Dr. G parameshwar: ಚೈತ್ರಾ ಕುಂದಾಪುರ ಪ್ರಕರಣಕ್ಕೂ ಇಂದಿರಾ ಕ್ಯಾಂಟೀನ್ ಬಿಲ್ ಬಾಕಿಗೂ ಏನು ಸಂಬಂಧ? ಗೃಹ ಸಚಿವ ಪರಮೇಶ್ವರ್ ಕೊಟ್ರು ಬಿಗ್ ಅಪ್ಡೇಟ್ !!
Dr. G parameshwar: ಉದ್ಯಮಿಗೆ ಟಿಕೆಟ್ ಕೊಡಿಸುತ್ತೇನೆ ಎಂದು ವಂಚಿಸಿ ಸುಮಾರು ಏಳು ಕೋಟಿ ರೂಪಾಯಿಗಳನ್ನು ಕೊಳ್ಳೆ ಹೊಡೆದಿರುವ ಚೈತ್ರಾ ಕುಂದಾಪುರ(Chaitra kundapura) ಮತ್ತು ಆಕೆಯ ಗ್ಯಾಂಗ್ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸದ್ಯ ಹತ್ತು ದಿನ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ವಿಚಾರಣೆ ವೇಳೆ ಜೀಪಿನಲ್ಲಿ ಬಂದಿಳಿದ ಚೈತ್ರ ಕುಂದಾಪುರಳು ಮಾಧ್ಯಮಗಳ ಮುಂದೆ ಸ್ವಾಮೀಜಿ ಬಂದನ ಆಗಲಿ ಎಲ್ಲಾ ಸತ್ಯ ಬರುತ್ತದೆ. ಇಂದಿರಾ ಕ್ಯಾಂಟೀನ್ ಬಿಲ್ಬಾಕಿ ಇದೆ. ಹೀಗಾಗಿ ಷಡ್ಯಂತ್ರ ಮಾಡಲಾಗಿದೆ. ಸ್ವಾಮಿಜಿ ಸಿಕ್ಕರೆ ದೊಡ್ಡ ದೊಡವರ ಹೆಸರು ಹೊರಬೀಳಲಿದೆ ಎಂದಿದ್ದರು. ಎಲ್ಲಾ ಓಕೆ, ಆದ್ರೆ ಈ ಇಂದಿರಾ ಕ್ಯಾಂಟೀನ್ ಬಿಲ್ ಗೂ, ಚೈತ್ರಾ ಕುಂದಾಪುರ ಪ್ರಕರಣಕ್ಕೂ ಏನು ಸಂಬಂಧ ಎಂದು ಎಲ್ಲರೂ ತಲೆಗೆ ಹುಳಬಿಟ್ಟುಕೊಂಡಿದ್ದಾರೆ. ಆದರೀಗ ಈ ಕುರಿತು ಸ್ವತಃ ರಾಜ್ಯ ಗೃಹಸಚಿವರೇ ಸ್ಪಷ್ಟೀಕರಣ ನೀಡಿದ್ದಾರೆ.
ಹೌದು, ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ ಪರಮೇಶ್ವರ್(Dr G parameshwar) ಅವರು ʼʼಇಂದಿರಾ ಕ್ಯಾಂಟಿನ್ ಬಿಲ್ ಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲʼʼ ಎಂದು ತಿಳಿಸಿದರು. ಅಲ್ಲದೆ ʼʼನನಗೆ ಬಂದ ಮಾಹಿತಿ ಪ್ರಕಾರ ಟಿಕೆಟ್ ಕೊಡಿಸುವುದಾಗಿ ಹಣ ಪಡೆದಿದ್ದಾರೆ. 3.5 ಕೋಟಿ ರೂಪಾಯಿ ಹಣ ಪಡೆದಿರುವ ಬಗ್ಗೆ ದೂರು ದಾಖಲಾಗಿದೆ. ಸಿಸಿಬಿ ಪೊಲೀಸರ ತನಿಖೆ ಬಳಿಕ ಉಳಿದ ವಿಚಾರ ಗೊತ್ತಾಗಲಿದೆʼʼ ಎಂದು ಹೇಳಿದರು
ಜೊತೆಗೆ ಸ್ವಾಮಿಜಿ ವಿಚಾರವಾಗಿ ಬಂದ ಪ್ರಶ್ನೆಗೆ ಉತ್ತರಿಸಿದ ಅವರು ʼʼಈ ಕೇಸ್ನಲ್ಲಿ ಸ್ವಾಮೀಜಿ ಭಾಗಿಯಾಗಿದ್ದರೆ. ಅವರ ಬಂಧನವೂ ಆಗುತ್ತೆ. ಯಾರೇ ತಪ್ಪು ಮಾಡಿದರೂ ಕೂಡ ಕಾನೂನಿನಡಿ ಕ್ರಮ ಆಗಲಿದೆ. ಚೈತ್ರಾ ಕುಂದಾಪುರ ಭಾಷಣ ಮತ್ತು ಈ ಪ್ರಕರಣವನ್ನು ತಳಕು ಹಾಕುವುದು ಬೇಡʼʼ ಎಂದರು.
ಇಷ್ಟೇ ಅಲ್ಲದೆ ಚೈತ್ರಾ ಕುಂದಾಪುರ ಆರೋಪಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸ್ಪಷ್ಟನೆ ನೀಡಿದ್ದು ಇಂದಿರಾ ಕ್ಯಾಂಟೀನ್ ಬಹುತೇಕ ಬಿಲ್ ಕ್ಲಿಯರ್ ಮಾಡಲಾಗಿದೆ. ಕೆಲವು ಸಣ್ಣಪುಟ್ಟ ಬಿಲ್ ಬಾಕಿ ಉಳಿಸಿಕೊಂಡಿರಬೇಕು. ಕಾನೂನಾತ್ಮಕವಾಗಿ ಇಂದಿರಾ ಕ್ಯಾಂಟೀನ್ ಬಿಲ್ ಪಾವತಿ ಆಗಿದೆ. ಗುತ್ತಿಗೆದಾರರಿಗೆ ಯಾವುದೇ ರೀತಿಯ ಬಿಲ್ ಬಾಕಿ ಉಳಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.
ಹೇರ್ ಸೆಲೂನ್ನಲ್ಲಿ ರೆಡಿಯಾದ ವಿಶ್ವನಾಥ್ ಜೀ ಪಾತ್ರ: ವಂಚನೆ ಪ್ರಕರಣದಲ್ಲಿ ಪಟ್ಟಣದ ದೊಡ್ಡಪೇಟೆಯೊಂದರಲ್ಲಿನ ಹೇರ್ ಸೆಲೂನ್ನಲ್ಲಿ ಆರ್ಎಸ್ಎಸ್ ಪ್ರಚಾರಕ್ ವಿಶ್ವನಾಥ್ ಜೀ ತರಾ ವ್ಯಕ್ತಿಯ ಪಾತ್ರವನ್ನು ಸೃಷ್ಟಿಸಲು ವ್ಯಕ್ತಿಯನ್ನು ಕರೆ ತಂದ ಹಿನ್ನಲೆಯಲ್ಲಿ ಶಾಪ್ ಅಂಗಡಿಯನ್ನು ಕ್ಲೋಸ್ ಮಾಡುವ ಸಂದರ್ಭದಲ್ಲಿ ಧನರಾಜ್ ಕರೆದುಕೊಂಡ ಬಂದಿದ್ದರಿಂದ ಪ್ರಚಾರಕರ ಪೋಟೊ ತೋರಿಸಿ ಈ ರೀತಿ ರೆಡಿ ಮಾಡುವಂತೆ ಒತ್ತಾಯಿಸಿದ ಬಳಿಕ ಹೇರ್ಕಟ್ ಮಾಡಿ, ಹೇರ್ ಡ್ರೈ ಮಾಡಿ ವಿಶ್ವನಾಥ್ ಜೀ ಪಾತ್ರಕ್ಕೆ ಜೀವ ತುಂಬಿ ಕಳುಹಿಸಿಕೊಟ್ಟಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತಾಡಿದ ಸೆಲೋನ್ ಸಾಪ್ ನ ಮಾಲೀಕ ರಾಮು ಒಂದು ದಿನ 9ಗಂಟೆ ಗೆ ಕಡೂರಿನ ಧನರಾಜ್ ನಮ್ಮ ಅಂಗಡಿಗೆ ಕಸ್ಟಮರ್ , ಅವರ ಜೊತೆಗೆ ಕಳೆದ ನಾಲ್ಕು ತಿಂಗಳ ಹಿಂದೆ ಓರ್ವ ವ್ಯಕ್ತಿ ಕರೆತಂದು , ಒಂದು ಪೋಟೋ ತೋರಿಸಿ ಇದೇ ರೀತಿ ಕಟ್ಟಿಂಗ್ ಮತ್ತು ಹೇರ್ ಡ್ರೈ ಆಗಬೇಕೆಂದು ಹೇಳಿದರು. ಅದೇ ರೀತಿ ಮಾಡಿ ಅವರನ್ನು ರೆಡಿ ಮಾಡಲಾಯಿತು ಎಂದು ತಿಳಿಸಿದ್ದಾರೆ.