World Record: ಈತ 17 ಹೆಂಡಿರು, 96 ಮಕ್ಕಳಿರೋ 77ರ ಕಿಲಾಡಿ ತಾತ !! ಇನ್ನೂ ನಡೀತಿದೆ 18ನೇ ಮದುವೆಯ ತಯಾರಿ ಗೊತ್ತಾ !!
World record 77 year old grandfather has 17 wives 96 children he is now ready for 18th marriage
World Record: ವಿಶ್ವ ದಾಖಲೆಯನ್ನು ಮಾಡುವುದು ಅಷ್ಟು ಸುಲಭದ ಮಾತಲ್ಲ. ವಿಶ್ವ ದಾಖಲೆ (World Record) ಮಾಡಲು ಹಲವರು ತಮ್ಮದೇ ಶೈಲಿಯಲ್ಲಿ ಪ್ರಯತ್ನ ಮಾಡಿ ಯಶಸ್ಸು ಮತ್ತು ಸೋಲು ಕಂಡವರು ಇದ್ದಾರೆ. ಇದೀಗ 77 ವರ್ಷದ ತಾತನೊಬ್ಬ ವಿಶಿಷ್ಟ ದಾಖಲೆಯನ್ನು ನಿರ್ಮಿಸಿದ್ದಾರೆ.
ಹೌದು, ದುಬೈ ನಿವಾಸಿ ಆಗಿರುವ 77 ವರ್ಷದ ಮೊಹಮ್ಮದ್ ಮುರಾದ್ ಅಬ್ದುಲ್ ರೆಹಮಾನ್ ಎಂಬ ತಾತನಿಗೆ ಈಗಾಗಲೇ 17 ಮಂದಿ ಪತ್ನಿಯರು, 96 ಮಂದಿ ಮಕ್ಕಳು ಇದ್ದು, ಈ ಮೂಲಕ ದಾಖಲೆ ನಿರ್ಮಿಸಿದ ‘ಸೂಪರ್ ಡ್ಯಾಡಿ’ಇದೀಗ ಸೆಂಚುರಿ ಹೊಡೆಯಲು 18 ನೇ ಮದುವೆಯಾಗಲು ರೆಡಿಯಾಗಿದ್ದಾರೆ. ಇವರನ್ನು ಜನರು ಈಗ ಸೂಪರ್ ಡ್ಯಾಡಿ ಎಂದು ಕರೆಯುತ್ತಾರೆ. ಯಾಕೆಂದರೆ ರಹಮಾನ್ ಅವರು ವಿಶಿಷ್ಟ ದಾಖಲೆಯನ್ನು ನಿರ್ಮಿಸಿದ್ದಾರೆ.
ಪ್ರಸ್ತುತ ತಾತನ ವಯಸ್ಸು 77 ವರ್ಷ ಅವರು 96 ಮಕ್ಕಳನ್ನು ಹೊಂದಿದ್ದು, ವಿಶ್ವ ದಾಖಲೆಯನ್ನು ನಿರ್ಮಿಸಲು ಹೊರಟಿದ್ದಾರೆ. ಅವರು ಇನ್ನೂ, ಕೇವಲ ನಾಲ್ಕು ಮಕ್ಕಳಿಗೆ ಜನ್ಮ ನೀಡಿದರೆ, ಅವರು 100 ಮಕ್ಕಳನ್ನು ಪಡೆದಂತಾಗುತ್ತದೆ.
ಸದ್ಯ ಮೊಹಮ್ಮದ್ ಮುರಾದ್ ಅಬ್ದುಲ್ ರೆಹಮಾನ್ ತನ್ನ 170 ಪುತ್ರರು ಮತ್ತು ಮೊಮ್ಮಕ್ಕಳೊಂದಿಗೆ ನಗರದ 17 ವಿವಿಧ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಅವರ ಅನೇಕ ಪುತ್ರರು ಸರ್ಕಾರಿ ಕಚೇರಿಗಳಲ್ಲಿ ಹಿರಿಯ ಅಧಿಕಾರಿಗಳಾಗಿದ್ದಾರೆ ಮತ್ತು ಪೊಲೀಸ್ ಇಲಾಖೆಯಲ್ಲಿಯೂ ನೇಮಕಗೊಂಡಿದ್ದಾರೆ. ತಂದೆಯ ಹಿರಿಯ ಮಗನಿಗೆ ಈಗ 56 ವರ್ಷ ಮತ್ತು ಅವರ ಕಿರಿಯ ಮಗಳಿಗೆ ಸುಮಾರು 8 ವರ್ಷ ಎಂದು ಹೇಳಲಾಗಿದೆ.
ಕುತೂಹಲಕಾರಿ ಸಂಗತಿಯೆಂದರೆ, 110 ವರ್ಷಗಳ ಕಾಲ ಬದುಕಿದ್ದ ಅವರ ತಂದೆ ಮುರಾದ್ ಅಬ್ದುಲ್ ರೆಹಮಾನ್ ಕೂಡ ನಾಲ್ಕು ವಿವಾಹಗಳನ್ನು ಹೊಂದಿದ್ದರು. ಮೊಹಮ್ಮದ್ ಮುರಾದ್ ಅಬ್ದುಲ್ ರಹಮಾನ್ ಸೇರಿದಂತೆ ಅವರ ನಾಲ್ವರು ಪತ್ನಿಯರಿಂದ ಒಟ್ಟು 27 ಮಕ್ಕಳು ಜನಿಸಿದ್ದರಂತೆ.
100 ಗುರಿಯನ್ನು ತಲುಪಿದ ನಂತರ ಮದುವೆಯಾಗುವುದನ್ನು ಮತ್ತು ಮಕ್ಕಳನ್ನು ಹೊಂದುವುದನ್ನು ನಿಲ್ಲಿಸುವುದಾಗಿ ಅವರು ಪ್ರತಿಜ್ಞೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಅವರು ದಾಖಲೆ ಮಾಡಲು ಯೋಚಿಸುವ ಹೊತ್ತಿಗೆ, ಅವರ ಇಬ್ಬರು ಮಕ್ಕಳು ಸಹ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಚಾಲೆಂಜ್ ಗಾಗಿ ತಿಂದದ್ದು ಮಸಾಲೆ ಹಾಕಿದ ಖಾರದ ಚಿಪ್ಸ್ !! ತಿಂದ ಕೂಡಲೇ ಹಾರಿಯೊಯ್ತು ಹುಡುಗನ ಪ್ರಾಣ !!