕ್ಷ ರೂ ಸ್ಕಾಲರ್‌ಶಿಪ್‌ ನೀಡುವ ಉದ್ದೇಶವನ್ನು ಒಳಗೊಂಡಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅಕ್ಟೋಬರ್ 15, 2023 ಕೊನೆಯ ದಿನವಾಗಿದೆ.5000 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಮೆರಿಟ್ ಕಮ್ ಮೀನ್ಸ್‌ ಮಾನದಂಡದ ಆಧಾರದಲ್ಲಿ ಸ್ಕಾಲರ್‌ಶಿಪ್‌ ನೀಡಲು ತೀರ್ಮಾನ ಮಾಡಲಾಗಿದೆ.

 

ಯಾರೆಲ್ಲ ಈ ಸ್ಕಾಲರ್ಶಿಪ್ ಪಡೆಯಲು ಅರ್ಜಿ ಸಲ್ಲಿಸಬಹುದು? ಅರ್ಹತೆಗಳು ಏನು?

# ವಾರ್ಷಿಕ. 2.5 ಲಕ್ಷಕ್ಕಿಂತ ಕಡಿಮೆ ಕುಟುಂಬ ಆದಾಯ ಹೊಂದಿರುವ ವಿದ್ಯಾರ್ಥಿಗಳಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ.

# ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.

# ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯರಾಗಿರಬೇಕು.

# ದ್ವಿತೀಯ ಪಿಯುಸಿಯಲ್ಲಿ ಶೇಕಡ.60 ಅಂಕಗಳೊಂದಿಗೆ ಪಾಸ್ ಆಗಿದ್ದು, ರೆಗ್ಯುಲರ್ ತರಗತಿ ಮುಕ್ಕನ್ಡಿಗ್ರಿ ಕೋರ್ಸ್‌ಗಳಿಗೆ ಪ್ರವೇಶ ಪಡೆದಿರಬೇಕು.

 

ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಆಪ್ಟಿಟ್ಯೂಡ್ ಟೆಸ್ಟ್‌ ನಡೆಸಲಾಗುತ್ತದೆ.ರಿಲಾಯನ್ಸ್‌ ಫೌಂಡೇಷನ್‌ ಸ್ಕಾಲರ್‌ಶಿಪ್‌ ಪಡೆಯಲು ಅರ್ಜಿ ಸಲ್ಲಿಸಿದ ಎಲ್ಲ ಅಭ್ಯರ್ಥಿಗಳು ಕಡ್ಡಾಯವಾಗಿ ಆಪ್ಟಿಟ್ಯೂಡ್ ಟೆಸ್ಟ್‌ ಅನ್ನು ಪಾಸ್‌ ಮಾಡಬೇಕಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಪೂರ್ಣ ಪದವಿ ಮುಗಿಯುವವರೆಗೆ ರೂ.2,00,000 ನೀಡಲಾಗುತ್ತದೆ.

 

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಹೀಗಿವೆ:

*ಪಾಸ್‌ಪೋರ್ಟ್‌ ಅಳತೆ ಭಾವಚಿತ್ರ

*ವಿಳಾಸದ ಗುರುತಿನ ಚೀಟಿ.

*ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಅಂಕಪಟ್ಟಿ.

* ಪ್ರಸ್ತುತ ಪ್ರಥಮ ವರ್ಷದ ಡಿಗ್ರಿಗೆ ಪ್ರವೇಶ ಪಡೆದ ದಾಖಲೆ.

* ಆದಾಯ ಪ್ರಮಾಣ ಪತ್ರ

* ಅಂಗವಿಕಲರಾಗಿದ್ದಲ್ಲಿ ಪ್ರಮಾಣ ಪತ್ರ.

 

ಅರ್ಜಿ ಸಲ್ಲಿಸುವುದು ಹೇಗೆ?

ಮೊದಲಿಗೆ, Apply Now ಲಿಂಕ್ ಕ್ಲಿಕ್ ಮಾಡಬೇಕು. ಆ ಬಳಿಕ ಓಪನ್ ಆದ ಪೇಜ್‌ನಲ್ಲಿ ಕೇಳಲಾದ ಅಗತ್ಯ ಮಾಹಿತಿಗಳನ್ನು ನೀಡಬೇಕು. ಎಲ್ಲ ಮಾಹಿತಿ ನೀಡಿದ ಬಳಿಕ ‘Submit’ ಎಂದಿರುವಲ್ಲಿ ಕ್ಲಿಕ್ ಮಾಡಿದರೆ, ಅರ್ಜಿ ಸಲ್ಲಿಕೆಯಾಗುತ್ತದೆ. ಈ ಸ್ಕಾಲರ್ಶಿಪ್ ಪಡೆಯಲು ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಕ್ಟೋಬರ್ 15 ರ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

 

ಯಾರು ಅರ್ಜಿ ಸಲ್ಲಿಸುವಂತಿಲ್ಲ ?

ಪದವಿಯನ್ನು ಎರಡನೇ ವರ್ಷದಲ್ಲಿ / 3ನೇ ವರ್ಷದಲ್ಲಿ ಓದುತ್ತಿರುವವರು ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ. ಆನ್‌ಲೈನ್‌ ಮೂಲಕ, ದೂರ ಶಿಕ್ಷಣದ ಮೂಲಕ, ಅಥವಾ ಪೂರ್ಣಾವಧಿ ಹೊರತುಪಡಿಸಿ ಇನ್ನಿತರ ಯಾವುದೇ ಮಾರ್ಗದಲ್ಲಿ ಡಿಗ್ರಿ ಓದುತ್ತಿರುವವರು ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಎಸ್ಎಸ್‌ಎಲ್‌ಸಿ ನಂತರ ಡಿಪ್ಲೊಮ ಓದಿರುವವರು ಕೂಡ ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ.

Leave A Reply

Your email address will not be published.