Madrasas Education: ಇನ್ಮುಂದೆ ಮದರಸಾಗಳಲ್ಲಿ ಅರೇಬಿಕ್ ಜೊತೆಗೆ ಸಂಸ್ಕೃತ ಕಲಿಕೆ ಕಡ್ಡಾಯ !! ಘೋಷಣೆ ಮಾಡಿದ್ದು ಯಾರು ?
India news Sanskrit to be taught in madrasas
Madrasas Education News: ಬಡತನದ ಹಿನ್ನೆಲೆಯ ಮಕ್ಕಳು ಮತ್ತು ಅನಾಥರು ಮದರಸಾಗಳಿಗೆ ಹೋಗುತ್ತಾರೆ. ಅವರಿಗೆ ಸಾಂಪ್ರದಾಯಿಕವಾಗಿ ಕೇವಲ ಅರೇಬಿಕ್ ಮತ್ತು ಕುರಾನ್ ಕಲಿಸಲಾಗುತ್ತದೆ. ಇಂತಹ ಹಿನ್ನೆಲೆಯ ಮಕ್ಕಳಿಗೆ ಅವಕಾಶ ಸಿಕ್ಕರೆ ಉತ್ತಮ ಸಾಧನೆ ಮಾಡಬಹುದು. ಈ ಹಿನ್ನೆಲೆ ಮದರಸಾಗಳ ಆಧುನೀಕರಣ ಯೋಜನೆ ಪ್ರಕಾರ ಎನ್‌ಸಿಇಆರ್‌ಟಿ ಪಠ್ಯಕ್ರಮವನ್ನು ಜಾರಿಗೆ ತರಲಾಗುತ್ತಿದ್ದು, ಉತ್ತರಾಖಂಡದಲ್ಲಿ ವಕ್ಫ್ ಬೋರ್ಡ್ (Uttarakhand Waqf Board) ಅಧೀನದಲ್ಲಿರುವ 117 ಮದರಸಾಗಳಲ್ಲಿ ವಿಜ್ಞಾನ, ಗಣಿತ, ಅರೇಬಿಕ್ ಜತೆಗೆ ಸಂಸ್ಕೃತವನ್ನೂ ಹೇಳಿಕೊಡಲಾಗುವುದು ಎಂದು ವಕ್ಫ್ ಬೋರ್ಡ್ ಚೇರ್‌ಮನ್ ಶಾಬಾದ್ ಶಾಮ್ಸ್ ಹೇಳಿದ್ದಾರೆ.
ಸದ್ಯ ಇದಕ್ಕಾಗಿ ಮಂಡಳಿಯು ಸಂಸ್ಕೃತ ಮತ್ತು ಅರೇಬಿಕ್ ಎರಡಕ್ಕೂ ಶಿಕ್ಷಕರನ್ನು ನೇಮಿಸುತ್ತದೆ ಈ ಮದರಸಾಗಳಲ್ಲಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಪಠ್ಯಕ್ರಮವನ್ನು (Madrasas Education News) ಜಾರಿಗೆ ತರುವುದಾಗಿ ಶಾಮ್ಸ್ ಹೇಳಿದರು.
ನಾವು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರೀತಿಸಬೇಕು ಮತ್ತು ಅದನ್ನು ಗೌರವಿಸಬೇಕು. ನಾವು ಮದರಸಾಗಳಲ್ಲಿ ಸಂಸ್ಕೃತ ಮತ್ತು ಅರೇಬಿಕ್ ಎರಡಕ್ಕೂ ಶಿಕ್ಷಕರನ್ನು ನೇಮಿಸುತ್ತೇವೆ. ಇದರಿಂದ ಅವರು ನಮ್ಮ ಸಂಸ್ಕೃತಿಯನ್ನು ಕಲಿಯಬಹುದು. ಮದರಸಾ ವಿದ್ಯಾರ್ಥಿಗಳು ಸಂಸ್ಕೃತವನ್ನು ಕಡ್ಡಾಯವಾಗಿ ಕಲಿಯಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ಎಲ್ಲ ಸಹಾಯವನ್ನು ಸರ್ಕಾರ ನೀಡಲಿದೆ ಎಂದು ರಾಜ್ಯದ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ” ಎಂದು ಅವರು ಹೇಳಿದರು
ಮದರಸಾಗಳಲ್ಲಿ ಕುರಾನ್ ಮತ್ತು ಹದೀಸ್ ಬೋಧನೆ ಮುಗಿದ ನಂತರ, ಬೆಳಿಗ್ಗೆ 8.30 ರಿಂದ, ಆಧುನಿಕ ಶಿಕ್ಷಣ ಆಧಾರಿತ ತರಗತಿಗಳು ಮಧ್ಯಾಹ್ನ 2 ರವರೆಗೆ ನಡೆಯುತ್ತವೆ. ಮದರಸಾಗಳ ಆಧುನೀಕರಣದ ಒಟ್ಟು ಯೋಜನೆಯಲ್ಲಿ ಅಧ್ಯಯನ ಬೆಂಚ್‌ಗಳು ಮತ್ತು ಸಮವಸ್ತ್ರಗಳ ಪರಿಚಯದಂತಹ ಮೂಲಸೌಕರ್ಯಗಳ ಉನ್ನತೀಕರಣವೂ ಒಳಗೊಂಡಿದೆ ಎಂದು ತಿಳಿಸಲಾಗಿದೆ.