Preetam gouda: BJP-JDS ಮೈತ್ರಿ ಎಫೆಕ್ಟ್- ಬಿಜೆಪಿಯ ಮೊದಲ ವಿಕೆಟ್ ಪತನ ?! ಪ್ರಬಲ ನಾಯಕನ ಹೇಳಿಕೆಗೆ ನಲುಗಿದ ಕಮಲ

Political news Hassan farmer MLA Pritam Gouda joining Congress

Preetam gouda: ಲೋಕಸಮರದಲ್ಲಿ ಕನಿಷ್ಠ 20 ಸ್ಥಾನಗಳನ್ನ ಗೆಲ್ಲುವ ಟಾರ್ಗೆಟ್‌ ಹಾಕಿಕೊಂಡಿರುವ ಕಾಂಗ್ರೆಸ್‌(Congress) ಗೆ ಠಕ್ಕರ್‌ ಕೊಡಲು ಬಿಜೆಪಿ ಹಾಗೂ ಜೆಡಿಎಸ್‌(BJP-JDS) ಮುಂದಾಗಿವೆ. ಈ ನಿಟ್ಟಿನಲ್ಲಿ ಎಲಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆ ಚುನಾವಣೆಗೆ ಸಿದ್ಧತೆ ಆರಂಭಿಸಿವೆ. ಆದರೆ ಈ ನಡುವೆ ಮೈತ್ರಿ ಕುರಿತು ಎರಡೂ ಪಕ್ಷಗಳಲ್ಲಿ ಭಾರೀ ಅಪಸ್ವರ ಕೇಳಿಬರುತ್ತಿದ್ದು ಇದರ ಮೊದಲ ಎಫೆಕ್ಟ್ ಬಿಜೆಪಿಗೆ ಆಗುವಂತೆ ಕಾಣುತ್ತಿದೆ.

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಕುರಿತ ಮಾತುಕತೆಗಳು ನಡೆಯುತ್ತಿವೆ. ಎರಡೂ ಪಕ್ಷಗಳ ನಾಯಕರ ದೆಹಲಿ ಓಡಾಟವೂ ಚುರುಕಾಗಿದೆ. ಜೆಡಿಎಸ್ ಮೈತ್ರಿಯನ್ನು ಅಧಿಕೃತಗೊಳಿಸಿದರೆ ಬಿಜೆಪಿ ಇನ್ನೂ ಈ ಬಗ್ಗೆ ಹಿಂದೆ ಮುಂದೆ ಯೋಚಿಸುತ್ತಿದೆ. ಆದರೆ ಈ ನಡುವೆ ಬಿಜೆಪಿ ಒಳಗೆ ಮಹತ್ವದ ಬೆಳವಣಿಗೆ ಆಗಿದ್ದು, ಅನೇಕ ನಾಯಕರು ಮೈತ್ರಿ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಪ್ರಭಾವದಿಂದ ಬಿಜೆಪಿಯ ಮೊದಲ ವಿಕೆಟ್ ಪತನವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದ್ದು ಹಾಸನದ ಮಾಜಿ ಬಿಜೆಪಿ ಶಾಸಕ, ಜೆಡಿಎಸ್ ನ ಬದ್ಧ ವೈರಿ ಪ್ರೀತಮ್ ಗೌಡ(Preetam gouda) ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ಸುಳಿವನ್ನು ನೀಡಿದ್ದಾರೆ ಎನ್ನಲಾಗಿದೆ.

Preetam gouda

ಹೌದು, ಮೊದಲಿಗೆ ಮೈತ್ರಿ ಕುರಿತು ಹಿಂದೇಟು ತೋರಿದ, ಸಿಟಿ ರವಿ ಸಿ.ಟಿ ರವಿ ಪರಮಾಪ್ತ ಬಳಗದಲ್ಲೇ ಗುರುತಿಸಿಕೊಂಡಿದ್ದ ಮಾಜಿ ಶಾಸಕ ಹಾಸನದ ಪ್ರೀತಂಗೌಡ ಬಿಜೆಪಿ ಹಾಗು ಜೆಡಿಎಸ್‌ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ರಾಜ್ಯದಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ ವಿಚಾರದ ಬಗ್ಗೆ ಬಹಿರಂಗವಾಗಿ ಮಾತನಾಡಿರುವ ಪ್ರೀತಂಗೌಡ, ಕಾಂಗ್ರೆಸ್ ಹಾಗು ಒಕ್ಕಲಿಗರ ಪರ ಬ್ಯಾಟಿಂಗ್ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ.ಸುರೇಶ್ ಅವರನ್ನ ಸೋಲಿಸಲು, ನಾನು (ಯೋಗೇಶ್ವರ್‌) ಕುಮಾರಸ್ವಾಮಿ ಒಂದಾಗ್ತೇವೆ ಅಂತಾ ಪಾಪ ನಮ್ಮ ಪಕ್ಷದ ಲೀಡರೇ ಮಾತಾಡಿದ್ದಾರೆ. ನಾಲ್ಕು ತಿಂಗಳ ಹಿಂದೆ ನೀವು ಕುಮಾರಸ್ವಾಮಿ ವಿರುದ್ಧ ಚುನಾವಣೆ ಮಾಡಿದ್ರಿ. ನಿಮ್ಮನ್ನ ನಂಬಿಕೊಂಡ ಕಾರ್ಯಕರ್ತರಿದ್ದಾರೆ. ಆ ಕಾರ್ಯಕರ್ತರನ್ನ ಬಿಟ್ಟು, ಈಗ ಸುರೇಶ್ ಅವರನ್ನ ಸೋಲಿಸೋದಕ್ಕೆ ನಾನು (ಯೋಗೇಶ್ವರ್‌) ಕುಮಾರಸ್ವಾಮಿ ಒಂದಾಗ್ತೇವೆ ಅಂದ್ರೆ, ಮುಂದಿನ ಚುನಾವಣೆಯಲ್ಲಿ ನಿಮ್ಮ ಜೊತೆ ಯಾರು ನಿಲ್ತಾರೆ ಎಂದು ಪ್ರಶ್ನೆ ಮಾಡುವ ಮೂಲಕ ಸ್ವಪಕ್ಷದ ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಏನಂದರು ಪ್ರೀತಮ್ ಗೌಡ?
ಬಿಜೆಪಿ – ಜೆಡಿಎಸ್‌ ಮೈತ್ರಿ ಬಗ್ಗೆ ಎಲ್ಲೋ ಕೂತ್ಕೊಂಡು ಯಾವುದೋ ಲೆಕ್ಕಾಚಾರ ಮಾಡುವ ಮ್ಯಾಥ್ಸ್‌ ವರ್ಕ್‌ ಆಗಲ್ಲ. ಜೆಡಿಎಸ್‌ಗೆ ಸ್ವಲ್ಪ ಒಳ್ಳೇದಾಗಬಹುದು. ಜೆಡಿಎಸ್‌ಗೆ ಸೀಟ್ ಬರುತ್ತೆ ಹಾಗಾಗಿ ಮೈತ್ರಿ‌ ಮಾಡಿಕೊಳ್ಳೋಣ ಅಂತಾ ಹೇಳಿದ್ರೆ ಹೇಗೆ..? ನಾಲ್ಕು ತಿಂಗಳ‌ ಹಿಂದೆ ಬಂದು ನಮ್ಮ ವಿರುದ್ಧ ಚುನಾವಣೆ ಮಾಡಿದ್ರಿ, ಈಗ ಬಿಜೆಪಿಯವರೆಲ್ಲಾ ನಮಗೆ ಓಟ್ ಹಾಕ್ತಾರೆ ಅಂತಾ ಯೋಚನೆ ಮಾಡಿದ್ರೆ ಸರೀನಾ..? ರಾಜಕಾರಣ ಮ್ಯಾಥ್‌ ಮೆಟಿಕ್ಸ್ ಅಲ್ಲ, ಕೆಮಿಸ್ಟ್ರಿ ಅನ್ನೋದು ನನಗಿಂತ ಹೆಚ್ಚಾಗಿ ಅವರಿಗೆ ಗೊತ್ತಿದೆ. ಆ ಕೆಮಿಸ್ಟ್ರಿ ಯಾವುದೇ ಕಾರಣಕ್ಕೂ ಹಾಸನದಲ್ಲಿ ಮಾತ್ರ ನಡೆಯಲ್ಲ. ಇದೀಗ ಬಿಜೆಪಿ ಕಾರ್ಯಕರ್ತರನ್ನ ಬಂದು ವೋಟ್ ಹಾಕಿ ಅಂತಾ ಕೇಳೋ ಮನಸ್ಥಿತಿ ಹೇಗೆ ಬರುತ್ತೆ ಎಂದು ಕಿಚಾಯಿಸಿದ್ದಾರೆ. ನಾನು ಬಿಜೆಪಿಯ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ, ಜೆಡಿಎಸ್ ಪಕ್ಷ ಉಳಿಸೋದಕ್ಕೆ ನಾವ್ಯಾಕೆ ಸಹಕಾರ ಮಾಡಬೇಕು. ಯಾವುದೇ ಕಾರಣಕ್ಕೂ ಆಗಲ್ಲ ಎಂದಿದ್ದಾರೆ. ಈ ಮೂಲಕ ಕಾಂಗ್ರೆಸ್‌ ಬಾಗಿಲು ತಟ್ಟುತ್ತಿದ್ದಾರೆ.

ಅಂದಹಾಗೆ ಜೆಡಿಎಸ್ ತವರು ಹಾಸನದಲ್ಲಿಯೇ ಕಳೆದ ಬಿಜೆಪಿ ಸರ್ಕಾರ ಇದ್ದಾಗ ಪ್ರೀತಮ್ ಗೌಡ ಅವರು ಹಾಸನದಲ್ಲಿ ಬಿಜೆಪಿ ಶಾಸಕರಾಗಿದ್ದರು. ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವುದರೊಂದಿಗೆ ದಳಪತಿಗ ಕೋಟೆಯನ್ನು ಛಿದ್ರ ಮಾಡಿದ್ದರು. ಆದರೆ ಈ ಆಟ ಈ ಸಲ ನಡೆಯಲಿಲ್ಲ ಕಳೆದ ಚುನಾವಣೆಯಲ್ಲಿ ಜೆಡಿಎಸ್ ಮತ್ತೆ ಗೆಲುವು ಸಾದಿಸಿ ತನ್ನ ಕೊಟೆಯನ್ನು ಮತ್ತೆ ಸ್ಥಾಪಿಸಿ ಪ್ರೀತಮ್ ಅವರನ್ನು ಹೀನಾಯವಾಗಿ ಸೋಲಿಸಿತ್ತು.

ಇದನ್ನೂ ಓದಿ: Chaitra kundapura: ಚೈತ್ರಾ ಕುಂದಾಪುರ ಬಿಜೆಪಿ ಟಿಕೆಟ್ ವಂಚನೆ ಪ್ರಕರಣ: ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಕಟ್ಟಿಂಗ್ ಶಾಪ್ ಮಾಲಿಕ !!

Leave A Reply

Your email address will not be published.