ಬೆಳ್ತಂಗಡಿ: ರಿಕ್ಷಾ ಹಾಗೂ ಟೆಂಪೊ ನಡುವೆ ರಸ್ತೆ ಅಪಘಾತ ಮೂವರಿಗೆ ಗಂಭೀರ ಗಾಯ
Dakshina Kannada accident news auto and tempo road accident in Belthangadi


Belthangady: ರಿಕ್ಷಾವೊಂದಕ್ಕೆ ಟೆಂಪೊ ಡಿಕ್ಕಿ ಹೊಡೆದ ಘಟನೆ ಬೆಳ್ತಂಗಡಿಯ ಟಿಬಿ ಕ್ರಾಸ್ ಬಳಿ ನಡೆದಿದೆ. ಈ ಘಟನೆಯ ಪರಿಣಾಮ ರಿಕ್ಷಾದ ಡ್ರೈವರ್ ಸಹಿತ ಮೂವರಿಗೆ ಗಾಯಗಳಾಗಿವೆ.


ಬೆಳ್ತಂಗಡಿ( Belthangady) ಕಡೆಯಿಂದ ಉಜಿರೆ ಕಡೆಗೆ ಹೋಗುತಿದ್ದ ರಿಕ್ಷಾವೊಂದಕ್ಕೆ ಹಿಂಬದಿಯಿಂದ ಟೆಂಪೊ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಎದುರಿನಲ್ಲಿ ಚಲಿಸುತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ರಿಕ್ಷಾ ಜಖಂ ಗೊಂಡ ಘಟನೆ ಟಿಬಿ ಕ್ರಾಸ್ ಬಳಿ ನಡೆದಿದೆ.
ಗಾಯಗಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಒಬ್ಬರು ಗಂಭೀರ ಗಾಯಗೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
