World’s Tallest Dog Zeus Passed Away: ಜಗತ್ತಿನ ಅತ್ಯಂತ ಎತ್ತರದ ನಾಯಿ ನಿಧನ!

World's Tallest Dog Zeus Passed Away

World’s Tallest Dog Zeus Passed Away : ಜಗತ್ತಿನಲ್ಲಿ ಅನೇಕ ಪ್ರಾಣಿಗಳು ಮತ್ತು ಮಾನವರು ಕೆಲವು ದಾಖಲೆಗಳನ್ನು ಹೊಂದಿದ್ದಾರೆ. ಜಗತ್ತಿನ ಅತ್ಯಂತ ಎತ್ತರದ ಪ್ರಾಣಿ ಎಂದು ಹೆಗ್ಗಳಿಕೆ ಪಡೆದುಕೊಂಡಿದ್ದ ಜೀಯಸ್‌ ನಿನ್ನೆ ಬೆಳಿಗ್ಗೆ ನಿಧನರಾಗಿದ್ದಾನೆ. 12 ಸೆಪ್ಟೆಂಬರ್ 2023 ರಂದು ಕೊನೆಯುಸಿರೆಳೆಯಿತು. ಬಹಳ ಗಂಭೀರವಾದ ಅನಾರೋಗ್ಯವನ್ನು ಹೊಂದಿದ್ದ ಜೀಯಸ್, ಈ ಕಾರಣದಿಂದಾಗಿ ಅವರು ನಿಧನ ಹೊಂದಿತು. ಹಾಗಾಗಿ ಇಂದು ನಮ್ಮ ನಡುವೆ ವಿಶ್ವದ ಅತಿ ಎತ್ತರದ ನಾಯಿ ನಮ್ಮ ನಡುವೆ ಇಲ್ಲ. ನವೆಂಬರ್‌ಗೆ ಜೀಯಸ್‌ಗೆ ನಾಲ್ಕು ವರ್ಷ ತುಂಬುತ್ತಿತ್ತು ಎಂದು ಹೇಳಲಾಗುತ್ತಿದೆ.

ಜೀಯಸ್‌ ಹೆಸರು ಗಿನ್ನೆಸ್ ವಿಶ್ವ ದಾಖಲೆಗಳಲ್ಲಿಯೂ ಸೇರಿದೆ. 2022 ರಲ್ಲಿ, ಈ ನಾಯಿಯ ಉದ್ದವನ್ನು 1.046 ಮೀಟರ್ (3 ಅಡಿ 5.18 ಇಂಚು) ಎಂದು ಅಳೆಯಲಾಗಿದೆ. ಜಿಯುಸ್ ಮೂಳೆ ಕ್ಯಾನ್ಸರ್ ಎಂಬ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದುದಾಗಿ ಪಶುವೈದ್ಯರು ಹೇಳಿದ್ದಾರೆ. ಅದಕ್ಕಾಗಿ ಈ ಶ್ವಾನ ದೀರ್ಘಕಾಲದವರೆಗೆ ಚಿಕಿತ್ಸೆ ಪಡೆಯುತ್ತಿತ್ತು. ಚಿಕಿತ್ಸೆಯ ಸಮಯದಲ್ಲಿ ಜೀಯುಸ್‌ನ ಬಲಗಾಲನ್ನು ಸಹ ಕತ್ತರಿಸಬೇಕಾಯಿತು. ಆದರೂ ಉಳಿಸಿಕೊಳ್ಳಲಾಗಿಲ್ಲ ಎಂದು ವರದಿಯಾಗಿದೆ.

ವೈದ್ಯರ ಪ್ರಕಾರ, ಜೀಯಸ್ ಚಿಕಿತ್ಸೆ ಸಮಯದಲ್ಲಿ ನ್ಯೂಮೋನಿಯಾ ಕೂಡಾ ಕಾಡಿದ್ದು, ಅದು ರೋಗವನ್ನು ಉಲ್ಭಣಗೊಳಿಸಿತು. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಿಂದ ಈ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ನಲ್ಲಿ, ಅನೇಕ ಬಳಕೆದಾರರು ಜೀಯಸ್‌ಗೆ ಭಾವನಾತ್ಮಕ ಗೌರವವನ್ನು ಸಲ್ಲಿಸುತ್ತಿದ್ದಾರೆ ಮತ್ತು ತಮ್ಮ ದುಃಖವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ನಾಯಿ ಗ್ರೇಟ್ ಡೇನ್ ಜಾತಿಗೆ ಸೇರಿದೆ. ಇದು ಅದರ ದೊಡ್ಡ ಗಾತ್ರಕ್ಕೆ ಹೆಸರುವಾಸಿಯಾಗಿದೆ. ಜೀಯಸ್‌ನ ಮಾಲೀಕನ ಹೆಸರು ಬ್ರಿಟಾನಿ ಡೇವಿಸ್. ಈ ನಾಯಿಯನ್ನು ಅವಳ ಸಹೋದರ ಅವಳಿಗೆ ಉಡುಗೊರೆಯಾಗಿ ನೀಡಿದ್ದಾಗಿ ವರದಿಯಾಗಿದೆ.

Leave A Reply

Your email address will not be published.