RBI ನಲ್ಲಿ ಬಂಪರ್ ಉದ್ಯೋಗಾವಕಾಶ! 450 ಅಸಿಸ್ಟೆಂಟ್ ಹುದ್ದೆಗಳು, ಅಧಿಸೂಚನೆ ಬಿಡುಗಡೆ!!
RBI Assistant 2023: ಬ್ಯಾಂಕ್ ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳೇ ಗಮನಿಸಿ, ನಿಮಗೊಂದು ಮುಖ್ಯ ಮಾಹಿತಿ ಇಲ್ಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI)ಸಹಾಯಕ ಹುದ್ದೆ 2023ಕ್ಕೆ(RBI Assistant 2023) 450 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.
ಭಾರತೀಯ ರಿಸರ್ವ್ ಬ್ಯಾಂಕ್ ಖಾಲಿಯಿರುವ 450 ಅಸಿಸ್ಟೆಂಟ್ ಹುದ್ದೆಗೆ ಅಧಿಸೂಚನೆ ಹೊರಡಿಸಿದ್ದು, ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 4 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್: rbi.org.in ಭೇಟಿ ನೀಡಿ.
ವಿದ್ಯಾರ್ಹತೆ ಮತ್ತು ಅರ್ಹತಾ ಮಾನದಂಡಗಳು ಹೀಗಿವೆ:
# ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಆಯಾ ಪ್ರದೇಶದ ಭಾಷೆ ತಿಳಿದಿರುವುದು ಕಡ್ಡಾಯವಾಗಿದೆ.
# ನೇಮಕಾತಿ ಕಚೇರಿ ಅಡಿಯಲ್ಲಿ ಬರುವ ರಾಜ್ಯದ ಭಾಷೆಯನ್ನು ಓದಲು, ಬರೆಯಲು, ಮಾತನಾಡಲು ಮತ್ತು ಅರ್ಥ ಮಾಡಿಕೊಳ್ಳಲು ಬಲ್ಲವರಾಗಿರಬೇಕು.
# ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಶೇ 50ರಷ್ಟು ಅಂಕಗಳೊಂದಿಗೆ ಪದವಿ ವ್ಯಾಸಂಗ ಮುಗಿಸಿರುವುದು ಕಡ್ಡಾಯವಾಗಿದೆ.
# ಸೆಪ್ಟೆಂಬರ್ 1, 2023ರ ಒಳಗೆ ಪದವಿ ಪಡೆದಿರುವವರು ಅರ್ಜಿ ಸಲ್ಲಿಸಬಹುದು.
# ಭಾರತದ ಪ್ರಜೆಗಳು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
# 1962 ಜನವರಿ 1ರ ಮೊದಲು ಭಾರತಕ್ಕೆ ಬಂದ ನೇಪಾಳ, ಭೂತಾನ, ಟಿಬೆಟಿಯನ್ ನಿರಾಶ್ರಿತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
# ಎಸ್‌ಸಿ, ಎಸ್‌ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಅಂಕಗಳ ಮಿತಿಯಿಲ್ಲ ಆದರೆ ಸ್ನಾತಕೋತ್ತರ ಪದವಿ ಕಡ್ಡಾಯವಾಗಿದೆ.
# ಮಾಜಿ ಸೈನಿಕರಿಗೆ ಪದವಿ, ಮೆಟ್ರಿಕ್ಯುಲೇಷನ್ ಜೊತೆಗೆ15 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಅನುಭವ ಇರುವುದು ಕಡ್ಡಾಯ.
ಭಾರತದಲ್ಲಿ ಶಾಶ್ವತವಾಗಿ ನೆಲೆಸುವ ಉದ್ದೇಶದಿಂದ ಪಾಕಿಸ್ತಾನ, ಬರ್ಮಾ, ಶ್ರೀಲಂಕಾ, ಪೂರ್ವ ಆಫ್ರಿಕಾದ ಕೀನ್ಯಾ, ಉಗಾಂಡಾ, ಯುನೈಟೆಡ್ ರಿಪಬ್ಲಿಕ್ ಆಫ್ ತಾಂಜಾನಿಯಾ, ಜಾಂಬಿಯಾ, ಮಲಾವಿ, ಜೈರ್, ಇಥಿಯೋಪಿಯಾ ಮತ್ತು ವಿಯೆಟ್ನಾಂನಿಂದ ವಲಸೆ ಬಂದ ಭಾರತೀಯ ಮೂಲದ ವ್ಯಕ್ತಿಗಳು ಕೂಡ ಅರ್ಜಿ ಸಲ್ಲಿಸಬಹುದು. ಈ ಅಭ್ಯರ್ಥಿಗಳು ಭಾರತ ಸರ್ಕಾರ ನೀಡಿದ ಅರ್ಹತಾ ಪ್ರಮಾಣಪತ್ರ ನೀಡಬೇಕಾಗುತ್ತದೆ.
ವಯೋಮಿತಿ
ಸೆಪ್ಟೆಂಬರ್ 1ಕ್ಕೆ ಅನುಗುಣವಾಗಿ ಕನಿಷ್ಠ 20 ವರ್ಷ ಮತ್ತು ಗರಿಷ್ಠ 28 ವರ್ಷ ಆಗಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.1995ರ ಸೆಪ್ಟೆಂಬರ್ 2ರ ನಂತರ ಮತ್ತು 2003ರ ಸೆಪ್ಟೆಂಬರ್ 1ಕ್ಕಿಂತ ಮೊದಲು ಜನಿಸಿದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.ಮೀಸಲಾತಿ ವರ್ಗ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ
ಎಸ್‌ಸಿ, ಎಸ್‌ಟಿ, ಅಂಗವಿಕಲ ಮತ್ತು ಮಾಜಿ ಸೈನಿಕರಿಗೆ ಅರ್ಜಿ ಶುಲ್ಕ 50 ರೂ ಮತ್ತು ಶೇ 18 ಜಿಎಸ್‌ಟಿ ಇರಲಿದೆ. ಸಾಮಾನ್ಯ ವರ್ಗ, ಒಬಿಸಿ ಹಾಗೂ ಇತರೆ ವರ್ಷದವರಿಗೆ 450 ರೂ ಮತ್ತು ಶೇ 18 ಜಿಎಸ್‌ಟಿ ಇರಲಿದೆ.
ಈ ಹುದ್ದೆಗೆ ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಭಾಷಾ ಪ್ರಾವೀಣ್ಯತೆ ಪರೀಕ್ಷೆ (LPT) ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಕ್ಟೋಬರ್ 21 ಮತ್ತು 23 ರಂದು ಈ ಹುದ್ದೆಗೆ ಆನ್‌ಲೈನ್ ಪೂರ್ವಭಾವಿ ಪರೀಕ್ಷೆ ನಿಗದಿ ಮಾಡಲಾಗಿದೆ. ಡಿಸೆಂಬರ್ 2 ರಂದು ಮುಖ್ಯ ಪರೀಕ್ಷೆ ನಡೆಯುವ ಸಂಭವವಿದೆ. ಈ ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್: rbi.org.in ಭೇಟಿ ನೀಡಿ. ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 4 ರ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.