Mobile Addiction: ಮಲಗುವಾಗ ಮೊಬೈಲ್ ವಿಷಯದಲ್ಲಿ ನೀವು ಈ ತಪ್ಪು ಮಾಡುತ್ತೀರಾ ?! ಹಾಗಿದ್ರೆ ಎಚ್ಚರ.. !!
Technology NEWS health news Mobile addiction how far should you keep your mobile while sleeping
Mobile Addiction: ಪ್ರತಿಯೊಂದು ಹಂತದಲ್ಲೂ ಸ್ಮಾರ್ಟ್‌ಫೋನ್ ಜೊತೆಯಲ್ಲಿ ಇರಬೇಕು(Mobile Addiction). ಸ್ಮಾರ್ಟ್‌ಫೋನ್ ಇಲ್ಲದೆ ಯಾವ ಕೆಲಸವೂ ಆಗುವುದಿಲ್ಲ. ಕೆಲವರಿಗೆ ನಿದ್ದೆ ಬರುವವರೆಗೂ ಸ್ಮಾರ್ಟ್ ಫೋನ್ ಬಳಸುವ ಅಭ್ಯಾಸವಿರುತ್ತದೆ. ಆದರೆ ಮೊಬೈಲ್ ಬಳಸುವ ವೇಳೆ ಮಾಡುವ ಕೆಲವೊಂದು ತಪ್ಪುಗಳು, ಜನರನ್ನು ಅಪಾಯಕ್ಕೆ ದೂಡಬಹುದು. ಉದಾಹರಣೆಗೆ ಇತ್ತೀಚೆಗೆ ಹಲವು ಫೋನ್ ಸ್ಫೋಟಗೊಂಡ ಪ್ರಕರಣಗಳು ಬೆಳಕಿಗೆ ಬಂದಿವೆ. ಇಂಥಹ ಘಟನೆಗಳು ಬಳಕೆದಾರರ ತಪ್ಪಿನಿಂದಲೇ ನಡೆಯುತ್ತದೆ.
ಇನ್ನು ಕೆಲವರಿಗೆ ದಿಂಬಿನ ಕೆಳಗೆ ಮೊಬೈಲ್ ಇಟ್ಟು ಮಲಗುವ ಅಭ್ಯಾಸವಿರುತ್ತದೆ. ಹೀಗೆ ಮಾಡುವುದರಿಂದ ದೊಡ್ಡ ಮಟ್ಟದ ಅಪಾಯ ಉಂಟಾಗಬಹುದು. ಮಲಗುವಾಗ ಮೊಬೈಲ್ ಅನ್ನು ಎಷ್ಟು ದೂರ ಇರಬೇಕು ಎಂಬುದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಹತ್ತಿರದಲ್ಲಿ ಮೊಬೈಲ್ ಇಟ್ಟುಕೊಂಡು ಮಲಗುವ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಬನ್ನಿ ಅಂತಹ ಅಪಾಯಗಳು ಯಾವುದೆಂದು ಇಲ್ಲಿ ತಿಳಿಯಿರಿ.
ಮೊಬೈಲ್ ಬಳಕೆ ಕುರಿತು, WHO ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದೆ. ಪ್ಯೂನ ವರದಿಯ ಪ್ರಕಾರ, 90 ಪ್ರತಿಶತ ಹದಿಹರೆಯದವರು ಮತ್ತು 68 ಪ್ರತಿಶತ ವಯಸ್ಕರು ತಮ್ಮ ದಿಂಬಿನ ಪಕ್ಕದಲ್ಲಿ ಮೊಬೈಲ್ ಫೋನ್ ಅನ್ನು ಇಟ್ಟುಕೊಂಡು ಮಲಗುತ್ತಾರೆ.
ಮಾಹಿತಿ ಪ್ರಕಾರ, ಸ್ಮಾರ್ಟ್‌ಫೋನ್
ದಿಂಬಿನ ಕೆಳಗೆ ಮೊಬೈಲ್ ಇಟ್ಟು ಮಲಗುವುದರಿಂದ, ಮೊಬೈಲ್ ಫೋನ್‌ನಿಂದ ಹೊರಬರುವ ವಿಕಿರಣವನ್ನು ತಪ್ಪಿಸಲು ಮಲಗುವ ಸಮಯದಲ್ಲಿ ಸ್ಮಾರ್ಟ್ಫೋನನ್ನು ದೂರವಿಡುವುದು ಉತ್ತಮ. ಸಾಧ್ಯವಾದರೆ, ಮಲಗುವಾಗ ಮೊಬೈಲ್ ಫೋನ್‌ಗಳನ್ನು ಕನಿಷ್ಠ 3 ಅಡಿ ದೂರದಲ್ಲಿಡಿ. ಹೀಗೆ ಮಾಡುವುದರಿಂದ ಮೊಬೈಲ್ ಹೊರಸೂಸುವ ರೇಡಿಯೋ ಫ್ರೀಕ್ವೆನ್ಸಿ ಎಲೆಕ್ಟ್ರೋಮ್ಯಾಗ್ನೆಟಿಕ್ ಶಕ್ತಿ ಕಡಿಮೆಯಾಗುತ್ತದೆ.
WHO, ಮೊಬೈಲ್ ಫೋನ್ ಪಕ್ಕದಲ್ಲಿಟ್ಟು ಮಲಗುವ ಜನರಿಗೆ, ಮೊಬೈಲ್ ಫೋನ್‌ನಿಂದ ಹೊರಬರುವ ವಿಕಿರಣವು ಸ್ನಾಯು ನೋವುಗಳು, ತಲೆನೋವಿಗೆ ದಾರಿ ಮಾಡಿಕೊಡುತ್ತದೆ. ಮೊಬೈಲ್ ಫೋನ್‌ಗಳಿಂದ ಬರುವ ನೀಲಿ ಬೆಳಕು ನಿದ್ರೆಯನ್ನು ಪ್ರಚೋದಿಸುವ ಹಾರ್ಮೋನುಗಳ ಸಮತೋಲನವನ್ನು ಸಹ ಅಡ್ಡಿಪಡಿಸುತ್ತದೆ. ಇದು ನಿದ್ರೆಗೆ ತೊಂದರೆ ಉಂಟುಮಾಡುತ್ತದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಹೋಂ ವರ್ಕ್ ತಪ್ಪಿಸಲು ಬಾಲಕನೊಬ್ಬ ಮಾಡಿದ ಮಾಸ್ಟರ್ ಪ್ಲಾನ್ – ಅದೇನೆಂದು ಕೇಳಿದ್ರೆ ನೀವೇ ಶಾಕ್ !!