7th Pay Commission: ಕೇಂದ್ರ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್! ಮೂರು ಮಹತ್ವದ ಘೋಷಣೆ ಮಾಡಿದ ಸರ್ಕಾರ!

Central Government news 7th pay commission update government announces da hike to forest corporation employees

7th pay commission: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಡಿಎ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. ಕೇಂದ್ರ ನೌಕರರು ಮತ್ತು ಪಿಂಚಣಿದಾರಿಗೆ ಸರಕಾರದಿಂದ (7th Pay Commission Update ) ಸಿಹಿ ಸುದ್ದಿಯೊಂದು ಅತಿ ಶೀಘ್ರದಲ್ಲಿಯೆ ಬರಲಿದೆ. ಸರಕಾರ ಮತ್ತೊಮ್ಮೆ ನೌಕರರ ಖಾತೆಗೆ ಭಾರಿ ಮೊತ್ತವನ್ನು ರವಾನಿಸಲು ಅಣಿಯಾಗಿದೆ.

ಕೆಲ ಬಲ್ಲ ಮೂಲಗಳ ಪ್ರಕಾರ, ಕೆಂದ್ರ ಸರ್ಕಾರವು ಉದ್ಯೋಗಿಗಳ(7th pay commission) ತುಟ್ಟಿಭತ್ಯೆ (DA) ಮತ್ತು ಡಿಯರ್ನೆಸ್ ರಿಲೀಫ್ (DR) ಅನ್ನು ಶೀಘ್ರದಲ್ಲೇ ಘೋಷಿಸುವ ಸಾಧ್ಯತೆಯಿದ್ದು, ಇದರ ನಡುವೆ ಹಿಮಾಚಲ ಸರ್ಕಾರ ತನ್ನ ನೌಕರರಿಗೆ ಮಹತ್ವದ ಘೋಷಣೆ ಮಾಡಿದೆ. . ಹಿಮಾಚಲ ಪ್ರದೇಶ ಸರ್ಕಾರ ಮೂರು ಮಹತ್ವದ ಘೋಷಣೆ ಮಾಡಿದ್ದು, ಹಿಮಾಚಲ ಪ್ರದೇಶ ಸರ್ಕಾರವು ಅರಣ್ಯ ನಿಗಮದ ನೌಕರರಿಗೆ ತುಟ್ಟಿಭತ್ಯೆ ನೀಡಲು ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆಯನ್ನು ನೀಡಿದೆ. ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಜನವರಿ 1, 2022 ರಿಂದ ಅರಣ್ಯ ನಿಗಮದ ನೌಕರರಿಗೆ ಮೂರು ಪ್ರತಿಶತ ತುಟ್ಟಿಭತ್ಯೆ ಹೆಚ್ಚಳಕ್ಕೆ ಅನುಮೋದನೆ ನೀಡಿದ್ದು, ಈ ಏರಿಕೆಯಿಂದ ನೌಕರರ ವೇತನದಲ್ಲಿ ಭಾರೀ ಹೆಚ್ಚಳವಾಗಲಿದೆ.

ಅರಣ್ಯ ನಿಗಮವನ್ನು ಬಲಪಡಿಸಿ ಸ್ವಾವಲಂಬಿ ಮತ್ತು ಲಾಭದಾಯಕ ಸಂಸ್ಥೆಯಾಗಿ ರೂಪಿಸುವ ಸಲುವಾಗಿ ರಾಜ್ಯ ಸರ್ಕಾರ ಸಂಪೂರ್ಣ ಬೆಂಬಲ ನೀಡುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ. ಅರಣ್ಯ ನಿಗಮದಲ್ಲಿ ನೌಕರರ ಕೊರತೆ ನೀಗಿಸುವ ನಿಟ್ಟಿನಲ್ಲಿ 100 ವನ ಮಿತ್ರರನ್ನು ನೇಮಿಸಲಾಗುವುದು ಎಂದ ಹೇಳಿದ್ದಾರೆ. ಹಿಮಾಚಲ ಪ್ರದೇಶ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕರ ಮಂಡಳಿಯ 213 ನೇ ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಸುಖು ಮಹತ್ತರ ಘೋಷಣೆ ಮಾಡಿದ್ದಾರೆ.

ಇದರ ಜೊತೆಗೆ ದಿನಗೂಲಿ ಕಾರ್ಮಿಕರಿಗೂ ಮಹತ್ವದ ಘೋಷಣೆ ಮಾಡಲಾಗಿದ್ದು, ದಿನಗೂಲಿ ಕಾರ್ಮಿಕರಾಗಿ ನಾಲ್ಕು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಿಗಮದ ಅರ್ಹ ಉದ್ಯೋಗಿಗಳ ಸೇವೆಗಳನ್ನು ಕಾಯಂಗೊಳಿಸಲು ಅನುಮೋದನೆ ನೀಡಲಾಗಿದೆ. ತುಟ್ಟಿಭತ್ಯೆ ಜತೆಗೆ ಬೋನಸ್ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. 2022-23ನೇ ಸಾಲಿಗೆ ನಿಗಮದ ನೌಕರರಿಗೆ ಬೋನಸ್ ನೀಡಲು ಆಡಳಿತ ಮಂಡಳಿ ತೀರ್ಮಾನ ಮಾಡಿದ್ದು, ಸುಮಾರು 253 ನೌಕರರಿಗೆ ಈ ಮೂಲಕ ಪ್ರಯೋಜನ ಸಿಗಲಿದೆ.

ಇದನ್ನೂ ಓದಿ: SBI ನಿಂದ ಬೃಹತ್‌ ಸಂಖ್ಯೆಯ ಹುದ್ದೆಗಳಿಗೆ ನೋಟಿಫಿಕೇಶನ್‌! 5000 ಕ್ಲರ್ಕ್‌ ಭರ್ತಿಗೆ ಅಧಿಸೂಚನೆ ಶೀಘ್ರ ಬಿಡುಗಡೆ!!!

Leave A Reply

Your email address will not be published.