Agricultural Land: ಕೃಷಿ ಭೂಮಿಯಲ್ಲಿ ಮನೆ ಕಟ್ಟೋರಿಗೆ ಬಂತು ಹೊಸ ರೂಲ್ಸ್ !! ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್ !

National News new law for those who construct house on agriculture land

Agricultural Land: ಇತ್ತೀಚೆಗೆ ಕೃಷಿ ಭೂಮಿಯಲ್ಲಿ ಹಲವರು ಮನೆ, ಕಟ್ಟಡ ಕಟ್ಟುತ್ತಾರೆ. ಆದರೆ, ಕೃಷಿ ಭೂಮಿಯಲ್ಲಿ (Agricultural Land) ಮನೆ ನಿರ್ಮಾಣ ಮಾಡುವುದಕ್ಕೆ ಅಥವಾ ಇತರ ಕಟ್ಟಡ ನಿರ್ಮಾಣಕ್ಕೆ (Building Construction) ಹಲವು ನಿಯಮಗಳು ಇರುತ್ತವೆ. ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿದ ನಂತರವೇ ನಿಮಗೆ ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಅನುಮತಿ ಸಿಗುತ್ತದೆ. ಇದೀಗ ಕೃಷಿ ಭೂಮಿಯಲ್ಲಿ (Agricultural Land) ಮನೆ ಕಟ್ಟೋರಿಗೆ ಹೊಸ ರೂಲ್ಸ್ ಬಂದಿದೆ. ಏನಪ್ಪಾ ಆ ರೂಲ್ಸ್ ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್!!.

ಕೃಷಿ ಭೂಮಿಯ ಮಾಲೀಕನು ಕೃಷಿ ಜಮೀನಿನಲ್ಲಿ ಮನೆ ಅಥವಾ ಕಟ್ಟಡ ನಿರ್ಮಾಣ ಮಾಡುವ ಹಾಗಿಲ್ಲ. ವಿಶೇಷವಾದ ಪರವಾನಿಗೆ ತೆಗೆದುಕೊಳ್ಳಬೇಕು ಇಲ್ಲವಾದರೆ ಕಟ್ಟಿರುವ ಮನೆಯಲ್ಲಿ ವಾಸ ಮಾಡಲು ಕೂಡ ಸಾಧ್ಯವಾಗುವುದಿಲ್ಲ. ಭೂಮಿಯನ್ನು ಬರಡು ಮಾಡಿ ಅಲ್ಲಿ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಆ ಜಮೀನಿನ ಮಾಲೀಕನಿಗೆ ಕೂಡ ಅಧಿಕಾರವಲ್ಲ.

ಅನಿವಾರ್ಯ ಸಂದರ್ಭದಲ್ಲಿ ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣ ಮಾಡಲು ನಮ್ಮ ದೇಶದಲ್ಲಿ ಕೆಲವು ರಾಜ್ಯಗಳಲ್ಲಿ ಲ್ಯಾಂಡ್ ಕನ್ವರ್ಷನ್ ನಿಯಮ (Land Conversion Rules) ಜಾರಿಯಲ್ಲಿ ಇದೆ. ಇದಕ್ಕೆ ನೀವು ಪ್ರತ್ಯೇಕ ಶುಲ್ಕವನ್ನು ಕೂಡ ಪಾವತಿ ಮಾಡಬೇಕು. ಬಳಿಕ ಗ್ರಾಮ ಪಂಚಾಯಿತಿ ಅಥವಾ ಮುನ್ಸಿಪಾಲಿಟಿಯಲ್ಲಿ ಎನ್ ಓ ಸಿ ಸರ್ಟಿಫಿಕೇಟ್ (NOC Certificate) ಪಡೆದುಕೊಳ್ಳಬೇಕು.

ಕೃಷಿ ಭೂಮಿಯನ್ನು ಮನೆ ಕಟ್ಟುವ ಯೋಗ್ಯ ಭೂಮಿಯನ್ನಾಗಿ ಕನ್ವರ್ಷನ್ ಮಾಡಿಕೊಳ್ಳುವುದಕ್ಕೆ ತಮ್ಮ ಜಮೀನಿನ ಮಾಲೀಕತ್ವದ (Land Ownership) ಪತ್ರವನ್ನು ಸಲ್ಲಿಸಬೇಕು. ಜೊತೆಗೆ ಬೆಳೆಯ ರೆಕಾರ್ಡ್ ಹಾಗೂ ಜಮೀನಿನ ಸರ್ವೆ ನಕ್ಷೆಯನ್ನು ಕೂಡ ನೀಡಬೇಕು. ಜಮೀನಿನಲ್ಲಿ ಅಷ್ಟಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂಬುದರ ಬಗ್ಗೆ ಆದಾಯ ಪ್ರಮಾಣ ಪತ್ರ (Income Certificate) ವನ್ನು ಕೂಡ ಸಲ್ಲಿಸಬೇಕು. ಈ ಎಲ್ಲ ದಾಖಲೆಗಳ ಮೂಲಕ ನೀವು ನಿಮ್ಮ ಕೃಷಿ ಭೂಮಿಯನ್ನು ವಾಸ ಯೋಗ್ಯ ಭೂಮಿಯನ್ನಾಗಿ ಮಾರ್ಪಾಡು ಮಾಡಿಕೊಳ್ಳಬಹುದು. ಹೀಗೆ ಮಾಡಿಕೊಂಡರೆ ಮಾತ್ರ ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣ ಮಾಡುವುದಕ್ಕೆ ಕಾನೂನಿನ ಪರವಾನಿಗೆ ಸಿಗುತ್ತವೆ.

ಇದನ್ನೂ ಓದಿ: ಹೈಪ್ರೊಫೈಲ್‌ ಹನಿಟ್ರ್ಯಾಪ್‌ ಪ್ರಕರಣ; ಮಾಸ್ಟರ್‌ ಮೈಂಡ್‌ ಯುವತಿ ಅರೆಸ್ಟ್‌!

Leave A Reply

Your email address will not be published.