Sharan pampwell: ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಯಾಕೆ ? ಸ್ಪೋಟಕ ಸತ್ಯ ಹೊರ ಹಾಕಿದ ಹಿಂದೂ ಮುಖಂಡ ಶರಣ್ ಪಂಪ್‌ವೆಲ್
Hijab controversy that prevented non believers from trading in the temple says Hindu leader sharan pumpwell
Sharan pumpwell: ದೇಶದ ರಾಜಕೀಯದಲ್ಲಿ ಸನಾತನ ಧರ್ಮ ಹಾಗೂ ಹಿಂದೂ ಧರ್ಮದ ವಿಚಾರವಾಗಿ ಅನೇಕ ಚರ್ಚೆಗಳು ನಡೆಯುತ್ತಿವೆ. ಅಂತೆಯೇ ರಾಜ್ಯದ ಕರಾವಳಿಯಲ್ಲಿ ಈಗ ಹಿಂದೂ ದೇವಾಲಯದ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅಥವಾ ಅನ್ಯ ಧರ್ಮೀಯ ವ್ಯಾಪಾರಿಗಳಿಗೆ ಅವಕಾಶ ಇಲ್ಲ ಎಂಬ ವಿಚಾರ ಭಾರೀ ಚರ್ಚೆಯಾಗುತ್ತಿದೆ. ಈ ನಿಟ್ಟಿನಲ್ಲಿ ಒಂದು ಸಂಘವೂ ಕೂಡ ಉದ್ಘಾಟನೆಗೊಂಡಿದ್ದು ತನ್ನ ಕಾರ್ಯ ಪ್ರವೃತ್ತಿಗಾಗಿ ಸಜ್ಜಾಗಿದೆ. ಹಾಗಿದ್ರೆ ಈ ಒಂದು ಪ್ರಬಲವಾದ ನಿರ್ಧಾರ ಯಾಕೆ ಬಂತು, ಇಂತಹ ಮಹತ್ವದ ಬದಲಾವಣೆ ಆಗಲು ಕಾರಣವೇನು ಎಂಬುದರ ಬಗ್ಗೆ ಕರಾವಳಿ ಹಿಂದೂ ಮುಖಂಡರಾದಂತಹ ಶರಣ್ ಪಂಪ್ ವೆಲ್(Sharan pumpwell) ಅವರು ಸ್ಪೋಟಕ ಹೇಳಿದ್ದಾರೆ.
ಕಳೆದ ಎರಡು ವರ್ಷ ರಾಜ್ಯದಲ್ಲಿ ಧಾರ್ಮಿಕ ವ್ಯಾಪಾರಿ ಧರ್ಮ ದಂಗಲ್ ಭಾರೀ ವಿವಾದ ಸೃಷ್ಟಿಸಿತ್ತು. ಕರಾವಳಿಯಲ್ಲಿ ಆರಂಭವಾದ ಈ ವಿವಾದ ರಾಜ್ಯಾದ್ಯಂತ ಹಬ್ಬುವ ಮೂಲಕ ಮತ್ತಷ್ಟು ಬಿಸಿಯೇರಿತ್ತು. ದೇವಸ್ಥಾನಗಳ ಜಾತ್ರೆಯ ಹೊತ್ತಲ್ಲಿ ಅನ್ಯ ಧರ್ಮಿಯರಿಗೆ ವ್ಯಾಪಾರ ನಿಷೇಧ ಅನ್ನೋ ಬ್ಯಾನರ್ ಹಾಕುವ ಮೂಲಕ ಹಿಂದೂ ಸಂಘಟನೆಗಳು ವಿವಾದ ಎಬ್ಬಿಸಿದ್ದವು. ಇದಕ್ಕಾಗಿ ಸಂಘವೂ ಹುಟ್ಟಿಕೊಂಡಿದ್ದು ಹಿಂದೂ ದೇವಸ್ಥಾನಗಳಲ್ಲಿ ಹಿಂದೂಗಳೇ
ವ್ಯಾಪಾರ ಮಾಡಬೇಕು ಎಂಬ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘ ಅಸ್ತಿತ್ವಕ್ಕೆ ಬಂದಿದೆ. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಂಘಟನೆ ಅಧಿಕೃತವಾಗಿ ಲೋಕಾರ್ಪಣೆಗೊಂಡಿದ್ದು, ಹಿಂದೂ ದೇವಸ್ಥಾನಗಳಲ್ಲಿ ಹಿಂದೂಗಳು ಮಾತ್ರವೇ ವ್ಯಾಪಾರ ಮಾಡಬೇಕು. ಈ ನಿಟ್ಟಿನಲ್ಲಿ ನಿಮ್ಮ ಜೊತೆ ನಾನಿದ್ದೇನೆ” ಎಂದು ವ್ಯಾಪಾರಿಗಳಿಗೆ ಭರವಸೆ ನೀಡಿದ್ದಾರೆ. ಈ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶರಣ್ ಪಂಪ್ ವೆಲ್ ಅವರು ಹಿಂದೂಗಳು ಇಂತಹ ಮಹತ್ವದ ನಿರ್ಧಾರ ತಾಳಲು ಕಾರಣ ಏನೆಂದು ತಿಳಿಸಿದ್ದಾರೆ.
ಹೌದು, ಸಂಘದ ಉದ್ಘಾಟನೆ ವೇಳೆ ಮಾತನಾಡಿದ ವಿಶ್ವ ಹಿಂದೂ ಪರಿಷತ್‌ನ ರಾಜ್ಯ ಸಂಚಾಲಕ ಶರಣ್ ಪಂಪ್‌ವೆಲ್ ಎರಡು ಮೂರು ವರ್ಷಗಳ ಹಿಂದೆ ನಮ್ಮ ಜಿಲ್ಲೆ, ರಾಜ್ಯದಲ್ಲಿ ಈ ರೀತಿಯ ವಾತಾವರಣ ಇರಲಿಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಭೇದಭಾವವಿಲ್ಲದೆ ಎಲ್ಲರೂ ಎಲ್ಲ ಕಡೆ ವ್ಯಾಪಾರ ಮಾಡುತ್ತಿದ್ದರು. ಆದರೆ ಶಾಲಾ ಕಾಲೇಜುಗಳಲ್ಲಿ ಪ್ರಾರಂಭವಾದ ಹಿಜಬ್ ಗಲಾಟೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿತು. ಹಿಜಾಬ್ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಬಂದ್ ಕರೆ ಕೊಟ್ಟಾಗ ಹಾಲು , ಮೆಡಿಕಲ್ ಶಾಪ್, ಮೀನು ವ್ಯಾಪಾರ ಮುಚ್ಚಿತು. ಅಲ್ಲದೆ ಕರಾವಳಿಯಲ್ಲಿ ಎಷ್ಟೇ ಪ್ರತಿಭಟನೆ ಬಂದ್ ನಡೆದರೂ ಮಂಗಳೂರಿನ ದಕ್ಕೆಯಲ್ಲಿ ಮೀನು ವ್ಯಾಪಾರ ನಿರಾತಂಕವಾಗಿ ನಡೆಯುತ್ತಿತ್ತು, ಆದರೆ ಹಿಜಾಬ್ ವಿವಾದದ ಸಂದರ್ಭದಲ್ಲಿ ದಕ್ಕೆಯಲ್ಲಿ ಮೀನು ವ್ಯಾಪಾರ ಬಂದ್ ಮಾಡಲಾಗಿತ್ತು, ಇದು ಹಿಂದೂ ಗಳು ಎಚ್ಚೆತ್ತುಕೊಳ್ಳಲು ಕಾರಣವಾಗಿದ್ದು ಎಂದು ತಿಳಿಸಿದ್ದಾರೆ.
ಇಷ್ಟೇ ಅಲ್ಲದೆ ಅದರ ಬಳಿಕ ದೇವಸ್ಥಾನದ ಬಳಿ ಹಿಂದುಗಳು ಅಲ್ಲದವರಿಗೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡುವುದಿಲ್ಲ ಎಂಬ ಸಂದೇಶವನ್ನು ಹಿಂದುಗಳು ನೀಡಿದರು. ದೇವಸ್ಥಾನದ ಆಡಳಿತ ಮಂಡಳಿ ಈ ನಿರ್ಧಾರ ಮಾಡಿದರು. ಆ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘ ಹುಟ್ಟಿಕೊಂಡಿದೆ ಎಂದರು. ನಾವು ಮುಸಲ್ಮಾನರ ವಿರೋಧಿಗಳಲ್ಲ. ಆದರೆ ಯಾರಾದರೂ ಹಿಂದೂ ವ್ಯಾಪಾರಸ್ಥರಿಗೆ ಅಂಗಡಿ ಹಾಕುವುದಕ್ಕೆ ಅಡ್ಡಿಪಡಿಸಿದರೆ ರಕ್ಷಣೆಗೆ ವಿಶ್ವಹಿಂದೂ ಪರಿಷತ್, ಬಜರಂಗ ದಳದವರು ಇದ್ದಾರೆ ಎಂದು ಹೇಳಿದರು.
ಹಿಂದೂ ವ್ಯಾಪಾರಸ್ಥರಿಗೆ ಠಕ್ಕರ್:
ಈ ಹಿಂದೆ ಕರಾವಳಿಯ ಹಲವು ಜಾತ್ರಾ ಮಹೋತ್ಸವಗಳಲ್ಲಿ ಹಿಂದೂ ವ್ಯಾಪರಸ್ಥರಿಗೆ ಮಾತ್ರ ಅವಕಾಶ ಎಂಬ ಬ್ಯಾನರ್ ಅಳವಡಿಸಿದ ವೇಳೆ ಹಿಂದೂ ವ್ಯಾಪಾರಸ್ಥರ ಸಂಘಕ್ಕೆ ಠಕ್ಕರ್ ಕೊಡುವ ಕೊಡುವ ಸಲುವಾಗಿ ‘ಜಾತ್ರಾ’ (ದೇವಸ್ಥಾನಗಳ ಜಾತ್ರೆ) ವರ್ತಕರ ಸಮನ್ವಯ ಸಮಿತಿ ಅಸ್ತಿತ್ವಕ್ಕೆ ಬಂದಿತ್ತು. ಈ ಸಂಘಟನೆಯಲ್ಲಿ ಹಿಂದೂ ,ಮುಸ್ಲಿಂ ಕ್ರೈಸ್ತ ವ್ಯಾಪಾರಸ್ಥರು ಒಳಗೊಂಡಿದ್ದರು. ಈ ಸಂಘಟನೆ ಜಾತ್ರಾ ಮಹೋತ್ಸವದಲ್ಲಿ ಎಲ್ಲಾ ವರ್ಗದವರಿಗೂ ಅವಕಾಶ ನೀಡಲು ಆಗ್ರಹಿಸಿತ್ತು
ಹಿಂದೂ ದೇವಸ್ಥಾನಗಳಲ್ಲಿ ಹಿಂದೂಗಳೇ
ವ್ಯಾಪಾರ ಮಾಡಬೇಕು ಎಂಬ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘ ಅಸ್ತಿತ್ವಕ್ಕೆ ಬಂದಿದೆ. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಂಘಟನೆ ಅಧಿಕೃತವಾಗಿ ಲೋಕಾರ್ಪಣೆಗೊಂಡಿದ್ದು, ಹಿಂದೂ ದೇವಸ್ಥಾನಗಳಲ್ಲಿ ಹಿಂದೂಗಳು ಮಾತ್ರವೇ ವ್ಯಾಪಾರ ಮಾಡಬೇಕು. ಈ ನಿಟ್ಟಿನಲ್ಲಿ ನಿಮ್ಮ ಜೊತೆ ನಾನಿದ್ದೇನೆ” ಎಂದು ವ್ಯಾಪಾರಿಗಳಿಗೆ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: POK: ಪಾಕ್ ಆಕ್ರಮಿತ ಕಾಶ್ಮೀರ ಭಾರದಲ್ಲಿ ವಿಲೀನ !! ಏನಿದು ಸ್ಪೋಟಕ ಸುದ್ದಿ?