Kerala High Court: ಒಂಟಿಯಾಗಿ ಅಶ್ಲೀಲ ವೀಡಿಯೋ ನೋಡುತ್ತೀರಾ? ಈ ಕುರಿತು ಹೈಕೋರ್ಟ್‌ ಏನು ಹೇಳಿದೆ ಗೊತ್ತೇ?

Kerala news watching pornogrophy on mobile phone is not criminal offence kerala high court

Kerala High Court: ಭಾರತದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ನಿಷೇಧಿಸಲಾಗಿದೆ. ಹಾಗಾದರೆ ಅವುಗಳ ಬಗ್ಗೆ ಆಲೋಚನೆ ಮಾಡುವುದು ಕಾನೂನುಬದ್ಧವೇ? ಕಾನೂನುಬದ್ಧವಾಗಿಲ್ಲದಿದ್ದರೆ ಶಿಕ್ಷೆಗೆ ಅರ್ಹರೇ? ನೋಡಿದವರನ್ನು ಶಿಕ್ಷಿಸಬಹುದೇ? ಇಂತಹ ಹಲವಾರು ಪ್ರಶ್ನೆಗಳಿಗೆ ಕೇರಳ ಹೈಕೋರ್ಟ್‌ ಇತ್ತೀಚೆಗೆ ತೀರ್ಪೊಂದನ್ನು ನೀಡಿದ್ದು, ಅಶ್ಲೀಲ ಚಿತ್ರ ವೀಕ್ಷಣೆ ಮಾಡುವುದು ಅಪರಾಧವೇ ಅಲ್ಲವೇ ಎಂಬುದನ್ನು ಹೇಳಿದೆ.

ಮೌನವಾಗಿ ಪೋರ್ನ್‌ ವೀಕ್ಷಣೆ ಮಾಡುವುದು ಅಪರಾಧವಲ್ಲ ಎಂದು ಕೇರಳ ಹೈಕೋರ್ಟ್‌ ಹೇಳಿದೆ.

ಕೇರಳ ಹೈಕೋರ್ಟ್‌ (Kerala High Court) ವ್ಯಕ್ತಿಯೋರ್ವರ ವಿರುದ್ಧ ದಾಖಲಾದ ಕ್ರಿಮಿನಲ್‌ ಮೊಕದ್ದಮೆಯನ್ನು ರದ್ದುಗೊಳಿಸಿದ್ದು, ಈ ವ್ಯಕ್ತಿ ಮೊಬೈಲ್‌ ಫೋನ್‌ನಲ್ಲಿ ಅಶ್ಲೀಲ ವೀಡಿಯೋಗಳನ್ನು ನೋಡುತ್ತಿದ್ದಾಗ ರಸ್ತೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್‌, ಕೇವಲ ಅಶ್ಲೀಲ ವೀಡಿಯೋಗಳನ್ನು ನೋಡುವುದು ಅಶ್ಲೀಲತೆಯ ಅಡಿಯಲ್ಲಿ ಅಪರಾಧವಾಗುವುದಿಲ್ಲ ಎಂದು ನ್ಯಾಯಮೂರ್ತಿ ಪಿ.ವಿ.ಕುಂಞಕೃಷ್ಣನ್‌ ಹೇಳಿದ್ದಾರೆ.

ಖಾಸಗಿ ಸಮಯದಲ್ಲಿ ಪೋರ್ನ್‌ ವೀಡಿಯೋ ನೋಡುವುದು ಅಪರಾಧದ ವ್ಯಾಪ್ತಿಗೆ ಬರುತ್ತದೆಯೇ? ಈ ಪ್ರಶ್ನೆಗೆ ಸರಳ ಕಾರಣಗಳಿಗಾಗಿ ಅಪರಾಧ ಎಂದು ಘೋಷಿಸಲು ಸಾಧ್ಯವಿಲ್ಲ. ಇದು ಅವರ ವೈಯಕ್ತಿಕ ಆಯ್ಕೆಯಾಗಿದ್ದು, ಇದರಲ್ಲಿ ಹಸ್ತಕ್ಷೇಪ ಮಾಡುವುದು ಖಾಸಗಿತನದಲ್ಲಿ ಹಸ್ತಕ್ಷೇಪ ಮಾಡಿದಂತೆ ಎಂದು ನ್ಯಾಯಾಲಯ ಹೇಳಿದೆ. ಅಶ್ಲೀಲ ಫೋಟೋಗಳನ್ನು ನೋಡುವುದು ತಮ್ಮ ಖಾಸಗಿತನದಲ್ಲಿ ಐಪಿಸಿಯ ಸೆಕ್ಷನ್‌ 292ರ ಅಡಿಯಲ್ಲಿ ಅಪರಾಧವಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Crime: ಅಂಗಡಿಯಲ್ಲಿ ಟೀ ಕುಡಿಯುವಾಗಲೇ ಯುವಕನ ಭೀಕರ ಕೊಲೆ! ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಹತ್ಯೆ!!!

Leave A Reply

Your email address will not be published.