Dress Code: ಇನ್ಮುಂದೆ ಶಾಲಾ – ಕಾಲೇಜುಗಳಲ್ಲಿ ಕಡ್ಡಾಯವಾಗಿ ಹಿಜಾಬ್ ನಿಷೇಧ !! ಕೊನೆಗೂ ಮಹತ್ವದ ಆದೇಶ ಹೊರಡಿಸಿದ ಸರ್ಕಾರ!!

education news ban on hijab in schools colleges Muslim country issues new order

Hijab ban : ರಾಜ್ಯಾದ್ಯಂತ ಶಾಲೆಗಳಲ್ಲಿ ಹಿಜಾಬ್ ವಿಚಾರ ದೊಡ್ದ ಮಟ್ಟದ ಸುದ್ದಿ ಆಗಿದ್ದು ಗೊತ್ತಿರುವ ಸಂಗತಿ. ಇದೀಗ, ಈ ದೇಶದ ಶಾಲೆಗಳಲ್ಲಿ ಬುರ್ಖಾ, ಹಿಜಾಬ್ (Hijab ban), ನಿಖಾಬ್ ಧರಿಸುವುದನ್ನು ನಿಷೇಧ ಹೇರಲಾಗಿದೆ.

ಈಜಿಪ್ಟ್ ಶಾಲೆಗಳಲ್ಲಿ ಸೆಪ್ಟೆಂಬರ್ 30 ರಿಂದ ಮುಂದಿನ ಅಧಿವೇಶನದ ಆರಂಭದಿಂದ ಮುಖ ಮುಚ್ಚುವುದನ್ನು ಅಂದರೆ ಹಿಜಾಬ್ ನಿಷೇಧಿಸುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಕಜಕಿಸ್ತಾನ್, ತಜಿಕಿಸ್ತಾನ್, ಕಿರ್ಗಿಸ್ತಾನ್, ಉಜ್ಬೇಕಿಸ್ತಾನ್ ನಂತಹ ಹಲವಾರು ಮುಸ್ಲಿಂ ಬಹುಸಂಖ್ಯಾತ ದೇಶಗಳು ಈ ಹಿಂದೆಯೇ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಮುಖ ಮುಚ್ಚುವುದನ್ನು ನಿಷೇಧ ಹೇರಿವೆ. ಈಜಿಪ್ಟ್ ನಲ್ಲಿ ಅನೇಕ ವರ್ಷಗಳಿಂದ ಶಾಲೆಗಳಲ್ಲಿ ಹಿಜಾಬ್ ಧರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಈಜಿಪ್ಟ್ನ ಶಿಕ್ಷಣ ಸಚಿವ ರೆಡಾ ಹೆಗಾಜಿ ಸೋಮವಾರ ಶಾಲೆಯಲ್ಲಿ ಹುಡುಗಿಯರು ತಮ್ಮ ಹಿಜಾಬ್ ಧರಿಸಬೇಕೆ ಅಥವಾ ಬೇಡವೇ ಎಂಬ ತೀರ್ಮಾನ ಕೈಗೊಳ್ಳಬೇಕು. ಅವರು ತಮ್ಮ ಕೂದಲನ್ನು ಮುಚ್ಚಲು ಹಿಜಾಬ್ ಧರಿಸಲು ಅವಕಾಶವಿದೆ ಆದರೆ ಅವರು ಮುಖವನ್ನು ಮುಚ್ಚಿಕೊಂಡು ಶಾಲೆಗೆ ಬರಲು ಅವಕಾಶವಿಲ್ಲ ಎಂದು ಸೂಚಿಸಿದ್ದಾರೆ. ಶಿಕ್ಷಣ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ “ಗೋಚರ ಮುಖದ ಸ್ಥಿತಿಯನ್ನು ಉಲ್ಲಂಘಿಸುವ ಯಾವುದೇ ರೀತಿಯ ಹಿಜಾಬ್ ಸ್ವೀಕಾರಾರ್ಹವಲ್ಲ” ಎಂದು ಹೇಳಲಾಗಿದೆ. ಹಿಜಾಬ್ ಸಚಿವಾಲಯ ಮತ್ತು ಸ್ಥಳೀಯ ಶಿಕ್ಷಣ ನಿರ್ದೇಶನಾಲಯ ಆಯ್ಕೆ ಮಾಡಿದ ಬಣ್ಣದಲ್ಲಿರಬೇಕು ಎಂದು ಸೂಚಿಸಿದೆ. ಈಜಿಪ್ಟ್ ನಲ್ಲಿ ಅನೇಕ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು ಈಗಾಗಲೇ ಹಿಜಾಬ್ ಧರಿಸುವುದನ್ನು ನಿಷೇಧ ಹೇರಿವೆ. 2015 ರಲ್ಲಿ, ಕೈರೋ ವಿಶ್ವವಿದ್ಯಾಲಯವು ತನ್ನ ಉದ್ಯೋಗಿಗಳಿಗೆ ನಿಕಾಬ್ ನಿಷೇಧ ಮಾಡಿದೆ. ಇದನ್ನು 2016 ಮತ್ತು 2020 ರಲ್ಲಿ ಈಜಿಪ್ಟ್ ನ್ಯಾಯಾಂಗ ಕೂಡ ಎತ್ತಿಹಿಡಿದಿದೆ.

ಇದನ್ನೂ ಓದಿ: Shocking News: ರೈತರಿಗೆ ಮತ್ತೆ ಬಿಗ್ ಶಾಕ್ !! ಮತ್ತೆ ದುಬಾರಿಯಾದ ರಸಗೊಬ್ಬರ ?!

Leave A Reply

Your email address will not be published.